ಗೌತಮ್ ಗಂಭೀರ್ ಕ್ಯಾಂಟೀನ್ ನಿಂದ ಬಡವರಿಗೆ ಉಚಿತ ಊಟ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 01 : ಟೀಂ ಇಂಡಿಯಾದ ಒಂದು ಕಾಲದ ಭರವಸೆಯ ಆಟಗಾರ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಅವರು ಬಡವರಿಗೆ ಉಚಿತವಾಗಿ ಆಹಾರ ನೀಡುವ ಕಾಯಕದಲ್ಲಿ ತೊಡಗಿದ್ದಾರೆ.

ತಮ್ಮ ಫೌಂಡೇಶನ್ ಮೂಲಕ ನವದೆಹಲಿಯ ಬಡವರಿಗೆಲ್ಲ ಉಚಿತವಾಗಿ ಆಹಾರ ಪೂರೈಸುವ ಸಮುದಾಯ ಅಡುಗೆ ಮನೆ ಯೋಜನೆಗೆ ಚಾಲನೆ ನೀಡಿದ್ದಾರೆ. ದೆಹಲಿಯ ಪಟೇಲ್ ನಗರದಲ್ಲಿ ಮೊದಲ ಕಮ್ಯೂನಿಟಿ ಕಿಚನ್ ಆರಂಭವಾಗಿದೆ.

Gautam Gambhir launches Community Kitchen campaign to feed poor

'ವಿಶ್ವಕಪ್, ಐಪಿಎಲ್ ಗೆದ್ದಾಯ್ತು. ಈಗ ಹಸಿವನ್ನು ನೀಗಿಸಿ ಹೃದಯ ಗೆಲ್ಲುವ ಸಮಯ ಅಂತಾ ಗಂಭೀರ್ ಟ್ವೀಟ್ ಮಾಡಿದ್ದಾರೆ. ಯಾರೊಬ್ಬರೂ ಹಸಿದು ಮಲಗುವಂತಾಗಬಾರದು' ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.

ತಮ್ಮ ಕಮ್ಯೂನಿಟಿ ಕಿಚನ್ ನಲ್ಲಿ ನಿಂತು ಬಡವರಿಗೆ ಊಟ ಬಡಿಸಿದ್ದಾರೆ. 365 ದಿನಗಳ ಕಾಲ ಗಂಭೀರ್ ಫೌಂಡೇಶನ್ ಬಡವರಿಗೆ ಉಚಿತವಾಗಿ ಆಹಾರ ಪೂರೈಸಲಿದೆ.

Gambhir Thanked KSCA After Winning The IPL 2017 Eliminator | Oneindia Kannada

'ಮಧ್ಯಾಹ್ನ 1 ಗಂಟೆಯಿಂದ 3 ಗಂಟೆ ತನಕ ಈ ಉಚಿತ ಸೌಲಭ್ಯ ಲಭ್ಯವಿರುತ್ತದೆ' ಎಂದಿರುವ ಗಂಭೀರ್ ಸರಣಿ ಟ್ವೀಟ್ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Through the Gautam Gambhir Foundation, the KKR skipper launched a campaign to feed the poor free of cost in New Delhi's, with Patel Nagar being the first Community Kitchen.
Please Wait while comments are loading...