ನ್ಯೂಜಿಲೆಂಡ್- ಭಾರತ ಟೆಸ್ಟ್, ಏಕದಿನ ಸರಣಿ ವೇಳಾಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಜೂನ್ 28: ಭಾರತ ತನ್ನ ತವರು ನೆಲದಲ್ಲಿ 2016-17 ಋತುವಿನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 22ರಂದು ಕಾನ್ಪುರದಲ್ಲಿ ಆಡಲಿದೆ. ಟೆಸ್ಟ್, ಏಕದಿನ ಕ್ರಿಕೆಟ್ ಸರಣಿಯ ಪೂರ್ಣ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಪ್ರಕಟಿಸಿದೆ.

ಭಾರತ ಪ್ರವಾಸದ ವೇಳೆ ನ್ಯೂಜಿಲೆಂಡ್ ತಂಡ 3 ಟೆಸ್ಟ್ ಪಂದ್ಯ ಹಾಗೂ 5 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದೆ. ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು, ಮಿಕ್ಕೆರಡು ಪಂದ್ಯಗಳು ಇಂದೋರ್ ಹಾಗೂ ಕೋಲ್ಕತ್ತಾದಲ್ಲಿ ಆಯೋಜನೆಗೊಂಡಿದೆ. [ಕೊಹ್ಲಿ ಪಡೆಯಿಂದ 49 ದಿನಗಳ ಕಾಲ ವಿಂಡೀಸ್ ಟೂರ್]

ಐದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿ ಅಕ್ಟೋಬರ್ 16ರಂದು ಧರ್ಮಶಾಲದಲ್ಲಿ ಆರಂಭವಾಗಲಿದೆ. ಅಕ್ಟೋಬರ್ 29ರಂದು ಕೊನೆಯ ಪಂದ್ಯ ವಿಶಾಖಪಟ್ಟಣಂನಲ್ಲಿ ನಡೆಯಲಿದೆ.

Full schedule of India-New Zealand Test and ODI series (September 22 to October 29)

ಟೀಂ ಇಂಡಿಯಾದ ಕೋಚ್ ಆಗಿ ಅನಿಲ್ ಕುಂಬ್ಳೆ ಅವರಿಗೆ ತವರು ನೆಲದಲ್ಲಿ ಇದು ಮೊದಲ ಸರಣಿಯಾಗಿದೆ. ಇದಕ್ಕೂ ಮುನ್ನ ಕೆರಿಬಿಯನ್ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ, ಅಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳನ್ನಾಡಲಿದೆ. ಪ್ರಸಕ್ತ ಋತುವಿನಲ್ಲಿ ಟೀಂ ಇಂಡಿಯಾ ಒಟ್ಟಾರೆ 13 ಟೆಸ್ಟ್ ಪಂದ್ಯಗಳನ್ನಾಡಲಿದೆ. ಈ ಬಗ್ಗೆ ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಕೂಡಾ ಹರ್ಷದಿಂದ ಟ್ವೀಟ್ ಮಾಡಿದ್ದಾರೆ. [13 ಟೆಸ್ಟ್, 8 ಒಡಿಐ, 3 ಟಿ20 ಟೀಂ ಇಂಡಿಯಾ ವೇಳಾಪಟ್ಟಿ]


ಭಾರತ- ನ್ಯೂಜಿಲೆಂಡ್ ಟೆಸ್ಟ್ ಹಾಗೂ ಏಕದಿನ ಸರಣಿ ವೇಳಾಪಟ್ಟಿ

ಮೊದಲ ಟೆಸ್ಟ್ : ಸೆಪ್ಟೆಂಬರ್ 22 (ಗುರುವಾರ) ರಿಂದ 26 (ಸೋಮವಾರ) (ಗ್ರೀನ್ ಪಾರ್ಕ್ ಸ್ಟೇಡಿಯಂ, ಕಾನ್ಪುರ) - 10 AM IST

ಎರಡನೇ ಟೆಸ್ಟ್ : ಸೆಪ್ಟೆಂಬರ್ 30 (ಶುಕ್ರವಾರ) ರಿಂದ ಅಕ್ಟೋಬರ್ 04 (ಮಂಗಳವಾರ) (ಹೋಳ್ಕರ್ ಸ್ಟೇಡಿಯಂ, ಇಂದೋರ್) - 10 AM IST [ಸಂಜಯ್, ಅಭಯ್ ಆಯ್ಕೆ ಮಾಡಿಕೊಂಡ ಕುಂಬ್ಳೆ]

ಮೂರನೇ ಟೆಸ್ಟ್ : ಅಕ್ಟೋಬರ್ 08 (ಶನಿವಾರ) ರಿಂದ ಅಕ್ಟೋಬರ್ 12 (ಬುಧವಾರ) (ಈಡೆನ್ ಗಾರ್ಡನ್ಸ್, ಕೋಲ್ಕತ್ತಾ) - 10 AM IST

5 ಏಕದಿನ ಕ್ರಿಕೆಟ್ ಪಂದ್ಯಗಳು (ಅಕ್ಟೋಬರ್ 16 ರಿಂದ 29)
ಮೊದಲನೇ ODI - ಅಕ್ಟೋಬರ್ 16 (ಭಾನುವಾರ) - (ಎಚ್ ಪಿಸಿಎ ಸ್ಟೇಡಿಯಂ, ಧರ್ಮಶಾಲ)

ಎರಡನೇ ODI - ಅಕ್ಟೋಬರ್ 19 (ಬುಧವಾರ) - (ಫಿರೋಜ್ ಶಾ ಕೋಟ್ಲಾ, ನವದೆಹಲಿ)

ಮೂರನೇ ODI - ಅಕ್ಟೋಬರ್ 23 (ಭಾನುವಾರ) - (ಐಎಸ್ ಬಿಂದ್ರಾ ಸ್ಟೇಡಿಯಂ, ಮೊಹಲಿ)

ನಾಲ್ಕನೇ ODI - ಅಕ್ಟೋಬರ್ 26 (ಬುಧವಾರ) - (ಜೆಎಸ್ ಸಿಎ ಸ್ಟೇಡಿಯಂ, ರಾಂಚಿ)

ಐದನೇ ODI - ಅಕ್ಟೋಬರ್ 29 (ಶನಿವಾರ) - (ಎಸಿಎ-ವಿಡಿಸಿಎ ಸ್ಟೇಡಿಯಂ, ವಿಶಾಖಪಟ್ಟಣಂ)
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's 2016-17 home season will begin on September 22 in Kanpur with the 1st Test against New Zealand, the Board of Control for Cricket in India (BCCI) announced today (June 28).
Please Wait while comments are loading...