ಎಂಎಸ್ ಧೋನಿ ವಿರುದ್ಧ ಮತ್ತೆ ಕಿಡಿಕಾರಿದ ಗೌತಮ್

Posted By:
Subscribe to Oneindia Kannada

ನವದೆಹಲಿ, ಸೆ. 19: ಆಯ್ಕೆದಾರರಿಂದ ಕಡೆಗಣಿಸಲ್ಪಟ್ಟಿರುವ ಭಾರತೀಯ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಅವರು ಮತೊಮ್ಮೆ ನಾಯಕ ಎಂಎಸ್ ಧೋನಿಗೆ ಚುಚ್ಚುವಂತೆ ಮಾತನಾಡಿದ್ದಾರೆ. ಕ್ರಿಕೆಟರ್ಸ್ ಕುರಿತು ಸಿನಿಮಾ ಮಾಡಬಾರದು ಎಂದು ಟೀಕಿಸಿದ್ದಾರೆ.

ಜೀವನಾಧಾರಿತ ಚಿತ್ರಗಳನ್ನು ತೆಗೆಯಲು ಇನ್ನೂ ಉತ್ತಮ ವ್ಯಕ್ತಿಗಳಿದ್ದಾರೆ ಎಂದು ಧೋನಿ ವಿರುದ್ಧ ಪರೋಕ್ಷ ದಾಳಿ ನಡೆಸಿದ್ದಾರೆ. [ಪಂದ್ಯ ಸೋತರೆ ನಮ್ಮನ್ನು ಉಗ್ರರಂತೆ ಕಾಣಲಾಗುತ್ತದೆ: ಧೋನಿ]

Gambhir takes a dig at Dhoni, says cricketers don't deserve biopics

ಧೋನಿ ಅವರ ಜೀವನ ಆಧಾರಿತ 'ಎಂ ಎಸ್ ಧೋನಿ : ದಿ ಅನ್ ಟೋಲ್ಡ್ ಸ್ಟೋರಿ' ಚಿತ್ರ ಸೆಪ್ಟೆಂಬರ್ 30ರಂದು ವಿಶ್ವದೆಲ್ಲೆಡೆ ತೆರೆಕಾಣಲು ಸಿದ್ಧವಾಗಿದೆ. ಈ ಸಂದರ್ಭದಲ್ಲಿ ಧೋನಿ ಕುರಿತ ಚಿತ್ರದ ಬಗ್ಗೆ ಪರೋಕ್ಷವಾಗಿ ಗಂಭೀರ್ ದಾಳಿ ನಡೆಸಿದ್ದಾರೆ. [ಧೋನಿಗೆ ನನ್ನ ಕಾಲ್ ರಿಸೀವ್ ಮಾಡಲು ಟೈಂ ಇಲ್ಲ: ಯುವಿ]

ಕ್ರಿಕೆಟರ್ ಗಳ ಜೀವನ ಚರಿತ್ರೆಗಳ ಬಗ್ಗೆ ನನಗೆ ನಂಬಿಕೆಯಿಲ್ಲ ನಮ್ಮ ಸಮಾಜದಲ್ಲಿ ಕ್ರಿಕೆಟರ್ ಗಳಿಗಿಂತ ಹೆಚ್ಚು ಕೊಡುಗೆ ನೀಡಿದ ಅನೇಕ ವ್ಯಕ್ತಿಗಳಿದ್ದಾರೆ. ಅವರ ಜೀವನ ಕುರಿತ ಚಿತ್ರಗಳು ತೆರೆಗೆ ಬಂದರೆ ಚೆನ್ನ ಎಂದಿದ್ದಾರೆ.

ಮೊಹಮ್ಮದ್ ಅಜರುದ್ದೀನ್ ಅವರ ಜೀವನ ಕುರಿತ 'ಅಜರ್', ದಕ್ಷಿಣ ಆಫ್ರಿಕಾದ ಕ್ರಿಕೆಟರ್ ದಿವಂಗತ ಹ್ಯಾನ್ಸಿ ಕ್ರೋನಿಯೆ ಕುರಿತ' ಹ್ಯಾನ್ಸಿ" ಎ ಟ್ರೂ ಸ್ಟೋರಿ' ಹಾಗೂ ಸಚಿನ್ ತೆಂಡೂಲ್ಕರ್ ಕುರಿತ ಸಚಿನ್ : ಎ ಬಿಲಿಯನ್ ಡ್ರೀಮ್ಸ್ ಎಂಬ ಚಿತ್ರಗಳನ್ನು ಇಲ್ಲಿ ಹೆಸರಿಸಬಹುದು. (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Out-of-favour India batsman Gautam Gambhir on Sunday (September 18) stoked a fresh controversy asserting that films shouldn't be made on cricketers but on those people who have contributed for the welfare of the country and hence are more "deserving" of biopics.
Please Wait while comments are loading...