#HappyBirthdayDravid ಟ್ವಿಟ್ಟರ್ ನಲ್ಲಿ ಸಕತ್ ಟ್ರೆಂಡಿಂಗ್

Posted By:
Subscribe to Oneindia Kannada

ಬೆಂಗಳೂರು, ಜ.11: ಸುಮಾರು 23,000ಕ್ಕೂ ಅಧಿಕ ರನ್ ಗಳಿಸಿರುವ ಕ್ರಿಕೆಟ್ ಲೋಕದ 'ಜಂಟಲ್ ಮ್ಯಾನ್' 'ದಿ ವಾಲ್' ಆಪದ್ಬಾಂಧವ 'ರಾಹುಲ್ ದ್ರಾವಿಡ್ ಅವರಿಗೆ ಜನವರಿ 11 ರಂದು 43ನೇ ಹುಟ್ಟುಹಬ್ಬದ ಸಂಭ್ರಮ. ಸಾಮಾಜಿಕ ಜಾಲ ತಾಣಗಳಲ್ಲಿ ದ್ರಾವಿಡ್ ಅವರಿಗೆ ಅಭಿಮಾನಿಗಳು, ಕ್ರಿಕೆಟರ್ಸ್ ವಿಶ್ ಮಾಡಿದ್ದಾರೆ. #HappyBirthdayDravid ಟ್ವಿಟ್ಟರ್ ನಲ್ಲಿ ಸಕತ್ ಟ್ರೆಂಡಿಂಗ್ ನಲ್ಲಿದೆ.

1996 ರ ವಿಶ್ವಕಪ್ ನಂತರ ಏಕದಿನ ಕ್ರಿಕೆಟ್ ತಂಡಕ್ಕೆ ವಿನೋದ್ ಕಾಂಬ್ಳಿ ಬದಲಿಗೆ ತಂಡಕ್ಕೆ ಆಯ್ಕೆಯಾದರೂ, ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಗಾಯಾಳು ಸಂಜಯ್ ಮಂಜೇಕ್ರರ್ ಬದಲಿಗೆ ಗಂಗೂಲಿ ಜೊತೆ ಕಣಕ್ಕಿಳಿದಿದ್ದು ದ್ರಾವಿಡ್ ವೃತ್ತಿ ಬದುಕಿನ ಅಪೂರ್ವ ಕ್ಷಣವಾಯಿತು. ಸೌರವ್ ಅವರು ಸತತ ಶತಕ ದಾಖಲೆ ಬರೆದರೆ, ದ್ರಾವಿಡ್ ಅವರು ಸತತ 95 ಹಾಗೂ 84ರನ್ ಗಳಿಸಿ ಎಲ್ಲರ ಗಮನ ಸೆಳೆದರು.[ರಾಹುಲ್ ದ್ರಾವಿಡ್ ಫೇಸ್ ಬುಕ್ಕಿಗೆ ಎಂಟ್ರಿ]

ದ್ರಾವಿಡ್ ಅವರ ಅಸಲಿ ತಾಳ್ಮೆ, ಪ್ರತಿಭೆ ಬೆಳಕಿಗೆ ಬಂದಿದ್ದು, ದಕ್ಷಿಣ ಆಫ್ರಿಕಾ ಸರಣಿಯಲ್ಲಿ 148ರನ್ ಗಳಿಸಿ ಚೊಚ್ಚಲ ಟೆಸ್ಟ್ ಶತಕ ಗಳಿಸಿದಾಗ ಎನ್ನಬಹುದು. ಟೀಂ ಇಂಡಿಯಾದಲ್ಲಿ ನಂ.3 ಕ್ರಮಾಂಕಕ್ಕೆ ಬೆಲೆ ತಂದುಕೊಟ್ಟ ದ್ರಾವಿಡ್ ಅವರು ಮೈದಾನದ ಒಳಗೆ ಹೊರಗೆ ಎಲ್ಲರಿಂದಲೂ ಮೆಚ್ಚುಗೆ, ಗೌರವಕ್ಕೆ ಪಾತ್ರರಾದ ಆಟಗಾರ.[ದ್ರಾವಿಡ್ ಕೋಚಿಂಗ್ ಕಮಾಲ್, ಕಿರಿಯರಿಗೆ ಕಿರೀಟ]

ಕ್ರಿಕೆಟ್ ನ ವಿವಿಧ ಮಾದರಿಯ ತಂಡಗಳಿಗೆ ನಾಯಕರಾಗಿ ಕಾಣಿಸಿಕೊಂಡ ದ್ರಾವಿಡ್ ಅವರ ಬದುಕು ಸಾಧನೆ ಕುರಿತಂತೆ ವೆಬ್ ಸೈಟ್ ಕೂಡಾ ಲೋಕಾರ್ಪಣೆಯಾಗಿದೆ. ಕೆಎಸ್ ಸಿಎ ಸ್ಟೇಡಿಯಂನಲ್ಲಿ ಅವರು ಗಳಿಸಿದ ರನ್ ಗಳ ಗೋಡೆಯನ್ನು ನಿರ್ಮಿಸಿ ಗೌರವ ಸೂಚಿಸಲಾಗಿದೆ. ಹುಟ್ಟುಹಬ್ಬದ ನಿಮಿತ್ತ ಅನೇಕ ಟ್ವೀಟ್ ಬಂದಿವೆ, ಕೆಲವು ಇಲ್ಲಿದೆ...

ದ್ರಾವಿಡ್ ಕೋಚ್ ಆಗಬಾರದೇಕೆ? ಪ್ರಶ್ನೆಗೆ ಉತ್ತರ ಸಿಕ್ಕಿದೆ

ದ್ರಾವಿಡ್ ಕೋಚ್ ಆಗಬಾರದೇಕೆ? ಪ್ರಶ್ನೆಗೆ ಉತ್ತರ ಸಿಕ್ಕಿದೆ

ದ್ರಾವಿಡ್ ಕೋಚ್ ಆಗಬಾರದೇಕೆ? ಟೆಸ್ಟ್, ಏಕದಿನ, ಟಿ20, ಐಪಿಎಲ್, ರಣಜಿ ಎಲ್ಲಾ ಮಾದರಿಯಲ್ಲೂ ನಾಯಕರಾಗಿ ಯಶಸ್ವಿಯಾಗಿರುವ ರಾಹುಲ್ ದ್ರಾವಿಡ್ ರನ್ನು ಟೀಂ ಇಂಡಿಯಾದ ಕೋಚ್ ಆಗಿ ಕಾಣಲು ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ಸೇರಿದಂತೆ ಹಲವರಿಗೆ ಆಸೆಯಿದೆ ಎಂದು ಕಳೆದ ವರ್ಷ ಇದೇ ವೇಳೆಗೆ ಎದ್ದಿದ್ದ ಪ್ರಶ್ನೆಗೆ ದ್ರಾವಿಡ್ ಅವರು ತಕ್ಕ ಉತ್ತರ ನೀಡಿದ್ದಾರೆ, ಕಿರಿಯರ ತಂಡಕ್ಕೆ ಕೋಚ್ ಆಗಿ ಯಶಸ್ಸು ಗಳಿಸಿದ್ದಾರೆ.

ದ್ರಾವಿಡ್ ಮಕ್ಕಳು ಸಮಿತ್, ಅನ್ವಯ್ ಶೈನಿಂಗ್

ದ್ರಾವಿಡ್ ಮಕ್ಕಳು ಸಮಿತ್, ಅನ್ವಯ್ ಶೈನಿಂಗ್

2003ರಲ್ಲಿ ನಾಗಪುರ ಮೂಲದ ವಿಜೇತ ಪೆಂಧಾರ್ಕರ್ ಅವರನ್ನು ವರಿಸಿದ ರಾಹುಲ್ ಅವರಿಗೆ ಸಮಿತ್, ಅನ್ವಯ್ ಹೆಸರಿನ ಮಕ್ಕಳಿದ್ದಾರೆ. ಬೆಂಗಳೂರು ನೆಲೆಕಂಡ ಊರಾದರೂ ತಮಿಳುನಾಡು, ಮಧ್ಯಪ್ರದೇಶದ ಲಿಂಕ್ ಕೂಡಾ ಹೊಂದಿದ್ದಾರೆ. ದ್ರಾವಿಡ್ ಮಕ್ಕಳಿಬ್ಬರು ಕ್ರಿಕೆಟ್ ನಲ್ಲಿ ಮಿಂಚುತ್ತಿದ್ದು, ಎಬಿ ಡಿ ವಿಲಿಯರ್ಸ್ ಸ್ಟೈಲ್ ಕಾಪಿ ಮಾಡುತ್ತಿದ್ದಾರಂತೆ. ಭವಿಷ್ಯದ ಪ್ರತಿಭೆಗಳನ್ನು ರೂಪಿಸುವಲ್ಲಿ ದ್ರಾವಿಡ್ ಅವರೇ ಉತ್ತಮ ಕೋಚ್.

ಸಚಿನ್ ದೇವರು, ದ್ರಾವಿಡ್ ಏನು?

ಸಚಿನ್ ದೇವರು, ದ್ರಾವಿಡ್ ಏನು? ಎಂಬುದಕ್ಕೆ ಇಲ್ಲಿದೆ ಉತ್ತರ.

ಕೆವಿನ್ ಪೀಟರ್ಸನ್ ರಿಂದ ದ್ರಾವಿಡ್ ಗೆ ಸಲಾಂ

ಕೆವಿನ್ ಪೀಟರ್ಸನ್ ರಿಂದ ದ್ರಾವಿಡ್ ಗೆ ಸಲಾಂ. ನನ್ನ ಬ್ಯಾಟಿಂಗ್ ಬದಲಾವಣೆಗೆ ದ್ರಾವಿಡ್ ಕಾರಣ ಎಂದ ಇಂಗ್ಲೆಂಡ್ ನ ದಿಗ್ಗಜ.

ದ್ರಾವಿಡ್ ಬಗ್ಗೆ ಕ್ರಿಕೆಟರ್ಸ್ ಹೇಳಿಕೆಗಳು

ದ್ರಾವಿಡ್ ಬಗ್ಗೆ ಕ್ರಿಕೆಟರ್ಸ್ ಹೇಳಿಕೆಗಳನ್ನು ಟ್ವೀಟ್ ಮಾಡಿದ ಅಭಿಮಾನಿಗಳು.

ಅಜಿಂಕ್ಯ ರಹಾನೆ ಅವರಿಂದ ಗುರು ದ್ರಾವಿಡ್ ಗೆ ವಿಶ್

ಅಜಿಂಕ್ಯ ರಹಾನೆ ಅವರಿಂದ ಗುರು ದ್ರಾವಿಡ್ ಗೆ ಹುಟ್ಟುಹಬ್ಬದ ಶುಭ ಹಾರೈಕೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian batting legend Dravid celebrates his 43rd birthday. #HappyBirthdayDravid Top Trending today(Jan 11) on Twitter. He was wished by many cricketers and fans on social networking site Twitter.
Please Wait while comments are loading...