ಗಂಭೀರ್- ಧೋನಿಗೆ ಹಸ್ತಲಾಘವ ವಿವಾದ: ಗೌತಮ್ ತಿರುಗೇಟು

Posted By:
Subscribe to Oneindia Kannada

ನವದೆಹಲಿ, ಡಿ.29: ವಿಜಯ್ ಹಜಾರೆ ಟ್ರೋಫಿ ಸಂದರ್ಭದಲ್ಲಿ ದಿಲ್ಲಿ ಹಾಗೂ ಜಾರ್ಖಂಡ್ ತಂಡಗಳ ನಡುವೆ ನಡೆದಿದ್ದ ಧೋನಿ ಕೈ ಕುಲುಕದ ಗಂಭೀರ್ ಎಂಬ ವರದಿ ಬಗ್ಗೆ ಗೌತಮ್ ಗಂಭೀರ್ ಸ್ಪಷ್ಟನೆ ನೀಡಿದ್ದಾರೆ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಾನು ಎಂಎಸ್ ಧೋನಿಗೆ ಹಸ್ತಲಾಘವ ಮಾಡಿರಲಿಲ್ಲ ಎಂದು ತಪ್ಪು ವರದಿ ಮಾಡಿರುವ ಮಾಧ್ಯಮಗಳ ವಿರುದ್ಧ ಗೌತಮ್ ಗಂಭೀರ್ ಕಿಡಿಕಾರಿದ್ದಾಎರ್. ಈ ಬಗ್ಗೆ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದ್ದಾರೆ.

ಡಿಸೆಂಬರ್ 23 ರಂದು ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ದಿಲ್ಲಿ ತಂಡ ಜಾರ್ಖಂಡ್‌ನ್ನು ಮಣಿಸಿ ಸೆಮಿಫೈನಲ್‌ಗೆ ತಲುಪಿತ್ತು. ಆ ಪಂದ್ಯ ಕೊನೆಗೊಂಡ ನಂತರ ಗೌತಮ್ ಗಂಭೀರ್ ಎದುರಾಳಿ ತಂಡದ ಧೋನಿಗೆ ಉದ್ದೇಶಪೂರ್ವಕವಾಗಿ ಕೈಕುಲಕದೇ ನಿರ್ಲಕ್ಷಿಸಿದ್ದರು ಎಂದು ಅನೇಕ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಇದು ತಪ್ಪು ವರದಿ ಎಂದು ಎಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ಧ ಟ್ವೀಟರ್‌ನ ಮೂಲಕ ಟೀಕಿಸಿರುವ ಗಂಭೀರ್, ತಾನು ಧೋನಿಯೊಂದಿಗೆ ಹಸ್ತಲಾಘವ ಮಾಡಿರುವ ಫೋಟೊವನ್ನು ಟ್ವೀಟ್‌ನಲ್ಲಿ ಅಟ್ಯಾಚ್ ಮಾಡಿ ಉತ್ತರಿಸಿದ್ದಾರೆ.

ಗುಜರಾತ್ ಚಾಂಪಿಯನ್ : ಬೆಂಗಳೂರಿನ ಕೆಎಸ್ ಸಿಎ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಫೈನಲ್‌ನಲ್ಲಿ ದಿಲ್ಲಿ ವಿರುದ್ಧ 139 ರನ್‌ಗಳ ಭರ್ಜರಿ ಜಯ ಗಳಿಸುವ ಮೂಲಕ ಮೊದಲ ಬಾರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. 274 ರನ್‌ಗಳ ಕಠಿಣ ಸವಾಲನ್ನು ಪಡೆದ ದಿಲ್ಲಿ ತಂಡ ಜಸ್ಪ್ರೀತ್ ಬುಮ್ರಾ (5-28) ಮತ್ತು ಆರ್‌ಪಿ ಸಿಂಗ್(4-42) ದಾಳಿಗೆ ಸಿಲುಕಿ 134 ರನ್‌ಗಳಿಗೆ ಆಲೌಟಾಯಿತು.

ಮೋದಿ ಅವರ ಭೇಟಿಗಿಂತಲೂ ಹೆಚ್ಚು ಸುದ್ದಿ

ಮೋದಿ ಅವರ ಭೇಟಿಗಿಂತಲೂ ಹೆಚ್ಚು ಸುದ್ದಿ

ಈ ಹಸ್ತಲಾಘವ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗಿಂತಲೂ ಹೆಚ್ಚು ಸುದ್ದಿ ಮಾಡಿದೆ.

ಹಸ್ತಲಾಘವ ಮಾಡಿರುವ ಚಿತ್ರ ಇಲ್ಲಿದೆ

ನನ್ನ ಸ್ನೇಹಿತರೇ ಅದರಲ್ಲೂ ಮುಖ್ಯವಾಗಿ ದೃಶ್ಯ ಮಾಧ್ಯಮಗಳೇ, ನಾನು ಹಾಗೂ ಧೋನಿ ಕ್ವಾರ್ಟರ್‌ಫೈನಲ್ ನಂತರ ಹಸ್ತಲಾಘವ ಮಾಡಿರುವ ಚಿತ್ರ ಇಲ್ಲಿದೆ ನೋಡಿ'' ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.

ಎಲೆಕ್ಟ್ರಾನಿಕ್ ಮಾಧ್ಯಮ ಮಿತ್ರರೇ

ಎಲೆಕ್ಟ್ರಾನಿಕ್ ಮಾಧ್ಯಮ ಮಿತ್ರರೇ ದೃಶ್ಯ ಮಾಧ್ಯಮಗಳೇ, ಹಸ್ತಲಾಘವ ಮಾಡಿರುವ ಚಿತ್ರ ಇಲ್ಲಿದೆ ನೋಡಿ ಎಂದು ಮತ್ತೆ ಟ್ವೀಟ್ ಮಾಡಿದ್ದಾರೆ.

ಬ್ಯಾಟಿಂಗ್ ನಲ್ಲಿ ಗಂಭೀರ್ ವಿಫಲ

ಬ್ಯಾಟಿಂಗ್ ನಲ್ಲಿ ಗಂಭೀರ್ ವಿಫಲ

ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಗುಜರಾತ್ ತಂಡ ನಾಯಕ ಪಾರ್ಥಿವ್ ಪಟೇಲ್ ಶತಕ (105), ಆರ್‌ಎಚ್ ಭಟ್ (60) ಮತ್ತು ಸಿಜೆ ಗಾಂಧಿ(ಔಟಾಗದೆ 44) ಉಪಯುಕ್ತ ಕೊಡುಗೆಯ ನೆರವಿನಲ್ಲಿ ಗುಜರಾತ್ ತಂಡ ನಿಗದಿತ 50 ಓವರ್‌ಗಳಲ್ಲಿ 273 ರನ್ ಗಳಿಗಳಿಗೆ ಆಲೌಟಾಯಿತು. ನಾಯಕ ಗೌತಮ್ ಗಂಭೀರ್ (9) ವಿಫಲರಾದರು. ಬುಮ್ರಾ ಮತ್ತು ಆರ್‌ಪಿ ಸಿಂಗ್ ಹೊರತುಪಡಿಸಿದರೆ ಇತರ ಯಾರಿಗೂ ವಿಕೆಟ್ ದಕ್ಕಲಿಲ್ಲ. ದಿಲ್ಲಿಗೆ ಬೆದರಿಕೆಯನ್ನುಂಟು ಮಾಡಿದ್ದ ಅಕ್ಷರ್ ಪಟೆಲ್‌ಗೆ 5 ಓವರ್‌ಗಳಲ್ಲಿ 30 ರನ್ ನೀಡಿದರೂ ವಿಕೆಟ್ ಸಿಗಲಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gautam Gambhir on Tuesday slammed the media for wrong reporting where it was suggested that the former India opener didn't shake hands with MS Dhoni after the quarter-final of the Vijay Hazare Trophy between Delhi and Jharkhand on November 23.
Please Wait while comments are loading...