ಮೋದಿ ಕನಸಿನ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ 700 ಕೋಟಿ ರು!

Posted By:
Subscribe to Oneindia Kannada

ಅಹಮದಾಬಾದ್, ಜನವರಿ 18: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದ ನಿರ್ಮಾಣಕ್ಕೆ ಇತ್ತೀಚೆಗೆ ಗುಜರಾತ್ ಕ್ರಿಕೆಟ್ ಮಂಡಳಿ ಅಡಿಗಲ್ಲು ಹಾಕಿದೆ. ಸುಮಾರು 700 ಕೋಟಿ ರೂ. ವೆಚ್ಚದ ಮಹಾಯೋಜನೆ ಇದಾಗಿದ್ದು, 2 ವರ್ಷಗಳಲ್ಲಿ ಮೊಟೆರಾದ ಕ್ರೀಡಾಂಗಣ ಸಜ್ಜಾಗುವ ನಿರೀಕ್ಷೆ ಇದೆ.

ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣವನ್ನು ಸಂಪೂರ್ಣವಾಗಿ ನೆಲಸಮಗೊಳಿಸಲಾಗುತ್ತದೆ. ಸುಮಾರು 49 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿದ್ದ ಕ್ರೀಡಾಂಗಣ ಇನ್ಮುಂದೆ 1.10 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ಸ್ಟೇಡಿಯಂ ಆಗಿ ಪರಿವರ್ತನೆಗೊಳ್ಳಲಿದೆ.

Gujarat's Motera to become 'world's biggest cricket stadium', foundation stone laid

ಸದ್ಯ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವೆನಿಸಿರುವ ಮೆಲ್ಬೋರ್ನ್​ನ ಎಂಸಿಜಿಗಿಂತ (90 ಸಾವಿರ ಪ್ರೇಕ್ಷಕ ಸಾಮರ್ಥ್ಯ) ದೊಡ್ಡ ಸ್ಟೇಡಿಯಂ ಎಂದೆನಿಸಿಕೊಳ್ಳಲಿದೆ.

ಹೊಸ ಸ್ಟೇಡಿಯಂನಲ್ಲಿ 76 ಕಾಪೋರೇಟ್ ಬಾಕ್ಸ್​ಗಳು ಇರಲಿವೆ. 3 ಅಭ್ಯಾಸ ಮೈದಾನ, 4 ಡ್ರೆಸ್ಸಿಂಗ್ ರೂಮ್ 50-55 ರೂಮ್ ಒಳಗೊಂಡ ಕ್ಲಬ್​ಹೌಸ್, ಈಜುಕೊಳ ಮತ್ತು ಒಳಾಂಗಣ ಕ್ರಿಕೆಟ್ ಅಕಾಡೆಮಿ ಇರಲಿದೆ. ಒಟ್ಟಾರೆ 63 ಎಕರೆ ವಿಸ್ತೀರ್ಣದ ಕ್ರಿಕೆಟ್ ಕ್ಯಾಂಪಸ್ ಇದಾಗಿರುತ್ತದೆ. 3 ಸಾವಿರ ಕಾರುಗಳು ಮತ್ತು 10 ಸಾವಿರ ದ್ವಿಚಕ್ರ ವಾಹನಗಳಿಗೆ ರ್ಪಾಂಗ್ ವ್ಯವಸ್ಥೆಯೂ ಇರಲಿದೆ.

ಮೋದಿ ಗುಜರಾತ್ ಕ್ರಿಕೆಟ್ ಸಂಸ್ಥೆ (ಜಿಸಿಎ) ಅಧ್ಯಕ್ಷರಾಗಿದ್ದಾಗ ಈ ಕ್ರೀಡಾಂಗಣದ ನೀಲನಕ್ಷೆಯನ್ನು ರೂಪಿಸಲಾಗಿತ್ತು. ಹಾಲಿ ಅಧ್ಯಕ್ಷ ಅಮಿತ್ ಷಾ ಈ ಕ್ರೀಡಾಂಗಣ ನಿರ್ವಣದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಮೆಲ್ಬೋರ್ನ್ ಕ್ರೀಡಾಂಗಣದ ವಾಸ್ತುವಿನ್ಯಾಸ ರೂಪಿಸಿದ್ದ 'ಪಾಪ್ಯುಲಸ್' ಸಂಸ್ಥೆಯೇ ಈ ಕ್ರೀಡಾಂಗಣದ ವಿನ್ಯಾಸಕನಾಗಿದೆ. ಲಾರ್ಸನ್ ಆಂಡ್ ಟಬೋ ಕಂಪನಿ ಕಾಮಗಾರಿ ವಹಿಸಿಕೊಂಡಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gujarat Cricket Association (GCA) Vice President Parimal Nathwani, along with other office bearers laid foundation stone for the "world's biggest cricket stadium", coming up in Motera area here. This is dream project of PM Modi.
Please Wait while comments are loading...