ಲಿಟ್ಲ್ ಮಾಸ್ಟರ್ ಹನೀಫ್ ಹೃದಯ 6 ನಿಮಿಷ ಸ್ತಬ್ಧವಾದ ಗಳಿಗೆ!

Posted By:
Subscribe to Oneindia Kannada

ಕರಾಚಿ, ಆಗಸ್ಟ್ 11: ಟೆಸ್ಟ್ ಕ್ರಿಕೆಟ್ ಇತಿಹಾಸದ ಶ್ರೇಷ್ಠ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರೆನಿಸಿರುವ 'ಲಿಟ್ಲ್ ಮಾಸ್ಟರ್' ಹನೀಫ್ ಮೊಹಮ್ಮದ್ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುದ್ದಿ ತಿಳಿದಿರಬಹುದು, ಹನೀಫ್ ಅವರು ಬುಧವಾರದಂದು ಹನೀಫ್ ಅವರ ಹೃದಯ 6 ನಿಮಿಷಗಳ ಕಾಲ ಸ್ತಬ್ಧವಾಗಿ ನಂತರ ಮರು ಚಾಲನೆಗೊಂಡ ವೈದ್ಯಕೀಯ ವಿಸ್ಮಯ ಘಟನೆ ಸಂಭವಿಸಿದೆ.

ವೆಂಟಿಲೇಟರ್ ನೆರವಿನಿಂದ ಉಸಿರಾಟ ಮಾಡುತ್ತಿರುವ ಹನೀಫ್ ಅವರು 6 ನಿಮಿಷಗಳ ಕಾಲ ಹೃದಯ ಬಡಿತವಿಲ್ಲದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಅಷ್ಟರಲ್ಲೇ ಪಾಕಿಸ್ತಾನದ ಅನೇಕ ಮಾಧ್ಯಮಗಳು ಹನೀಫ್ ಅವರ ಚರಮ ಗೀತೆ ಹಾಡಿವೆ.

ಆದರೆ, ವೈದ್ಯರ ನಿರಂತರ ಪ್ರಯತ್ನದ ಫಲವಾಗಿ ಅವರಿಗೆ ಮತ್ತೆ ಜೀವ ಬಂದಿದೆ. ಅವರು ಜೀವಂತವಾಗಿದ್ದಾರೆ ಎಂದು ಹನೀಫ್ ಅವರ ಪುತ್ರ ಶೋಯೆಬ್ ಮೊಹಮ್ಮದ್ ತಿಳಿಸಿದ್ದಾರೆ.

Dead and alive again in 6 minutes! Pakistan batting legend Hanif Mohammad's heart revived

ಹನೀಫ್ ಅವರ ಹೃದಯ ಸುಮಾರು 6 ನಿಮಿಷಗಳವೆಗೆ ಸ್ತಬ್ಧವಾಗಿತ್ತು. ವೈದ್ಯರು ನಿರಂತರವಾಗಿ ಪ್ರಯತ್ನಿಸಿದ ನಂತರ ಅವರು ಹೃದಯ ಬಡಿತ ಪ್ರಾರಂಭವಾಗಿದೆ. [ವಾಹ್ ! ಕೊಹ್ಲಿ ವಾಹ್, ಯುವಕರ ಪಾಲಿಗೆ ನೀವೇ ಮಾದರಿ]

ಪ್ರಸ್ತುತ ಅವರನ್ನು ವೆಂಟಿಲೇಟರ್​ನಲ್ಲಿ ಇಟ್ಟು ಚಿಕಿತ್ಸೆ ಮುಂದುವರೆಸಲಾಗಿದೆ. ತಂದೆಗೆ ದೇವರು ಎರಡನೇ ಅವಕಾಶ ನೀಡಿದ್ದಾರೆ. ಇದು ಹನೀಫ್ ಅವರ ಲಕ್ಷಾಂತರ ಅಭಿಮಾನಿಗಳ ಪ್ರಾರ್ಥನೆಯಿಂದ ಸಾಧ್ಯವಾಗಿದೆ ಎಂದು ಶೋಯೆಬ್ ತಿಳಿಸಿದ್ದಾರೆ.

ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹನೀಫ್ ಅವರು 2013ರಿಂದ ಚಿಕಿತ್ಸೆ ಪಡೆಯುತ್ತಿದ್ದರು. 81 ವರ್ಷ ವಯಸ್ಸಿನ ಹನೀಫ್ ಅವರು ಲಂಡನ್ನಿನಲ್ಲಿ ಸರ್ಜರಿಗೆ ಒಳಗಾಗಿದ್ದರು. ಆದರೆ, ಕ್ಯಾನ್ಸರ್ ಮಾರಿ ಉಲ್ಬಣವಾಗಿದೆ. [ಪಾಕಿಸ್ತಾನ 'ಲಿಟ್ಲ್ ಮಾಸ್ಟರ್' ಕ್ರಿಕೆಟರ್ ತೀವ್ರ ಅಸ್ವಸ್ಥ]

1954-55ರಲ್ಲಿ ಭಾರತ ಕೈಗೊಂಡ ಪಾಕಿಸ್ತಾನದ ಮೊದಲ ಪ್ರವಾಸದಲ್ಲಿ ಹನೀಫ್ ಆಡಿದ್ದರು. 55 ಟೆಸ್ಟ್ ಪಂದ್ಯಗಳನ್ನಾಡಿರುವ ಹನೀಫ್ ಅವರು, 1957-58ರ ಸರಣಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 337ರನ್ ಚೆಚ್ಚಿದ್ದು ಅವಿಸ್ಮರಣೀಯ ಇನ್ನಿಂಗ್ಸ್ ಆಗಿದೆ. ಈ ಇನ್ನಿಂಗ್ಸ್ ಹಲವು ವರ್ಷಗಳ ಕಾಲ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಅತಿ ದೀರ್ಘಾವಧಿ ಟೆಸ್ಟ್ ಇನ್ನಿಂಗ್ಸ್ ಆಗಿತ್ತು. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Legendary Pakistani batsman Hanif Mohammad was declared clinically dead for six minutes today before he was revived back to life at the Aga Khan hospital.
Please Wait while comments are loading...