ಅರ್ಜುನ ರಣತುಂಗ ಮುಟ್ಟಿ ನೋಡಿಕೊಳ್ಳುವ ಉತ್ತರ ಕೊಟ್ಟ ಗಂಭೀರ್

Posted By:
Subscribe to Oneindia Kannada

ನವದಹೆಲಿ, ಜುಲೈ 14: 2011ರ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ರದ್ದುಗೊಳಿಸಿರುವುದಾಗಿ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಅಧ್ಯಕ್ಷ ಅರ್ಜುನ ರಣತುಂಗ ಅವರ ಆರೋಪವನ್ನು ಭಾರತದ ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಅಲ್ಲಗಳೆದಿದ್ದಾರೆ.

2011ರ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ 97 ರನ್ ಸಿಡಿಸಿದ್ದ ಗಂಭೀರ್, ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Gautam Gambhir reacts for Arjuna Ranatunga's allegations of match fixing in 2011 world cup final

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ''ರಣತುಂಗ ಹೇಳಿಕೆಗೆ ಪ್ರತಿಯಾಗಿ ನಾನೊಂದು ಹೇಳಿಕೆ ನೀಡುವುದರಿಂದ ರಣತುಂಗ ಅವರ ಹೇಳಿಕೆಗೆ ಭಾರೀ ಪ್ರಚಾರ ಕೊಡುವುದು ನನಗೆ ಇಷ್ಟವಿಲ್ಲ'' ಎಂದಿದ್ದಾರೆ.

2011ರ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಆಗಿತ್ತು : ರಣತುಂಗಾ

ತಮ್ಮ ಮಾತನ್ನು ಮುಂದುವರಿಸಿ, '' ಶ್ರೀಲಂಕಾ ತಂಡ 1996ರ ವಿಶ್ವಕಪ್ ಗೆದ್ದಾಗ, ರಣತುಂಗ ಅವರಿಗೆ ಆ ವಿಜಯ ಸರಿ ಎನ್ನಿಸಿತ್ತೇ ಎಂದು ಪ್ರಶ್ನಿಸಿದ ಗಂಭೀರ್, ಆಗ ತಂಡ ಗೆದ್ದಾಗ ಖುಷಿಪಟ್ಟು ಈಗ ತಂಡ ಸೋತಿದ್ದ ಪಂದ್ಯವನ್ನು ಗುಮಾನಿಯನ್ನು ನೋಡುವುದು ಎಷ್ಟರ ಮಟ್ಟಿಗೆ ಸರಿ? ಕ್ರಿಕೆಟ್ ರಂಗದ ಹಿರಿಯರಾಗಿರುವ ರಣತುಂಗ ಅಂಥವರೇ ಇಂಥ ಮಾತುಗಳನ್ನಾಡಿದಾಗ ಬೇಸರವಾಗುತ್ತದೆ'' ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Team India's opener Gautam Gambhir has given vigorous reaction towards Sri Lanka cricket team's former player Arjuna Ranatunga for his allegations of fixing the match of 2011 world cup final.
Please Wait while comments are loading...