ವಿಡಿಯೋ: ಗಿನ್ನೆಸ್ ದಾಖಲೆಯಾದ ನಾಸೀರ್ ಹಿಡಿದ ಕ್ಯಾಚ್

Posted By:
Subscribe to Oneindia Kannada

ಲಂಡನ್, ಜುಲೈ 07: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಅವರು ಇತ್ತೀಚೆಗೆ ಲಾರ್ಡ್ಸ್ ಮೈದಾನದಲ್ಲಿ ಹೊಸ ಗಿನ್ನೆಸ್ ದಾಖಲೆ ಬರೆದಿದ್ದು ಕ್ರೀಡಾಭಿಮಾನಿಗಳಿಗೆ ಗೊತ್ತಿರಬಹುದು. ನಾಸಿರ್ ಅವರು ಕ್ಯಾಚ್ ಹಿಡಿದು ಗಿನ್ನೆಸ್ ದಾಖಲೆ ಮಾಡಿದ ವಿಡಿಯೋವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಯೂಟ್ಯೂಬ್ ನಲ್ಲಿ ಹಾಕಿದೆ. ಈ ವಿಡಿಯೋ ಈ ಸಮಯಕ್ಕೆ 205,009 ಬಾರಿ ವೀಕ್ಷಿಸಲ್ಪಟ್ಟಿದೆ.

ಲಾರ್ಡ್ಸ್‌ನಲ್ಲಿ ಆಯೋಜಿಸಿದ್ದ ಕ್ರಿಕೆಟ್ ಚೆಂಡು ಕ್ಯಾಚ್ ಪಡೆಯುವ ಸ್ಪರ್ಧೆಯೊಂದರಲ್ಲಿ ನಾಸಿರ್ ಅವರು ವಿಶ್ವ ದಾಖಲೆ ಬರೆದಿದ್ದರು. ಅತಿ ಎತ್ತರದಿಂದ(ಸುಮಾರು 150 ಅಡಿ) ಬಂದ ಚೆಂಡನ್ನು ಸುಲಭವಾಗಿ ಹಿಡಿದಿದ್ದರು.[ಪ್ರವಾಸಿಗರ ಸ್ವರ್ಗ ಯುರೋಪ್ ಖಂಡದಲ್ಲೊಂದು ಸುತ್ತು]

Guinness World Records : Former English cricket captain Nasser Hussain Highest Catch

ಜುಲೈ 14 ರಿಂದ ಇಂಗ್ಲೆಂಡ್ ಹಾಗೂ ಪಾಕಿಸ್ತಾನದ ನಡುವೆ ಟೆಸ್ಟ್ ಸರಣಿ ಆರಂಭವಾಗಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಲಾರ್ಡ್ಸ್‌ನಲ್ಲಿ ಇಂಥದ್ದೊಂದು ಸ್ಪರ್ಧೆ ಆಯೋಜಿಸಲಾಗಿತ್ತು. ಅತ್ಯಂತ ಎತ್ತರದಿಂದ ಕ್ಯಾಚ್ ಪಡೆಯುವ ಸ್ಪರ್ಧೆಯಲ್ಲಿ ಹುಸೇನ್ ಹೊಸ ಸಾಧನೆ ಮಾಡಿದರು. ಕನಿಷ್ಠ 110 ಅಡಿ ಎತ್ತರದಿಂದ ಬ್ಯಾಟ್‌ಕ್ಯಾಮ್ ಡ್ರೋನ್ ಮೂಲಕ ಚೆಂಡನ್ನು ಕೆಳಕ್ಕೆ ಹಾಕಲಾಗಿತ್ತು.

ಜೋರಾಗಿ ಬೀಸುತ್ತಿದ್ದ ಗಾಳಿ ನಡುವೆ ಹುಸೇನ್ ಅವರು ಮೊದಲ ಯತ್ನದಲ್ಲೇ ಕ್ಯಾಚ್ ಪಡೆದರು.ನಂತರ ಎರಡನೆ ಪ್ರಯತ್ನದಲ್ಲಿ 32 ಮೀ. ಎತ್ತರದಿಂದ ಬಂದ ಕ್ರಿಕೆಟ್ ಚೆಂಡನ್ನು ಕ್ಯಾಚ್ ಪಡೆಯಲು ಯಶಸ್ವಿಯಾದರು. ಮೂರನೆ ಬಾರಿ 49 ಮೀಟರ್ ಎತ್ತರದಿಂದ ಬಂದ ಚೆಂಡನ್ನು ಹಿಡಿದು ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದರು.[ಸಚಿನ್ -ಸೌರವ್ ದಾಖಲೆ ಮುರಿದ ಇಂಗ್ಲೆಂಡಿನ ಆರಂಭಿಕ ಕ್ರಿಕೆಟರ್ಸ್]

ಇಂಗ್ಲೆಂಡ್‌ನ ಪರ 96 ಟೆಸ್ಟ್ ಪಂದ್ಯಗಳನ್ನು ಆಡಿರುವ ಹುಸೆನ್ ಅವರು 1999 ರಿಂದ 2003ರ ತನಕ ಇಂಗ್ಲೆಂಡ್‌ನ ನಾಯಕನಾಗಿ ಕಾರ್ಯನಿರ್ವಹಿಸಿದ್ದರು. ಸದ್ಯ ಸ್ಕೈ ಸ್ಫೋರ್ಟ್ಸ್ ಚಾನಲ್‌ ನಲ್ಲಿ ಕ್ರಿಕೆಟ್ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Guinness World Records 2016 : Watch Former English cricket captain Nasser Hussain catch a cricket ball dropped from 150 ft via drone. This is recorded as highest catch.
Please Wait while comments are loading...