ಚೊಚ್ಚಲ ಐಪಿಎಲ್ ನಲ್ಲೇ ರೈನಾ-ಲಯನ್ಸ್ ಮಹತ್ತರ ಸಾಧನೆ

Posted By:
Subscribe to Oneindia Kannada

ಕಾನ್ಪುರ, ಮೇ 22: ಮೊಟ್ಟ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಡುತ್ತಿರುವ ಗುಜರಾತ್ ಲಯನ್ಸ್ ತಂಡ ಮೊದಲ ಎಂಟ್ರಿಯಲ್ಲೇ ಪ್ಲೇ ಆಫ್ ಹಂತ ತಲುಪಿದೆ. ಈ ಸಾಧನೆಯಲ್ಲಿ ನಾಯಕ ಸುರೇಶ್ ರೈನಾ ಅವರ ಪಾತ್ರ ದೊಡ್ಡದು.

ಅದರಲ್ಲೂ ಲೀಗ್ ನ ಕೊನೆ ಹಂತದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಟೂರ್ನಿಯಿಂದ ಹೊರಕ್ಕೆ ದಬ್ಬಿ, ಪ್ಲೇ ಆಫ್ ಗೆ ಗುಜರಾತ್ ಅರ್ಹತೆ ಪಡೆದುಕೊಂಡಿರುವುದು ಗಮನಾರ್ಹ.[ಪಂದ್ಯದ ಸ್ಕೋರ್ ಕಾರ್ಡ್]

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

2009ರ ಬಳಿಕ ಇದೇ ಮೊದಲ ಬಾರಿಗೆ ಐಪಿಎಲ್​ನ ಲೀಗ್ ಹಂತದಲ್ಲೇ ಮುಂಬೈ ನಿರ್ಗಮನ ಕಾಣುತ್ತಿದೆ. ಶನಿವಾರ ನಡೆದ ಪಂದ್ಯದಲ್ಲಿ ಮುಂಬೈ ತಂಡವನ್ನು 6 ವಿಕೆಟ್​ಗಳಿಂದ ಸೋಲಿಸಿದ ಗುಜರಾತ್ ಲಯನ್ಸ್ ತಂಡ ವಿಜಯೋತ್ಸವ ಆಚರಿಸಿದೆ. [ಕೊಹ್ಲಿ ನಂತರ ರೈನಾ ದಾಖಲೆ ರನ್ ಸರದಾರ]

ಮುಂಬೈ ತಂಡ ಪ್ಲೇ ಆಫ್ ಗೆ ಅರ್ಹತೆ ಪಡೆಯಲು ಬೇರೆ ತಂಡಗಳ ಫಲಿತಾಂಶದ ಮೇಲೆ ಕಣ್ಣಿಡಬೇಕಿದೆ. ಸನ್​ರೈಸರ್ಸ್ ವಿರುದ್ಧ ಕೆಕೆಆರ್ ತಂಡವು 150 ರನ್​ಗಿಂತ ಹೆಚ್ಚು ಅಂತರದಲ್ಲಿ ಸೋತಲ್ಲಿ ಮಾತ್ರ ಮುಂಬೈಗೆ ಪ್ಲೇ ಆಫ್ ಕನಸು ಕಾಣಬಹುದು. [ಅಂಕ ಪಟ್ಟಿ]

IPL 2016: Gujarat Lions thrash Mumbai Indians by 6 wkts to qualify for Play-Offs


ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ತಂಡ ನಿತೀಶ್ ರಾಣಾ ನಿತೀಶ್ ರಾಣಾ 70 ರನ್(36 ಎಸೆತ, 7 ‍X4, 4X6) ನೆರವಿನಿಂದ 8 ವಿಕೆಟ್​ಗೆ 172ರನ್ ಪೇರಿಸಿತು. ಗುಜರಾತ್ ಲಯನ್ಸ್ ತಂಡ 17.5 ಓವರ್​ಗಳಲ್ಲಿ 4 ವಿಕೆಟ್​ಗೆ 173 ಗೆಲುವು ಸಾಧಿಸಿತು. [ಫೈನಲಿಗೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಶುರು]
ಹಾಲಿ ಚಾಂಪಿಯನ್ ಮುಂಬೈ, ಐಪಿಎಲ್ 9 ರಿಂದ ಔಟ್

ಹಾಲಿ ಚಾಂಪಿಯನ್ ಮುಂಬೈ, ಐಪಿಎಲ್ 9 ರಿಂದ ಔಟ್

-
-
-
-
-
-

ನಾಯಕ ಸುರೇಶ್ ರೈನಾ 58 ರನ್(36 ಎಸೆತ, 8‍X4, 2X6) ಹಾಗೂ ಬ್ರೆಂಡನ್ ಮೆಕ್ಕಲಂ 48 ರನ್(27 ಎಸೆತ, 8 X4, 1X6) ಬ್ಯಾಟಿಂಗ್ ನೆರವಿನಿಂದ ಲಯನ್ಸ್ ಘರ್ಜಿಸಿದರು. ಕೊನೆ ಹಂತದಲ್ಲಿ ಡ್ವೇನ್ ಸ್ಮಿತ್ 37ರನ್(23 ಎಸೆತ, 4X4, 2X6) ಹಾಗೂ ರವೀಂದ್ರ ಜಡೇಜಾ 20 ರನ್(14 ಎಸೆತ, 4X4) 5ನೇ ವಿಕೆಟ್​ಗೆ 33 ಎಸೆತದಲ್ಲಿ ಮುರಿಯದ 51 ರನ್ ಜತೆಯಾಟ ಸಾಧಿಸಿ, ಗೆಲುವಿನ ದಡ ಮುಟ್ಟಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Debutants Gujarat Lions became the first team to confirm a play-off berth with a thumping six-wicket win over defending champions Mumbai Indians in an Indian Premier League encounter,on May 21.
Please Wait while comments are loading...