ಬ್ರಾಡ್ಮನ್, ಸೆಹ್ವಾಗ್ ದಾಖಲೆ ಸಮಕ್ಕೆ ನಿಂತ ಧವನ್

Posted By:
Subscribe to Oneindia Kannada

ಗಾಲೆ, ಜುಲೈ 28: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಶಿಖರ್‌ ಧವನ್‌ ಅವರು ಕ್ರಿಕೆಟ್ ದಿಗ್ಗಜರಾದ ಡಾನ್ ಬ್ರಾಡ್ಮನ್, ವೀರೇಂದ್ರ ಸೆಹ್ವಾಗ್ ಅವರ ದಾಖಲೆ ಸಮಕ್ಕೆ ನಿಂತಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಹಿಡಿತ ಸಾಧಿಸಿದ್ದರೆ, ಮತ್ತೊಂದೆಡೆ ದಾಖಲೆಗಳು ಧೂಳಿಪಟವಾಗುತ್ತಿವೆ.

ಭರ್ಜರಿಯಾಗಿ 190 ರನ್‌ ಸಿಡಿಸಿ, ಟೆಸ್ಟ್ ಅಂಗಳಕ್ಕೆ ಮತ್ತೊಮ್ಮೆ ಎಂಟ್ರಿ ಕೊಟ್ಟಿರುವ 'ಗಬ್ಬರ್ ಸಿಂಗ್' ಧವನ್ ಅವರು ಟೆಸ್ಟ್ ಕ್ರಿಕೆಟ್ ಪಂದ್ಯವೊಂದರ ಸೆಷನ್ ವೊಂದರಲ್ಲಿ ಶತಕ ಬಾರಿಸಿದ್ದಾರೆ. ಈ ಸಾಧನೆಯನ್ನು ಎರಡು ಮಾಡಿರುವವರ ಪೈಕಿ ಧವನ್ ಮೂರನೇಯವರಾಗಿದ್ದಾರೆ.

Galle Test: Ind vs SL : Shikhar Dhawan matches Don Bradman, Virender Sehwag record

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನದಾಟದ ಎರಡನೇ ಸೆಷನ್ ನಲ್ಲಿ ಧವನ್‌ ಅವರು ಕೇವಲ 90 ಎಸೆತಗಳಲ್ಲಿ 126 ರನ್‌ ಬಾರಿಸಿದ್ದು ಈಗ ದಾಖಲೆಯಾಗಿದೆ.

2012 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾದಾರ್ಪಣೆ ಮಾಡಿದ್ದ ವೇಳೆ ಕೂಡಾ ಈ ಸಾಧನೆಯನ್ನು ಮಾಡಿದ್ದರು. ಅಂದು ಮೊದಲ ದಿನದಾಟದ ಎರಡನೇ ಸೆಶನ್‌ನಲ್ಲಿ ಧವನ್‌ 106 ರನ್‌ ಬಾರಿಸಿದ್ದರು.

2005 ರಲ್ಲಿ ಪಾಕ್‌ ವಿರುದ್ಧ ನಡೆದ ಟೆಸ್ಟ್‌ ಪಂದ್ಯದಲ್ಲಿ ಹಾಗೂ 2007 ರಲ್ಲಿ ಚೆನ್ನೈ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಒಂದೇ ಸೆಷನ್ ನಲ್ಲಿ ಸೆಹ್ವಾಗ್ ನೂರರ ಗಡಿ( ಮುಂದೆ 319ರನ್ ಚೆಚ್ಚಿದರು) ದಾಟಿದ್ದರು. ಡಾನ್‌ ಬ್ರಾಡ್ಮನ್‌ ಅವರು 1930 ಮತ್ತು 1934 ರಲ್ಲಿ ಇಂಗ್ಲೆಂಡ್ ವಿರುದ್ಧ ಕ್ರಮವಾಗಿ 115 ಹಾಗೂ 107 ರನ್ ಗಳಿಸಿ, ಈ ಸಾಧನೆ ಮಾಡಿದ ಮೊದಲಿಗರಾಗಿದ್ದಾರೆ.(ಅಂಕಿ ಅಂಶ ಕೃಪೆ: ಎಚ್. ಆರ್ ಗೋಪಾಲಕೃಷ್ಣ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shikhar Dhawan scored 126 runs between lunch and tea session as the Indian opener became only the third batsman after Don Bradman and Virender Sehwag in the history of Test cricket to score 100-plus runs in a session twice
Please Wait while comments are loading...