ಸ್ಮಿತ್ ಶತಕ ವ್ಯರ್ಥ, ಧೋನಿ ಪಡೆ ಸೋಲಿಸಿದ ರೈನಾ

Posted By:
Subscribe to Oneindia Kannada

ಪುಣೆ, ಏಪ್ರಿಲ್ 30 : ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಪುಣೆ ಸೂಪರ್‌ ಜೈಂಟ್ಸ್‌ ತಂಡವನ್ನು ಸೋಲಿಸಿ, ಗುಜರಾತ್‌ ಲಯನ್ಸ್‌ ತನ್ನ ಗೆಲುವಿನ ಓಟ ಮುಂದುವರೆಸಿದೆ. ಚೊಚ್ಚಲ ಐಪಿಎಲ್ ಪಂದ್ಯವಾಡುತ್ತಿರುವ ಸುರೇಶ್ ರೈನಾ ನೇತೃತ್ವದ ಗುಜರಾತ್ ಲಯನ್ಸ್ 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ಶುಕ್ರವಾರ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಲಯನ್ಸ್ ಟಾಸ್ ಗೆದ್ದು, ಧೋನಿ ಪಡೆಗೆ ಬ್ಯಾಟಿಂಗ್ ನೀಡಿತು. ಈ ಅವಕಾಶ ಬಳಸಿಕೊಂಡ ಪುಣೆ 20 ಓವರ್‌ಗಳಲ್ಲಿ 195 ರನ್ ಕಲೆ ಹಾಕಿತು.[ಗುಜರಾತಿಗೆ ಡೆವಿಲ್ ನಂತೆ ಕಾಡಿದ ಮೋರಿಸ್ ತಿಂದಿದ್ದೇನು?]

cricket

ಬೃಹತ್ ಮೊತ್ತದ ಬೆನ್ನತ್ತಿದ ಗುಜರಾತ್ ಲಯನ್ಸ್ 7 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಆರಂಭಿಕರಾಗಿ ಬಂದ ಬ್ರೆಂಡನ್ ಮೆಕ್ಲಮ್ ಮತ್ತು ಡ್ವೇನ್ ಸ್ಮಿತ್ ತಂಡದ ಗೆಲುವಿಗೆ ಭದ್ರ ಅಡಿಪಾಯ ಹಾಕಿದರು. ಮೆಕ್ಲಮ್ 22 ಎಸೆತದಲ್ಲಿ 43 ರನ್ ಸಿಡಿಸಿದರು. ಸ್ಮಿತ್ 37 ಎಸೆತದಲ್ಲಿ 63 ರನ್‌ಗಳಿಸಿದರು.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ನಾಯಕ ಸುರೇಶ್ ರೈನಾ 28 ಎಸೆತದಲ್ಲಿ 34 ರನ್ ಗಳಿಸಿದರೆ, ದಿನೇಶ್ ಕಾರ್ತಿಕ್ 20 ಎಸೆತದಲ್ಲಿ 33 ರನ್ ಗಳಿಸಿದರು. ಅಂತಿಮ ಓವರ್‌ನಲ್ಲಿ ಗುಜರಾತ್ ಲಯನ್ಸ್ 9 ರನ್‌ಗಳನ್ನು ಗಳಿಸಿ ಧೋನಿ ಪಡೆ ವಿರುದ್ಧ 2ನೇ ಗೆಲುವು ದಾಖಲಿಸಿತು. [ಡೋನಾಲ್ಡ್ ಮೇಲೆ ಆಸ್ಟ್ರೇಲಿಯನ್ನರ ಕಣ್ಣು]

ವ್ಯರ್ಥವಾದ ಶತಕ : ಪುಣೆ ಸೂಪರ್‌ ಜೈಂಟ್ಸ್‌ ತಂಡದ ಸ್ಟೀವನ್ ಸ್ಮಿತ್ ಗುಜರಾತ್ ತಂಡದ ಬೌಲರ್‌ಗಳನ್ನು ಕಾಡಿದರು. 54 ಎಸೆತಗಳಲ್ಲಿ 101 ರನ್‌ಗಳಿಸುವ ಮೂಲಕ ಶತಕ ಸಿಡಿಸಿದರು. ಆದರೆ, ಈ ಶತಕ ತಂಡವನ್ನು ಗೆಲ್ಲಿಸುವಲ್ಲಿ ಸಹಕಾರಿಯಾಗದೆ ವ್ಯರ್ಥವಾಯಿತು.

-
-
-
-
-
-

ರಹಾನೆ 53, ಮಹೇಂದ್ರ ಸಿಂಗ್ ಧೋನಿ 30 ಮತ್ತು ಸ್ಮಿತ್ 101 ರನ್‌ಗಳನ್ನು ಗಳಿಸುವ ಮೂಲಕ ಪುಣೆ ಸೂಪರ್‌ ಜೈಂಟ್ಸ್‌ ಬೃಹತ್ ಮೊತ್ತ ಕಲೆ ಹಾಕಲು ನೆರವಾದರು. ಆದರೆ, ಗುಜರಾತ್ ಲಯನ್ಸ್ ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಈ ಮೊತ್ತ ಸಾಕಾಗಲಿಲ್ಲ.

ಇಂದಿನ ಪಂದ್ಯಗಳು : ಏ.30ರ ಶನಿವಾರ 2 ಪಂದ್ಯಗಳಿವೆ. ಕೋಲ್ಕತ್ತಾ ನೈಟ್ ರೈಡರ್ಸ್‌ ಮತ್ತು ಡೆಲ್ಲಿ ಡೇರ್‌ ಡೆವಿಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು-ಸನ್‌ರೈಸರ್ಸ್ ಹೈದರಾಬಾದ್. [ಪಿಟಿಐ ಚಿತ್ರಗಳು]

* ಮೇ 1ರಂದು ಪುಣೆ ಮುಂಬೈ ತಂಡವನ್ನು ಎದುರಿಸಲಿದೆ
* ಮೇ 1ರಂದು ಗುಜರಾತ್ ಪಂಜಾಬ್ ವಿರುದ್ಧ ಮುಂದಿನ ಪಂದ್ಯವಾಡಲಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Gujarat Lions register a thrilling 3 wicket victory against Rising Pune Supergiants in the Indian Premier League season 9 at Maharashtra Cricket Association Stadium in Pune on April 29, 2016.
Please Wait while comments are loading...