ಭಾರತಕ್ಕೆ ಇಂಗ್ಲೆಂಡ್ ಪ್ರವಾಸ, ಬೆಂಗ್ಳೂರಲ್ಲಿ 1 ಟಿ20 ಪಂದ್ಯ

Posted By:
Subscribe to Oneindia Kannada

ಬೆಂಗಳೂರು, ಜುಲೈ 15 : ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯ ವೇಳಾಪಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರದಂದು ಪ್ರಕಟಿಸಿದೆ.

ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್ ತಂಡ ಇಲ್ಲಿ 5 ಟೆಸ್ಟ್ ಪಂದ್ಯ ಹಾಗೂ 3 ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಹಾಗೂ 3 ಟ್ವೆಂಟಿ20 ಪಂದ್ಯಗಳನ್ನಾಡಲಿದೆ.

ಟೆಸ್ಟ್ ಪಂದ್ಯಗಳು ರಾಜ್ ಕೋಟ್ ನಲ್ಲಿ ನವೆಂಬರ್ 9ರಿಂದ ಆರಂಭವಾಗಲಿದೆ. ಏಕದಿನ ಪಂದ್ಯಗಳು ಪುಣೆಯಲ್ಲಿ ಜನವರಿ 15, 2017ರಿಂದ ಶುರುವಾಗಲಿದೆ. ಟ್ವೆಂಟಿ 20 ಸರಣಿ ಕಾನ್ಪುರದಲ್ಲಿ ಜನವರಿ 26ರಿಂದ ನಡೆಯಲಿದೆ.

Full schedule of India-England Test, ODI, T20I series (November 2016 to February 2017)

ಟೆಸ್ಟ್ ಸರಣಿ ಡಿಸೆಂಬರ್ 20ಕ್ಕೆ ಮುಗಿಯಲಿದ್ದು, ಇಂಗ್ಲೆಂಡ್ ತಂಡ ಕ್ರಿಸ್ ಮಸ್ ಗಾಗಿ ಸ್ವದೇಶಕ್ಕೆ ಮರಳಿದೆ ನಂತರ ಜನವರಿಯಲ್ಲಿ ಏಕದಿನ ಸರಣಿ ಆಡಲಿದೆ.

ಇಂಗ್ಲೆಂಡ್ ಆಗಮನಕ್ಕೂ ಮುನ್ನ ನ್ಯೂಜಿಲೆಂಡ್ ತಂಡ ಅಕ್ಟೋಬರ್ ನಲ್ಲಿ ಭಾರತಕ್ಕೆ ಬರಲಿದ್ದು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಲಿದೆ. ಒಟ್ಟಾರೆ ಪ್ರಸಕ್ತ ಋತುವಿನಲ್ಲಿ 13 ಟೆಸ್ಟ್ ಗಳನ್ನು ಆಡಲಿದೆ. ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ಕೂಡಾ ಭಾರತ ಪ್ರವಾಸ ಕೈಗೊಳ್ಳಲಿವೆ.

India-England series schedule Test matches to start at 9.30 AM IST

1st Test - November 9-13 (Wednesday to Sunday) - Rajkot

2nd Test - November 17-21 (Thursday to Monday) - Visakhapatnam

3rd Test - November 26-30 (Saturday to Wednesday) - Mohali

4th Test - December 8-12 (Thursday to Monday) - Mumbai

5th Test - December 16-20 (Friday to Tuesday) - Chennai

All ODIs are day-night (2.30 PM IST start)

1st ODI - January 15, 2017 (Sunday) - Pune

2nd ODI - January 19 (Thursday) - Cuttack

3rd ODI - January 22 (Sunday) - Kolkata

T20Is start at 7 PM IST

1st T20I - January 26 (Thursday) - Kanpur

2nd T20I - January 29 (Sunday) - Nagpur

3rd T20I - February 1 (Wednesday) - Bengaluru

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Board of Control for Cricket in India (BCCI) today (July 15) announced the dates and venues India-England series at home.
Please Wait while comments are loading...