ಹರ್ಭಜನ್- ಗೀತಾ ದಂಪತಿ ಹೆಣ್ಣು ಮಗುವಿಗೆ ಹೆಸರು ಸೂಚಿಸಿ!

By: ಕ್ರೀಡಾ ಡೆಸ್ಕ್
Subscribe to Oneindia Kannada

ನವದೆಹಲಿ, ಜುಲೈ 28: ಟೀಂ ಇಂಡಿಯಾ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಬುಧವಾರ(ಜುಲೈ 27) ರಂದು ಹೆಣ್ಣು ಮಗುವಿಗೆ ಅಪ್ಪನಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಲಂಡನ್ನಿನ ಆಸ್ಪತ್ರೆಯೊಂದರಲ್ಲಿ ಹರ್ಭಜನ್ ಅವರ ಪತ್ನಿ ಗೀತಾ ಅವರು ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದಾರೆ.

ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ಗೀತಾ ಬಸ್ರಾ ಅವರ ತಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹರ್ಭಜನ್ ಹಾಗೂ ಗೀತಾ ಇನ್ನೂ ಸಾಮಾಜಿಕ ಜಾಲ ತಾಣಗಳಲ್ಲಿ ಈ ಸಂತಸದ ವಿಷಯವನ್ನು ಹಂಚಿಕೊಂಡಿಲ್ಲ. [ಚಿತ್ರಗಳಲ್ಲಿ: ಗೀತಾ ಬಸ್ರಾಗೆ ಚೆಂದದ ಸೀಮಂತ]

Harbhajan Singh becomes father, wife Geeta Basra gives birth to a baby girl

ಅಕ್ಟೋಬರ್ -ನವೆಂಬರ್ 2015ರಲ್ಲಿ ಹರ್ಭಜನ್ ಹಾಗೂ ಗೀತಾ ಅವರ ಮದುವೆ ವಿಜೃಂಭಣೆಯಿಂದ ನಡೆಸಲಾಗಿತ್ತು. ಕ್ರಿಕೆಟರ್ ಹರ್ಭಜನ್ ಸಿಂಗ್ ಹಾಗೂ ಗೀತಾ ಬಸ್ರಾ ಅವರ ಮದುವೆ ಆರತಕ್ಷತೆ ಸಮಾರಂಭ ಅದ್ದೂರಿಯಾಗಿ ನೆರವೇರಿತ್ತು.

ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಗಣ್ಯಾತಿಗಣ್ಯರು ದಂಪತಿಗಳಿಗೆ ಶುಭ ಹಾರೈಸಿದ್ದರು. ಜೂನ್ ತಿಂಗಳಿನಲ್ಲಿ ಗೀತಾ ಅವರಿಗೆ ಸಂಭ್ರಮದ ಸೀಮಂತ ಕಾರ್ಯಕ್ರಮ ನಡೆದಿತ್ತು. ಮುದ್ದಾದ ಹೆಣ್ಣು ಮಗುವಿಗೊಂದು ಚೆಂದದ ಹೆಸರು ಸೂಚಿಸಿ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Veteran India off-spinner Harbhajan Singh became father on Wednesday (July 27), after his wife Geeta Basra gave birth to a baby girl at a hospital in London.
Please Wait while comments are loading...