ಭಾರತ- ಬಾಂಗ್ಲಾದೇಶ ಪ್ರವಾಸ ಸಂಪೂರ್ಣ ಮಾರ್ಗದರ್ಶಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 29: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಭಾರತದ ಏಕೈಕ ಟೆಸ್ಟ್ ವೇಳೆ ಬದಲಾಗಿದೆ. ಫೆಬ್ರವರಿ 8ರ ಬದಲಿಗೆ ಫೆಬ್ರವರಿ 9ರಂದು ನಡೆಯಲಿದೆ. ಫೆ.2 ರಿಂದ ಫೆ 14ರ ತನಕ ಬಾಂಗ್ಲಾದೇಶ ತಂಡ ಭಾರತದಲ್ಲಿರಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ.

ಟೀಂ ಇಂಡಿಯಾ ಸದ್ಯ ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿ ಹಾಗೂ ಮೂರು ಟಿ20 ಪಂದ್ಯವನ್ನಾಡಲಿದ್ದು, ಫೆಬ್ರವರಿ 01ರಂದು ಸರಣಿ ಮುಕ್ತಾಯವಾಗಲಿದೆ. ಸರಣಿ ನಂತರ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಟೆಸ್ಟ್ ಸರಣಿ ಆಡಲಿದೆ.[ಭಾರತ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ]

ಭಾರತ ಎ ತಂಡದ ಜತೆಗೆ ಎರಡು ದಿನಗಳ ಅಭ್ಯಾಸ ಪಂದ್ಯವನ್ನು ಬಾಂಗ್ಲಾದೇಶ ಆಡಲಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಹಾಗೂ ಬಿಸಿಸಿಐ ಹೊರಡಿಸಿರುವ ಪ್ರಕಟಣೆ ಹೀಗಿದೆ:

Full schedule of Bangladesh's historic tour of India announced

ಫೆಬ್ರವರಿ 02: ಹೈದರಾಬಾದಿಗೆ ಬಾಂಗ್ಲಾದೇಶ ತಂಡದ ಆಗಮನ
ಫೆಬ್ರವರಿ 03: ವಿಶ್ರಾಂತಿ/ತರಬೇತಿ
ಫೆಬ್ರವರಿ 04: ವಿಶ್ರಾಂತಿ/ತರಬೇತಿ

ಫೆಬ್ರವರಿ 5 ರಿಂದ 6: ಸಿಕಂದರಾಬಾದಿನಲ್ಲಿ ಭಾರತ ಎ ವಿರುದ್ಧ ಎರಡು ದಿನಗಳ ಅಭ್ಯಾಸ ಪಂದ್ಯ.

ಫೆಬ್ರವರಿ 7: ವಿಶ್ರಾಂತಿ
ಫೆಬ್ರವರಿ 8: ವಿಶ್ರಾಂತಿ

ಫೆಬ್ರವರಿ 9 ರಿಂದ 13 : ಭಾರತ ವಿರುದ್ಧ ಏಕೈಕ ಟೆಸ್ಟ್ ಪಂದ್ಯ

ಫೆಬ್ರವರಿ 14: ಭಾರತದಿಂದ ಢಾಕಾಕ್ಕೆ ಬಾಂಗ್ಲಾದೇಶ ತಂಡ ಪ್ರಯಾಣ
ಸೂಚನೆ: ವೇಳಾಪಟ್ಟಿ ಬದಲಾವಣೆಗೆ ಒಳಪಟ್ಟಿದೆ.
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangladesh will play a two-day practice match against India A ahead of their one-off Test against India, it was announced.
Please Wait while comments are loading...