ಗಾಯಾಳು ರಾಹುಲ್ ಬದಲಿಗೆ ಗೌತಮ್ ಗಂಭೀರ್ ತಂಡಕ್ಕೆ ಎಂಟ್ರಿ

Posted By:
Subscribe to Oneindia Kannada

ಕೋಲ್ಕತ್ತಾ, ಸೆ. 28 : ಐತಿಹಾಸಿಕ 500ನೇ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡ ಆರಂಭಿಕ ಆಟಗಾರ, ಕರ್ನಾಟಕದ ಕೆಎಲ್ ರಾಹುಲ್ ಅವರು ಮುಂದಿನ ಎರಡು ಪಂದ್ಯಗಳಿಗೂ ಅಲಭ್ಯರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ರಾಹುಲ್ ಬದಲಿಗೆ ಗೌತಮ್ ಗಂಭೀರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಇತ್ತೀಚಿಗೆ ನಡೆದ ದುಲೀಪ್‌ ಟ್ರೋಫಿ ಟೂರ್ನಿಯಲ್ಲಿ ಗಂಭೀರ್ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಬಿಸಿಸಿಐ ಆಯ್ಕೆದಾರರು ಗಂಭೀರ್ ಅವರನ್ನು ಆಯ್ಕೆ ಮಾಡಿದ್ದಾರೆ.

Gautam Gambhir returns to India Test squad in place of injured KL RahulLeft-handed opening batsman Gautam Gambhir was today (September 27) recalled into the Indian Test squad in place of the injured KL Rahul for the remaining two Tests against New Zealand

ಎಡಗೈಆರಂಭಿಕ ಬ್ಯಾಟ್ಸ್‌ಮನ್ ಗಂಭೀರ್‌ ಅವರು ಎರಡು ವರ್ಷಗಳ ಬಳಿಕ ರಾಷ್ಟ್ರೀಯ ಟೆಸ್ಟ್‌ ತಂಡಕ್ಕೆ ಪುನರ್ ಪ್ರವೇಶ ಮಾಡಿದ್ದಾರೆ. 2014ರಲ್ಲಿ ಇಂಗ್ಲೆಂಡ್‌ ವಿರುದ್ಧ ಕೊನೆಯ ಪಂದ್ಯವಾಡಿದ್ದರು.

ಇನ್ನು ಗಾಯದ ಸಮಸ್ಯೆಯಿಂದ ವೇಗಿ ಇಶಾಂತ್ ಶರ್ಮಾ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇವರ ಬದಲಾಗಿ ಆಫ್‌ ಸ್ಪಿನ್ನರ್‌ ಜಯಂತ್‌ ಯಾದವ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ ಎಂದು ಬಿಸಿಸಿಐ ಹೇಳಿದೆ.

ಸೆಪ್ಟೆಂಬರ್ 30(ಶುಕ್ರವಾರ) ಕೋಲ್ಕತ್ತಾದಲ್ಲಿ ಭಾರತ ತನ್ನ 250ನೇ ಟೆಸ್ಟ್ (ತವರು ನೆಲ) ಆಡುತ್ತಿದ್ದು, ಈ ಮಹತ್ವದ ಪಂದ್ಯಕ್ಕೆ ಗೌತಮ್ ಗೆ ಸ್ಥಾನಸಿಕ್ಕಿದೆ.

34 ವರ್ಷ ವಯಸ್ಸಿನ ಗಂಭೀರ್ ಅವರು 56 ಟೆಸ್ಟ್ ಪಂದ್ಯಗಳನ್ನಾಡಿ 4,000 ರನ್ ಗಳಿಸಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಸತತ ನಾಲ್ಕು ಅರ್ಧ ಶತಕಗಳನ್ನು ಬಾರಿಸಿ ಗಮನ ಸೆಳೆದಿದ್ದರು.

ಮಂಗಳವಾರದಂದು ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ(ಎನ್ ಸಿಎ) ಯಲ್ಲಿ ಗೌತಮ್ ಗಂಭೀರ್ ಜತೆಗೆ ಯುವರಾಜ್ ಸಿಂಗ್, ಬರಿಂದರ್ ಸ್ರಾನ್ ಅವರು ಕೂಡಾ ಫಿಟ್ನೆಸ್ ಪರೀಕ್ಷೆಗೆ ಒಳಪಟ್ಟಿದ್ದು ವಿಶೇಷವಾಗಿತ್ತು. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Left-handed opening batsman Gautam Gambhir was today (September 27) recalled into the Indian Test squad in place of the injured KL Rahul for the remaining two Tests against New Zealand
Please Wait while comments are loading...