ಬಾರ್ಡರ್ -ಗವಾಸ್ಕರ್ ಟ್ರೋಫಿ 2017 ವೇಳಾಪಟ್ಟಿ

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 21: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಶುಕ್ರವಾರ ಪ್ರಕಟಿಸಿದೆ.

ಬಾರ್ಡರ್ -ಗವಾಸ್ಕರ್ ಟ್ರೋಫಿಗಾಗಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಹಾಗೂ ಸ್ಟೀವ್ ಸ್ಮಿತ್ ನೇತೃತ್ವದ ಆಸ್ಟ್ರೇಲಿಯಾ ಸೆಣಸಾಡಲಿವೆ. ಪುಣೆ, ಬೆಂಗಳೂರು, ರಾಂಚಿ ಹಾಗೂ ಧರ್ಮಶಾಲದಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳು ನಡೆಯಲಿವೆ.[500 ಟೆಸ್ಟ್ ಪಂದ್ಯಗಳು, 32 ಟೀಂ ಇಂಡಿಯಾ ಕ್ಯಾಪ್ಟನ್ಸ್]

ಮೊದಲ ಟೆಸ್ಟ್ ಪಂದ್ಯ ಪುಣೆಯಲ್ಲಿ ಫೆಬ್ರವರಿ 23ರಿಂದ 27ರ ತನಕ ನಿಗದಿಯಾಗಿದೆ. ಕಳೆದ ಬಾರಿ 2013ರಲ್ಲಿ ಎಂಎಸ್ ಧೋನಿ ನೇತೃತ್ವ ಭಾರತದ ಎದುರು ಆಸ್ಟ್ರೇಲಿಯಾ ತಂಡ 4-0 ಅಂತರದಲ್ಲಿ ಸರಣಿ ವೈಟ್ ವಾಶ್ ಮಾಡಿಸಿಕೊಂಡಿತ್ತು.[ಭಾರತಕ್ಕೆ ಇಂಗ್ಲೆಂಡ್ ಪ್ರವಾಸ, ಬೆಂಗ್ಳೂರಲ್ಲಿ 1 ಟಿ20 ಪಂದ್ಯ]

ಟೀಂ ಇಂಡಿಯಾ ಇನ್ನೂ 10 ಟೆಸ್ಟ್ ಪಂದ್ಯ, 6 ಏಕದಿನ ಪಂದ್ಯ ಹಾಗೂ 3 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ತವರು ನೆಲದಲ್ಲಿ ಆಡಬೇಕಿದೆ. ಭಾರತ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾ ತಂಡ ಯಾವುದೇ ಏಕದಿನ ಹಾಗೂ ಟಿ20 ಪಂದ್ಯಗಳನ್ನಾಡುತ್ತಿಲ್ಲ.[ಈ ಕಾಲಘಟ್ಟದ ವಿಶ್ವ ಟೆಸ್ಟ್ XIಗೆ ಕೊಹ್ಲಿ ನಾಯಕ!]

Full schedule of India-Australia Test series (February 23 to March 29, 2017)

ಬಾರ್ಡರ್ -ಗವಾಸ್ಕರ್ ಟ್ರೋಫಿ 2017ರ ವೇಳಾಪಟ್ಟಿ:
* ಮೊದಲ ಟೆಸ್ಟ್ (ಫೆಬ್ರವರಿ 23 ರಿಂದ 27) -ಪುಣೆ[2016-17: 13 ಟೆಸ್ಟ್, 8 ಒಡಿಐ, 3 ಟಿ20 ಟೀಂ ಇಂಡಿಯಾ ವೇಳಾಪಟ್ಟಿ]
* ಎರಡನೇ ಟೆಸ್ಟ್ (ಮಾರ್ಚ್ 4 ರಿಂದ 8) -ಬೆಂಗಳೂರು
* ಮೂರನೇ ಟೆಸ್ಟ್ (ಮಾರ್ಚ್ 16 ರಿಂದ 20) -ರಾಂಚಿ
* ನಾಲ್ಕನೇ ಟೆಸ್ಟ್ (ಮಾರ್ಚ್ 25 ರಿಂದ 29) -ಧರ್ಮಶಾಲ

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Board of Control for Cricket in India (BCCI) on Friday (October 21) announced the venues and dates for India's four Test series against Australia beginning February 2017.
Please Wait while comments are loading...