ಮಾಧ್ಯಮಗಳಿಗೆ ತಿರುಗೇಟು, ಕೊಹ್ಲಿ ಬ್ಯಾಟಿಂಗ್ ಗ್ರೇಟು: ಮ್ಯಾಕ್ಸ್ ವೆಲ್

Posted By:
Subscribe to Oneindia Kannada

ಸಿಡ್ನಿ, ಜ.22: ವಿರಾಟ್ ಕ್ಕೊಹ್ಲಿ ಅಬ್ಬರದ ಬ್ಯಾಟಿಂಗ್ ನಡುವೆ ಶತಕ ಗಳಿಸಲು ಸ್ಲೋ ಬ್ಯಾಟಿಂಗ್ ಮಾಡಿದರು ಎಂದು ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ ವೆಲ್ ಹೇಳಿದ್ದಾರೆ ಎಂದು ಬಂದಿದ್ದ ವರದಿ ಬಗ್ಗೆ ಮ್ಯಾಕ್ಸ್ ವೆಲ್ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮ ವರದಿಗಳೆಲ್ಲ ಸುಳ್ಳು, ಕೊಹ್ಲಿ ಬ್ಯಾಟಿಂಗ್ ಸೂಪರ್ ಎಂದಿದ್ದಾರೆ.

ಪಂದ್ಯದ ಸ್ಕೋರ್ ಕಾರ್ಡ್ | ಫೋಟೋ ಗ್ಯಾಲರಿ

ಆಸ್ಟ್ರೇಲಿಯಾದ ಕೆಲ ಮಾಧ್ಯಮಗಳಲ್ಲಿ ಕೊಹ್ಲಿ ಬಗ್ಗೆ ಮ್ಯಾಕ್ಸ್ ವೆಲ್ ಏನೇನೋ ಹೇಳಿದ್ದಾರೆ. ಕೊಹ್ಲಿ ತಮ್ಮ 25ನೇ ಶತಕಕ್ಕಾಗಿ ಕಾಯುತ್ತಿದ್ದರು ಎಂಬ ರೀತಿ ಮ್ಯಾಕ್ಸ್ ವೆಲ್ ಹೇಳಿಕೆ ನೀಡಿದ್ದಾರೆ ಎಂಬ ಮಾತನ್ನು ಮ್ಯಾಕ್ಸ್ ವೆಲ್ ಅಲ್ಲಗೆಳೆದಿದ್ದಾರೆ.

Glenn Maxwell

ಸರಣಿಯಲ್ಲಿ ಯಾರು ಅತಿ ಹೆಚ್ಚು ಸಮರ್ಥವಾಗಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ ಎಂದು ಕೇಳಲಾಯಿತು. ಇದಕ್ಕೆ ನಾನು ಕೊಹ್ಲಿ ಅವರು ಉತ್ತಮ ಆಟವಾಡುತ್ತಿದ್ದಾರೆ ಎಂದಷ್ಟೇ ಹೇಳಿದ್ದೀನಿ, ಕೊಹ್ಲಿ ವಿರುದ್ಧ ನಾನೇಕೆ ಏನಾದರೂ ಹೇಳಲಿ, ಅವರ ಬ್ಯಾಟಿಂಗ್ ಎಲ್ಲವನ್ನು ಹೇಳುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.[ಕೊಹ್ಲಿ 25ನೇ ಶತಕ, ಮತ್ತೆ ದಾಖಲೆಗಳು ಧ್ವಂಸ]

ಕ್ಯಾನ್ ಬೆರಾ ಪಂದ್ಯದಲ್ಲಿ ಗಾಯಗೊಂಡ ಮ್ಯಾಕ್ಸ್ ವೆಲ್ ಅವರು ಶನಿವಾರ(ಜನವರಿ 23) ನಡೆಯಲಿರುವ ಐದನೇ ಹಾಗೂ ಅಂತಿಮ ಪಂದ್ಯ ಆಡುವುದು ಅನುಮಾನವಾಗಿದೆ.[ಆಸ್ಟ್ರೇಲಿಯಾದಿಂದ ವಿಶ್ವ ದಾಖಲೆ]

ಕೊಹ್ಲಿ ಅವರ ಅಬ್ಬರದ ಬ್ಯಾಟಿಂಗ್ ಹೊರತಾಗಿಯೂ ಭಾರತ ತನ್ನ ಸ್ಕೋರಿಂಗ್ ರೇಟ್ ಜಾಸ್ತಿ ಮಾಡಿಕೊಳ್ಳಲಿಲ್ಲ ಎನ್ನುವುದು ನನ್ನ ಮಾತಿನ ಅರ್ಥ. ಚೇಸಿಂಗ್ ಸಂದರ್ಭದಲ್ಲಿ ವಿಕೆಟ್ ಉಳಿಸಿಕೊಂಡರೂ ಗುರಿ ಮುಟ್ಟಲು ಭಾರತ ಅಸಮರ್ಥವಾಯಿತು. ನಾನು ಕೊಹ್ಲಿಯನ್ನು ಟಾರ್ಗೆಟ್ ಮಾಡಿ ಏನ್ನನ್ನು ಹೇಳಿಲ್ಲ ಎಂದಿದ್ದಾರೆ.

ಈ ಪಂದ್ಯದಲ್ಲಿ ಕೊಹ್ಲಿ 106ರನ್ ಗಳಿಸಿದರು. ಐದನೇ ಪಂದ್ಯ ಶನಿವಾರ ನಡೆಯಲಿದ್ದು, ಆದಾದ ಬಳಿಕ ಉಭಯ ತಂಡಗಳು 3 ಟ್ವೆಂಟಿ 20 ಪಂದ್ಯಗಳನ್ನಾಡಲಿವೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Australian all-rounder Glenn Maxwell today clarified his comments on India's star batsman Virat Kohli and slammed the reporting in the media as "untrue".
Please Wait while comments are loading...