ಟೀಂ ಇಂಡಿಯಾಗೆ ಗಂಭೀರ್ ಸೇರ್ಪಡೆಗೆ ಸಕಾಲ: ಗವಾಸ್ಕರ್

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಕೋಲ್ಕತ್ತಾ, ಏಪ್ರಿಲ್ 21: ಟೀಂ ಇಂಡಿಯಾದಿಂದ ದೂರ ಉಳಿದಿರುವ ಗೌತಮ್ ಗಂಭೀರ್ ಅವರು ಐಪಿಎಲ್ 9 ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಟೀಂ ಇಂಡಿಯಾಕ್ಕೆ ಮರಳಲು ಇದು ಸಕಾಲ ಎಂದು ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಇಂಡಿಯನ್ ಪ್ರೀಮಿಯರ್ ಲೀಗ್ 2016 ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸುತ್ತಿರುವ ಗೌತಮ್ ಗಂಭೀರ್ ಅವರು ಕಳಪೆ ಫಾರ್ಮ್ ನಿಂದಾಗಿ ಟೀಂ ಇಂಡಿಯಾದಿಂದ ದೂರ ಉಳಿದಿದ್ದಾರೆ. ಆದರೆ, ಈಗ ಗೌತಿ ತಮ್ಮ ಆಟವನ್ನು ಬದಲಿಸಿಕೊಂಡು ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದು, ಮತ್ತೆ ಟೀಂ ಇಂಡಿಯಾಕ್ಕೆ ಎಂಟ್ರಿ ಕೊಡುವ ತವಕದಲ್ಲಿದ್ದಾರೆ.[ಕೆಕೆಆರ್ ಗೆ ಆಘಾತ, ತಂಡದ ಮುಖ್ಯ ಬೌಲರ್ ಔಟ್]

ಗಂಭೀರ ಅವರ ಕಳಪೆ ಫಾರ್ಮ್ ನಿಂದಾಗಿ 2016 ರ ವಿಶ್ವ ಟಿ-20 ಟೂರ್ನಿಗೆ ಆಯ್ಕೆಯಾಗಿರಲಿಲ್ಲ. ಟೀಂ ಇಂಡಿಯಾದಲ್ಲಿ ಆರಂಭಿಕರಾಗಿ ಗಂಭೀರ್ ಸ್ಥಾನದಲ್ಲಿ ಶಿಖರ್ ಧವನ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದರೆ, ವಿಶ್ವ ಟಿ20 2016 ನಲ್ಲಿ ಧವನ್ ಅವರ ಬ್ಯಾಟ್ ನಿಂದ ಹೇಳಿಕೊಳ್ಳವಂತ ರನ್ ಗಳು ಮೂಡಿಬಂದಿಲ್ಲ. [ಅಶ್ವಿನ್ ರನ್ನು ಕಿಚಾಯಿಸಿದ ಧೋನಿ, ಕೊಹ್ಲಿ]

Gambhir can still make a comeback in the national team: Gavaskar

ಗೌತಮ್ ಗಂಭೀರ್ ಗೆ ಗುಡ್ ಚಾನ್ಸ್ : ಭಾರತ ತಂಡದಲ್ಲಿ ಗಂಭೀರ್ ಅವರ ಸ್ಥಾನವನ್ನು ತುಂಬಿರುವ ಧವನ್, ಐಪಿಲ್ 2016 ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡುತ್ತಿದ್ದು, ರನ್ ಗಳಿಸಲು ತಿಣುಕಾಡುತ್ತಿದ್ದಾರೆ. ಧವನ್ ಸತತ ವೈಫಲ್ಯ ಕಾಣುತ್ತಿದ್ದು, ಗಂಭೀರ್ ಗೆ ಗೆ ಮುಂದಿನ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸುವ ಅವಕಾಶ ದೊರೆತಿದೆ.

ಗೌತಿ ಆಡಿದ ನಾಲ್ಕು ಪಂದ್ಯಗಳಲ್ಲಿ 34, 90, 64, 38 ರನ್ ಗಳಿಸಿ ಐಪಿಎಲ್ 9ನೇ ಆವೃತ್ತಿಯಲ್ಲಿ ಗರಿಷ್ಠ ರನ್ ಸರದಾರನಾಗಿ ಮಿಂಚುತ್ತಿದ್ದಾರೆ. ಗಂಭೀರ್ ಬ್ಯಾಟಿಂಗ್ ಬಗ್ಗೆ ಪ್ರತಿಕ್ರಿಯಿಸಿರುವ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಗಂಭೀರ್ ಅವರು ಮತ್ತೆ ತಮ್ಮ ಹಳೆಯ ಆಟಕ್ಕೆ ಮರಳಿ ಬ್ಯಾಟಿಂಗ್ ನಲ್ಲಿ ಉತ್ತಮ ಲಯ ಕಂಡುಕೊಳ್ಳುತ್ತಿದ್ದಾರೆ. ಹಾಗಾಗಿ ಅವರು ಮುಂಬರುವ ಟೂರ್ನಿಗೆ ಟೀಂ ಇಂಡಿಯಾಕ್ಕೆ ಮರಳುವ ಎಲ್ಲಾ ಲಕ್ಷಣಗಳಿವೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian batting legend, Sunil Gavaskar feels that former India Opener and KKR’s captain Gautam Gambhir can still make a comeback to the national team on the basis of his continuous spectacular performance which is evident in IPL 9.
Please Wait while comments are loading...