ಮಹೇಂದ್ರ ಸಿಂಗ್ ಧೋನಿಯ ಬೆಸ್ಟ್ ಫಿನಿಷಿಂಗ್ ಮ್ಯಾಚ್ ಗಳು

By: ಬಿ. ರಮೇಶ್
Subscribe to Oneindia Kannada

ವಿಶ್ವ ಕ್ರಿಕಟಿಗರಲ್ಲಿ ಬೆಸ್ಟ್ ಫಿನಿಷರ್ ಎಂದೇ ಗುರುತಿಸಿಕೊಂಡಿರುವ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರು ಅಮೆರಿಕದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟ್ವೆಂಟಿ 20 ಪಂದ್ಯದಲ್ಲಿ ಕೈ ಚೆಲ್ಲಿದ್ದು ಅನೇಕರಿಂದ ಟೀಕೆಗೊಳಗಾಗಿದೆ.

ಆದರೆ, ವಿಶ್ವಕ್ರಿಕೆಟ್ ನಲ್ಲಿ ಅದರಲ್ಲೂ ಏಕದಿನ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾದ ಮೈಕಲ್ ಬೆವನ್ ನಂತರ ಧೋನಿ ಅವರು ಬೆಸ್ಟ್ ಫಿನಿಷರ್ ಎನಿಸಿಕೊಂಡಿದ್ದಾರೆ. ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಗಳೆರಡನ್ನು ಗೆದ್ದು ಕೊಟ್ಟ ಏಕೈಕ ನಾಯಕರೆನಿಸಿಕೊಂಡಿದ್ದಾರೆ. ಐಸಿಸಿ ನಡೆಸುವ ಪ್ರಮುಖ ಮೂರೂ ಟೂರ್ನಿಗಳನ್ನು ಗೆಲ್ಲಿಸಿಕೊಟ್ಟ ಏಕೈಕ ನಾಯಕನೆಂಬ ಹಿರಿಮೆಯೂ ಧೋನಿ ಹೆಸರಿನಲ್ಲಿದೆ.[ಅಮೆರಿಕದಲ್ಲಿ 'ವಿಶ್ವದಾಖಲೆ' ಬರೆದ ಧೋನಿ]

2007ರ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್, 28 ವರ್ಷಗಳ ನಂತರ 2011ರಲ್ಲಿ ತವರಿನಲ್ಲೇ ನಡೆದ ಏಕದಿನ ವಿಶ್ವಕಪ್, 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ರಾಂಚಿ ಹೀರೋ ಗೆಲ್ಲಿಸಿಕೊಟ್ಟಿದ್ದಾರೆ. ಬೆಸ್ಟ್ ಫಿನಿಷರ್ ಎಂದೇ ಗುರುತಿಸಿಕೊಂಡಿರುವ ಧೋನಿ ಇದುವರೆಗೆ 9 ಏಕದಿನ ಪಂದ್ಯಗಳಲ್ಲಿ ಸಿಕ್ಸರ್ ಮೂಲಕವೇ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ.

ಅಷ್ಟೇ ಅಲ್ಲದೆ ಸ್ಟಂಪಿಂಗ್ ಮಾಡುವುದರಲ್ಲಿಯೂ ದೋನಿ ಎತ್ತಿದ ಕೈ. ಧೋನಿ ಕೊನೆಯ ಓವರ್ ನವರೆಗೆ ಹೋರಾಡಿ ಸೋಲುವ ಪಂದ್ಯಗಳನ್ನು ಗೆಲ್ಲಿಸಿಕೊಂಡು ಬಂದಿರುವ ಪಂದ್ಯಗಳ ಬಗ್ಗೆ ಮಾಹಿತಿ ಇಲ್ಲಿದೆ.

ಧೋನಿ ಸಿಕ್ಸ್ ಮೂಲಕ ಗೆಲುವು ಸಾಧನೆ

ಧೋನಿ ಸಿಕ್ಸ್ ಮೂಲಕ ಗೆಲುವು ಸಾಧನೆ

ಏಕದಿನ ವಿಶ್ವಕಪ್ ಫೈನಲ್ ನಲ್ಲೂ ಕುಲಶೇಖರ ಎಸೆತವನ್ನು ಸಿಕ್ಸರ್'ಗೆ ಅಟ್ಟಿ ವಿಶ್ವಕಪ್ ಗೆದ್ದಿರುವ ಇತಿಹಾಸ ನಿಮಗೆ ನೆನಪಿರಬಹುದು. ಪಂದ್ಯದ ಕೊನೆಗಳಿಗೆಯಲ್ಲಿ ಬೌಲ್ ಗಿಂತ ರನ್ ಗಳು ಡಬ್ಬಲ್ ಇದ್ದರೇ ಅದರಲ್ಲೂ ಧೋನಿ ಕ್ರೀಸ್ ನಲ್ಲಿದ್ದರೇ ಸಾಕು ಎಂಬ ಭಾವನೆ ಅಭಿಮಾನಿಗಳಲ್ಲಿ ಮೂಡಿದೆ.

 2016 ಏಷ್ಯಕಪ್ ಫೈನಲ್ ಪಂದ್ಯ ಬಾಂಗ್ಲಾ ವಿರುದ್ದ

2016 ಏಷ್ಯಕಪ್ ಫೈನಲ್ ಪಂದ್ಯ ಬಾಂಗ್ಲಾ ವಿರುದ್ದ

ಬಾಂಗ್ಲಾದೇಶ ವಿರುದ್ಧ ಏಷ್ಯಕಪ್ ಫೈನಲ್ ನಲ್ಲಿ ಭಾರತಕ್ಕೆ ಬೇಕಿದ್ದ 14 ಎಸೆತಗಳಲ್ಲಿ 22 ರನ್ ಗಳನ್ನು ದೋನಿ ಕೇವಲ 6 ಎಸೆತಗಳಲ್ಲಿಯೇ ಪಂದ್ಯವನ್ನು ಮುಗಿಸಿದರು. ಧೋನಿ ಇನ್ನು ಏಳು ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲ್ಲಿಸಿ ಏಷ್ಯಕಪ್ ಚಾಂಪಿಯನ್ ಆದರು.

ಪೋರ್ಟ್ ಆಫ್ ಸ್ಪೇನ್ 2013, ಶ್ರೀಲಂಕಾ ವಿರುದ್ಧ

ಪೋರ್ಟ್ ಆಫ್ ಸ್ಪೇನ್ 2013, ಶ್ರೀಲಂಕಾ ವಿರುದ್ಧ

ಶ್ರೀಲಂಕಾ ನೀಡಿದ್ದ 202 ರನ್ ಟಾರ್ಗೆಟ್ ನ್ನು ಬೆನ್ನಟಿದ ಭಾರತಕ್ಕೆ ಕೊನೆಯ ಓವರ್ ನಲ್ಲಿ 15 ರನ್ ಗಳು ಬೇಕಾಗಿತ್ತು. ಅದರಲ್ಲಿ ಧೋನಿ ಮೊದಲ ಎಸೆತವನ್ನು ಮಿಸ್ ಮಾಡಿ ಕೊನೆ ಐದು ಎಸೆತಗಳಲ್ಲಿ 1&2 ನೇ ಎಸೆತದಲ್ಲಿ ಒಂದು ಬೌಂಡರಿ ಹಾಗೂ ಸಿಕ್ಸರ್ ಬಾರಿಸಿ ಪಂದ್ಯವನ್ನು ಫಿನಿಷ್ ಮಾಡಿದರು.

ಅಡಿಲೇಡ್ 2012, ಆಸ್ಟ್ರೇಲಿಯಾ ವಿರುದ್ಧ

ಅಡಿಲೇಡ್ 2012, ಆಸ್ಟ್ರೇಲಿಯಾ ವಿರುದ್ಧ

ಸಿಬಿ ಸರಣಿಯಲ್ಲಿ ಆಸ್ಟ್ರೇಲಿಯ ವಿರುದ್ದದ 3ನೇ ಪಂದ್ಯದಲ್ಲಿ ಕೊನೆ 4 ಬೌಲ್ ಗಳಲ್ಲಿ 12 ರನ್ ಬೇಕಾಗಿದ್ದಾಗ ಧೋನಿ ನಂತರದ ಎಸೆತದಲ್ಲಿ 112 ಮೀಟರ್ ಸಿಕ್ಸ್ ಬಾರಿಸಿದರು. ಇನ್ನೇನು 3 ಎಸೆತಗಳಲ್ಲಿ 6 ರನ್ ಗಳಷ್ಟೇ ಬಾಕಿರುವಾಗ ಫುಲ್ ಟಾಸ್ ಆಗಿಬಂದ ಬೌಲ್ ಕ್ಯಾಚ್ ನೀಡಿದರು. ಆದರೆ ಅದು ನೋಬಾಲ್ ಎಂದು ಅಂಪೈರ್ ಸೂಚಿಸಿದರು. ಆ ಎಸೆತದಲ್ಲಿ 3 ರನ್ ಗಳು ಬಂದವು. ಕೊನೆಯಲ್ಲಿ ಧೋನಿ ಸ್ಕೈರ್ ಲೆಗ್ ನಲ್ಲಿ ಹೊಡೆದು ತಂಡವನ್ನು 4 ವಿಕೆಟ್ ಗಳ ಅಂತರದಲ್ಲಿ ಗೆಲ್ಲಿಸಿಕೊಂಡು ಬಂದರು.

ಐಪಿಎಲ್ 9 ನಲ್ಲಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ.

ಐಪಿಎಲ್ 9 ನಲ್ಲಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ.

ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಪುಣೆ ತಂಡಕ್ಕೆ ಗೆಲ್ಲಲು 22 ರನ್‌ಗಳ ಅವಶ್ಯಕತೆ ಇತ್ತು. ಅಕ್ಷರ್ ಪಟೇಲ್ ಬೌಲಿಂಗ್ ನಲ್ಲಿ ಮೊದಲ ಎಸೆತದಲ್ಲಿ ಒಂದೂ ರನ್‌ ಸಿಗಲಿಲ್ಲ. ಎರಡನೇ ಎಸೆತವು ವೈಡ್ ಆಯಿತು. ನಂತರದ ಎಸೆತದಲ್ಲಿ ಲಾಂಗ್‌ ಆನ್‌ಗೆ ದೋನಿ ಸಿಕ್ಸರ್ ಎತ್ತಿದರು. ನಾಲ್ಕನೇ ಎಸೆತದಲ್ಲಿ ಬೌಂಡರಿ ಹೊಡೆದರು. ಕೊನೆಯ ಎರಡು ಎಸೆತಗಳಲ್ಲಿ 12 ರನ್‌ಗಳ ಅಗತ್ಯವಿತ್ತು. ಧೋನಿ ಎರಡೂ ಎಸೆತಗಳನ್ನು ಸಿಕ್ಸರ್ ಎತ್ತಿ ಗೆಲುವಿನ ನಗೆ ಬೀರಿದರು.

ಪಂಜಾಬ್ ವಿರುದ್ಧ ಐಪಿಎಲ್ (2010)

ಪಂಜಾಬ್ ವಿರುದ್ಧ ಐಪಿಎಲ್ (2010)

2010 ರ ಪಂಜಾಬ್ ವಿರುದ್ಧದ ಪಂದ್ಯದ ಇರ್ಫಾನ್ ಪಠಾಣ್ ಬೌಲಿಂಗ್ ನಲ್ಲಿ ಕೊನೆಯ 4 ಎಸೆತಗಳಲ್ಲಿ ಬರೋಬ್ಬರಿ 18 ರನ್ ಸಿಡಿಸಿ ಚೆನೈ ಸೂಪರ್ ಕಿಂಗ್ಸ್ ತಂಡದ ಗೆಲುವಿನ ರೂವಾರಿಯಾದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mahendra Singh Dhoni has made a name for himself finishing off games for whichever team he plays for, eclipsing Michael Bevan as the greatest ever finisher in limited overs cricket. Check out the list of best finishing innings
Please Wait while comments are loading...