'ಕೊಪ್ಪದ್ 6 ದಿನ ಹಿಮದಲ್ಲಿ ಕಾದಿದ್ದ, ನಿಮಗೆ 6 ನಿಮಿಷ ಕಾಯಲು ಸಾಧ್ಯವಿಲ್ಲವೆ?'

Posted By:
Subscribe to Oneindia Kannada

ನವದೆಹಲಿ, ನವೆಂಬರ್, 15: ರೂ.500 ಹಾಗೂ ರೂ.1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಕ್ರಮವನ್ನು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ತಮ್ಮದೇ ಆದ ಶೈಲಿಯಲ್ಲಿ ಹೇಳಿಕೆ ನೀಡುವ ಮೂಲಕ ಸಮರ್ಥಿಸಿದ್ದಾರೆ.

ದೇಶಕ್ಕೆ ಮಾರಕವಾಗಿ ಪೀಡಿಸುತ್ತಿರುವ ಕಾಳಧನದ ಭೂತವನ್ನು ಹಿಡಿದು ಕೊಲ್ಲಲು ಇದೊಂದು ಉತ್ತಮ ಉಪಾಯ. ಪ್ರಧಾನಿ ಮೋದಿ ಅವರು ತೆಗೆದುಕೊಂಡಿರುವ ಕ್ರಮ ಉತ್ತಮವಾಗಿದೆ ಎಂದು ಹೇಳಿದ್ದಾರೆ.[ಬ್ಯಾಂಕ್ ಮುಂದೆ ಬಡವರ ಪರದಾಟ, ಸುಖ ನಿದ್ದೆಯಲ್ಲಿ ಮೋದಿ ಗೆಳೆಯರು!]

ಮೋದಿ ಅವರ ಕ್ರಮಕ್ಕೆ ದೇಶದ ಹಲವು ಮಂದಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಹಣಕ್ಕಾಗಿ ಗಂಟೆಗಟ್ಟಲೇ ಕ್ಯೂನಲ್ಲಿ ನಿಂತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರಿಕರಿಗೆ ಸೆಹ್ವಾಗ್ ಅವರು ಖಾರವಾಗಿಯೇ ಹಿತವಚನ ಬೋಧಿಸಿದ್ದಾರೆ.[ರೂ. 6000 ಕೋಟಿ ನಗದಿನೊಂದಿಗೆ ಶರಣಾದ ಉದ್ಯಮಿ]

Hanumanthappa waited six days, we can wait few hours

ಇತ್ತೀಚೆಗಷ್ಟೆ ಸಿಯಾಚಿನ್ ಸೇನಾ ನೆಲೆಯ ಹಿಮಪಾತಕ್ಕೆ ಸಿಲುಕಿ ಮೃತಪಟ್ಟ ಲ್ಯಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ್ ಅವರ ಬಗ್ಗೆ ಪ್ರಸ್ತಾಪಿಸಿರುವ ಸೆಹ್ವಾಗ್ "ಕೊಪ್ಪದ್ ಅವರು ದೇಶಕ್ಕಾಗಿ 6 ದಿನ ಜೀವ ಹಿಡಿದು ಹಿಮಪದರದಡಿ ಸಿಲುಕಿ ಊಟ ನೀರು ಇಲ್ಲದೆ ಪ್ರಾಣತ್ಯಾಗ ಮಾಡಿದರು.

ದೇಶದ ಒಳಿತಿಗಾಗಿ ಪ್ರಧಾನಿ ಅವರು ಕೈಗೊಂಡಿರುವ ಕ್ರಮವನ್ನು ಬೆಂಬಲಿಸಲು ಕನಿಷ್ಠ ಸಮಯವಾದರೂ ಕ್ಯೂ ಲೈನ್ ನಲ್ಲಿ ನಿಲ್ಲಲು ನಿಮಗೆ ಕಷ್ಟವೇ ಎಂದು ಪ್ರಶ್ನಿಸಿದ್ದಾರೆ.

ಹನುಮಂತಪ್ಪ ಕೊಪ್ಪದ್ ಅವರು -45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರುವ ಪ್ರದೇಶದಲ್ಲಿ ಹಿಮತಪಾತಕ್ಕೆ ಸಿಲುಕಿ ಊಟ ನೀರು ಇಲ್ಲದೆ 35ಅಡಿ ಹಿಮಪದರದ ಕೆಳಗೆ 6ದಿನ ಜೀವನ್ಮರಣ ಹೋರಾಟ ಬದುಕುಳಿದಿದ್ದರು. ಆದರೆ ದುದೃಷ್ಟವಷಾತ್ ಅವರನ್ನು ಉಳಿಸಿಕೊಳ್ಳಲು ಆಗಿರಲಿಲ್ಲ.

ಅವರು ದೇಶಕ್ಕಾಗಿ ಪ್ರಾಣಕ್ಕೆ ಕುತ್ತು ತರುವಂತಹ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಾವು ಸಹ ನಮ್ಮ ದೇಶಕ್ಕಾಗಿ ಇಷ್ಟು ಮಾಡಿದ್ದರೆ ಹೇಗೆ ಎಂಬ ಧಾಟಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರ ನೋಟು ನಿಷೇಧ ಕ್ರಮದ ಕುರಿತು ಸೆಹ್ವಾಗ್ ಪ್ರತಿಕ್ರಿಯೆ ನೀಡಿದ್ದು, " ವಿಶ್ವದಾದ್ಯಂತ ಜನರು ಅಮೆರಿಕ ವೋಟುಗಳ ಲೆಕ್ಕಾಚಾರದಲ್ಲಿ ತಲ್ಲೀನರಾಗಿದ್ದರು ಆದರೆ ಭಾರತೀಯರೆಲ್ಲರೂ ನೋಟುಗಳ ಲೆಕ್ಕಾಚಾರದಲ್ಲಿ ಮುಳುಗಿಹೋಗುವಂತೆ ಮೋದಿ ಮೋಡಿ ಮಾಡಿದರು ಎಂದು ಸೆಹ್ವಾಗ್ ಟ್ವೀಟಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dashing opening batsman Virender Sehwag has been very vocal about PM Narendra Modi's demonetization announcement and backing the noble initiative of driving out black money from the nation.
Please Wait while comments are loading...