ಎದುರಾಳಿಗಳೇ ಎಚ್ಚರ! ವಿರಾಟ್ ಕೊಹ್ಲಿ ಇಸ್ ಬ್ಯಾಕ್

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 11: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಅಭಿಮಾನಿಗಳಿಗೆ ಸಕತ್ ಸಂತಸದದ ಸುದ್ದಿ ಇಲ್ಲಿದೆ. ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಅವರು ಫಿಟ್ ಆಗಿದ್ದು, ಮುಂದಿನ ಐಪಿಎಲ್ 2017 ಪಂದ್ಯಕ್ಕೆ ರೆಡಿ ಎಂದು ಘೋಷಿಸಿದ್ದಾರೆ.

ಕ್ಲಿಕ್ ಮಾಡಿ: ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಗಾಯಾಳುವಾಗಿದ್ದ ಎಬಿ ಡಿ ವಿಲಿಯರ್ಸ್ ಅವರು ಪಂಜಾಬ್ ವಿರುದ್ಧದ ಪಂದ್ಯದ ಮೂಲಕ ಈ ಬಾರಿಯ ಐಪಿಎಲ್ ನಲ್ಲಿ ಭರ್ಜರಿ ಎಂಟ್ರಿ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಮುಂಬೈ ವಿರುದ್ಧದ ಮುಂದಿನ ಪಂದ್ಯಕ್ಕೆ ವಿರಾಟ್ ಕೊಹ್ಲಿ ಲಭ್ಯರಿದ್ದಾರೆ ಎಂಬ ಸುದ್ದಿ ಬಂದಿದೆ.[ಪಂಜಾಬ್ ಪಂದ್ಯವನ್ನು ಗೆದ್ದರೆ, ಎಬಿಡಿ ಪ್ರೇಕ್ಷಕರನ್ನು ಗೆದ್ದರು!]

Good news for RCB: Virat Kohli announces his return date for IPL 2017

ಪಂಜಾಬ್ ವಿರುದ್ಧ ಆರ್ ಸಿಬಿ ಹೀನಾಯ ಸೋಲು ಕಂಡಿದ್ದು, ಅಭಿಮಾನಿಗಳಿಗೆ ಸಹಜವಾಗಿ ಬೇಜಾರಾಗಿದೆ. ಸೋಲಿನ ಸಂಪೂರ್ಣ ಹೊಣೆ ಹೊರುವುದಾಗಿ ಹಂಗಾಮಿ ನಾಯಕ ಶೇನ್ ವಾಟ್ಸನ್ ಹೇಳಿದ್ದಾರೆ. ಬೆಂಗಳೂರು ತಂಡ ತನ್ನ ತವರು ನೆಲದಲ್ಲಿ ಏಪ್ರಿಲ್ 14ರಂದು 4 ಗಂಟೆಗೆ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. [ಐಪಿಎಲ್ ಪಾಯಿಂಟ್ಸ್ ಟೇಬಲ್]

ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರೋಹಿತ್ ಶರ್ಮ ನೇತೃತ್ವದ ತಂಡವನ್ನು ಎದುರಿಸಲು ಸಿದ್ಧ ಎಂದು ಕೊಹ್ಲಿ ಹೇಳಿದ್ದಾರೆ.ವೇಯ್ಟ್ ಲಿಫ್ಟಿಂಗ್ ಮಾಡುತ್ತಿರುವ ಕೊಹ್ಲಿ ಅವರು ನಾನು ಫಿಟ್ ಎಂದು ಘೋಷಿಸಿದ್ದಾರೆ.

Can't wait to get back onto the field. Almost there now 💪✌️😃. 14th April ⏳

A post shared by Virat Kohli (@virat.kohli) on Apr 11, 2017 at 1:49am PDT

ವಿಡಿಯೋ ಹಂಚಿಕೆ ತಾಣ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, 5 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ.
"Can't wait to get back onto the field. Almost there now 💪✌️😃. 14th April," ಎಂದು ಬರೆದುಕೊಂಡಿದ್ದಾರೆ.

ಆದರೆ, ಜೂನ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಮುಂದಿಟ್ಟುಕೊಂಡು ಆತುರವಾಗಿ ಮೈದಾನಕ್ಕೆ ಇಳಿಯುವುದು ಸಾಧ್ಯವಿಲ್ಲ. ನಾನು 120% ಫಿಟ್ ಎನಿಸಿದರೆ ಮಾತ್ರ ಕಣಕ್ಕಿಳಿಯುವೆ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
There is good news for Royal Challengers Bangalore (RCB) and their fans. Captain Virat Kohli has announced his date of return to action in the Indian Premier League (IPL) 2017.
Please Wait while comments are loading...