ಏಷ್ಯಾಕಪ್ 2016 ಸೆಣಸಾಟಕ್ಕೆ ಸಿದ್ಧವಾದ ತಂಡಗಳು

Posted By:
Subscribe to Oneindia Kannada

ಬೆಂಗಳೂರು, ಫೆ. 17: ಐಸಿಸಿ ವಿಶ್ವ ಟಿ20 ಟೂರ್ನಿಗೂ ಮುನ್ನ ಏಷ್ಯಾದ ತಂಡಗಳಿಗೆ ಭರ್ಜರಿ ತಯಾರಿ ಸಿಗುತ್ತಿದೆ. ಈ ಬಾರಿ ಏಷ್ಯಾ ಕಪ್ 'ಟ್ವೆಂಟಿ 20' ಮಾದರಿಯಲ್ಲಿ ನಡೆಯಲಿದೆ.

ಬಾಂಗ್ಲಾದೇಶದಲ್ಲಿ ನಡೆಯಲಿರುವ ಏಷ್ಯಾ ಕಪ್ 2016 ಟೂರ್ನಿಗಾಗಿ ಫಾತುಲ್ಲಾದ ಮೈದಾನದಲ್ಲಿ ಶುಕ್ರವಾರ (ಫೆಬ್ರವರಿ 19) ರಿಂದ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಮೀರ್ ಪುರ್ ಮೈದಾನದಲ್ಲಿ ಮುಖ್ಯ ಟೂರ್ನಿ ಫೆಬ್ರವರಿ 24ರಿಂದ ಶುರುವಾಗಲಿದೆ.[ಟಿ20 ಮಾದರಿಯಲ್ಲಿ ಏಷ್ಯಾಕಪ್, ಸಂಪೂರ್ಣ ವೇಳಾಪಟ್ಟಿ]

ಕಳೆದ 12 ಅವೃತ್ತಿಯ ಏಷ್ಯಾಕಪ್ 50 ಓವರ್ ಗಳ ಪಂದ್ಯವನ್ನು ಕಂಡಿತ್ತು. ಈ ಬಾರಿ ಮೊಟ್ಟ ಮೊದಲ ಸಲ 20 ಓವರ್ ಗಳ ಪಂದ್ಯಗಳು ನಡೆಯಲಿವೆ. ಶ್ರೀಲಂಕಾ ಬಿಟ್ಟು ಮಿಕ್ಕ ಎಲ್ಲಾ 11 ದೇಶಗಳು ತಂಡಗಳನ್ನು ಪ್ರಕಟಿಸಿವೆ.[ವಿಶ್ವ ಟಿ20 ಸಮರಕ್ಕೆ ಸಜ್ಜಾದ ತಂಡಗಳ ಪಟ್ಟಿ]

ಭಾರತದಲ್ಲಿ ಐಸಿಸಿ ವಿಶ್ವ ಟಿ 20 ಟೂರ್ನಮೆಂಟ್ ಮಾರ್ಚ್ 8 ರಿಂದ ಏಪ್ರಿಲ್ 3 ರ ತನಕ 16 ತಂಡಗಳು ಚುಟುಕು ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು. [ವಿಶ್ವಟಿ20 ಸಂಪೂರ್ಣ ವೇಳಾಪಟ್ಟಿ]

ಅರ್ಹತಾ ಸುತ್ತಿನಲ್ಲಿ ಆಡುತ್ತಿರುವ ತಂಡಗಳು: ಅಫ್ಘಾನಿಸ್ತಾನ, ಹಾಂಗ್ ಕಾಂಗ್, ಒಮಾನ್ ಹಾಗೂ ಯುಎಇ (ಫೆಬ್ರವರಿ 19 ರಿಂದ 22). ಈ ಸುತ್ತಿನ ವಿಜೇತರು ಫೆಬ್ರವರಿ 24 ರಿಂದ ಮಾರ್ಚ್ 06 ತನಕ ನಡೆಯುವ ಮುಖ್ಯ ಸುತ್ತಿನಲ್ಲಿ ಆಡಲಿದೆ.

ಟೀಂ ಇಂಡಿಯಾ ತಂಡ

ಟೀಂ ಇಂಡಿಯಾ ತಂಡ

ಮಹೇಂದ್ರ ಸಿಂಗ್ ಧೋನಿ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಉಪನಾಯಕ), ಶಿಖರ್ ಧವನ್, ಅಜಿಂಕ್ಯಾ ರಹಾನೆ, ಸುರೇಶ್ ರೈನಾ, ಯುವರಾಜ್ ಸಿಂಗ್, ಮಹಮ್ಮದ್ ಶಮಿ, ರವೀಂದ್ರ ಜಜೇಜಾ, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್, ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಪವನ್ ನೇಗಿ, ಆಶಿಶ್ ನೆಹ್ರಾ.

ಪಾಕಿಸ್ತಾನ

ಪಾಕಿಸ್ತಾನ

ಶಹೀದ್ ಅಫ್ರಿದಿ (ನಾಯಕ), ಖುರಮ್ ಮನ್ಜೂರ್, ಮುಹಮ್ಮದ್ ಹಫೀಜ್, ಶೋಯಿಬ್ ಮಲ್ಲಿಕ್, ಉಮರ್ ಅಕ್ಮಲ್, ಸರ್ಫಾಜ್ ಅಹ್ಮದ್, ಬಾಬರ್ ಅಜಂ, ಇಫ್ತಿಕಾರ್ ಅಹ್ಮದ್, ಎಮಾದ್ ವಾಸಿಮ್, ಅನ್ವರ್ ಅಲಿ, ಮುಹಮ್ಮದ್ ಇರ್ಫಾನ್, ವಹಾಬ್ ರಿಯಾಜ್, ಮೊಹಮ್ಮದ್ ಆಮೀರ್, ಮುಹಮ್ಮದ್ ನವಾಜ್ ಹಾಗೂ ರುಮ್ಮನ್ ರಯೀಸ್

ಬಾಂಗ್ಲಾದೇಶ

ಬಾಂಗ್ಲಾದೇಶ

ಮಶ್ರಾಫ್ ಬಿನ್ ಮುರ್ತಝಾ (ನಾಯಕ), ಶಾಕಿಬ್ ಅಲ್ ಹಸನ್, ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಮುಹಮ್ಮದ್ ಮಿಥುನ್, ಮಹಮುದುಲ್ಲಾ, ಮುಶ್ಫಿಕುರ್ ರಹೀಂ, ಶಬ್ಬೀರ್ ರೆಹ್ಮಾನ್, ನಾಸಿರ್ ಹುಸೇನ್, ನೂರುಲ್ ಹಸನ್, ಅರಾಫತ್ ಸನ್ನಿ, ಮುಸ್ತಾಫಿಝುರ್ ರೆಹ್ಮಾನ್, ಅಲ್-ಅಮಿನ್ ಹುಸೇನ್, ತಸ್ಕಿನ್ ಅಹ್ಮದ್ ಹಾಗೂ ಅಬೂ ಹೈದರ್ ರೋನಿ.

ಅಫ್ಘಾನಿಸ್ತಾನ

ಅಫ್ಘಾನಿಸ್ತಾನ

ಮೊಹಮ್ಮದ್ ನಬಿ(ನಾಯಕ), ನವ್ರೋಜ್ ಮಂಗಲ್, ಅಸ್ಘರ್ ಸ್ಟಾನಿಕ್ಜಾಜಿ, ಸಮಿಯುಲ್ಲಾ ಶೆನ್ವಾರಿ, ಅಫ್ಸಾರ್ ಜಾಜಾಯಿ(ವಿಕೆಟ್ ಕೀಪರ್), ನಾಜಿಬುಲ್ಲಾ ಜಾರ್ದ್ರಾನ್, ನಾಸೀರ್ ಜಮಾಲ್, ಮಿರ್ವಾಯಿಸ್ ಅಶ್ರಾಫ್, ಗುಲ್ಬದಿನ್ ನಯಿಬ್, ಹಮೀದ್ ಹಸನ್, ಶಪೂರ್ ಜದ್ರಾನ್, ದವ್ಲತ್ ಜದ್ರಾನ್, ಆಫ್ತಾಬ್ ಅಲಂ, ಜಾವೇದ್ ಅಹ್ಮದಿ, ಉಸ್ಮನ್ ಘನಿ

ಓಮಾನ್

ಓಮಾನ್

ಸುಲ್ತಾನ್ ಅಹ್ಮದ್ (ನಾಯಕ, ವಿಕೆಟ್ ಕೀಪರ್), ಅಮೀರ್ ಕಲೀಂ (ಉಪ ನಾಯಕ), ಆಕೀಬ್ ಸುಲೇಹ್ರಿ, ಅದ್ನಾನ್ ಇಲ್ಯಾಸ್, ಅಮೀರ್ ಅಲಿ, ಮುನಿಸ್ ಅನ್ಸಾರಿ, ಬಿಲಾಲ್ ಖಾನ್, ಜತಿಂದರ್ ಸಿಂಗ್, ಅಜಯ್ ಲಾಲ್ಚೆಟಾ, ಮೆಹ್ರಾನ್ ಖಾನ್, ರಾಜೇಶ್ ಕುಮಾರ್ ರಾಂಪುರ, ಸೂಫ್ಯಾನ್ ಮೆಹಮೂದ್, ವೈಭವ್ ವಾಟೆಗೊಂಕರ್, ಜೀಶಾನ್ ಮಕ್ಸೂದ್, ಜೀಶಾನ್ ಸಿದ್ದಿಕಿ. Photo: ©ICC/Sportsfile

ಹಾಂಗ್ ಕಾಂಗ್

ಹಾಂಗ್ ಕಾಂಗ್

ತನ್ವೀರ್ ಅಫ್ಜಲ್ (ನಾಯಕ), ಐಜಾಜ್ ಖಾನ್, ಅಂಶಿ ರಾತ್, ಬಾಬರ್ ಹಯಾತ್, ಕ್ರಿಸ್ಟೋಫರ್ ಕಾರ್ಟರ್ (ವಿಕೆಟ್ ಕೀಪರ್), ಮಾರ್ಕ್ ಚಾಪ್ಮನ್, ಹಸೀಬ್ ಅಮ್ಜದ್, ಅದಿಲ್ ಮೆಹ್ಮೂದ್, ನದೀಂ ಅಹ್ಮದ್, ನಿಜಾಕತ್ ಖಾನ್, ಕಿಂಚಿತ್ ಶಾ, ನಿನಾದ್ ಶಾ, ತನ್ವೀರ್ ಅಹ್ಮದ್, ವಕಾಸ್ ಬರ್ಕಾತ್, ವಖಾಸ್ ಖಾನ್.

ಯುನೈಟೆಡ್ ಅರಬ್ ಎಮಿರೇಟ್ಸ್

ಯುನೈಟೆಡ್ ಅರಬ್ ಎಮಿರೇಟ್ಸ್

ಅಮ್ಜದ್ ಜಾವೇದ್ (ನಾಯಕ), ಮೊಹಮ್ಮದ್ ಕಲೀಂ, ರೊಹನ್ ಮುಸ್ತಾಫ, ಶೈಮಾನ್ ಅನ್ವರ್, ಮೊಹಮ್ಮದ್ ಶಹಜಾದ್, ಸ್ವಪ್ನಿಲ್ ಪಾಟೀಲ್(ಉಪನಾಯಕ, ವಿಕೆಟ್ ಕೀಪರ್), ಉಸ್ಮಾನ್ ಮುಷ್ತಾಕ್, ಅಹ್ಮದ್ ರಾಜ, ಜಹೀದ್ ಮಕ್ಸೂದ್, ಮೊಹಮ್ಮದ್ ನವೀದ್, ಫರ್ಹಾನ್ ಅಹ್ಮದ್, ಖಾದೀರ್ ಅಹ್ಮದ್, ಮೊಹಮ್ಮದ್ ಉಸ್ಮಾನ್, ಫಹಾದ್ ತಾರೀಕ್, ಸಕ್ಲೈನ್ ಹೈದರ್.

ಏಷ್ಯಾಕಪ್ ಸೆಣಸಾಟಕ್ಕೆ ಸಿದ್ಧವಾದ ತಂಡಗಳು

ಏಷ್ಯಾಕಪ್ ಸೆಣಸಾಟಕ್ಕೆ ಸಿದ್ಧವಾದ ತಂಡಗಳು

ಶ್ರೀಲಂಕಾ ತಂಡ: ಲಸಿತ್ ಮಾಲಿಂಗ (ನಾಯಕ), ಏಂಜೆಲೋ ಮ್ಯಾಥ್ಯೂಸ್ (ಉಪ ನಾಯಕ), ದಿನೇಶ್ ಚಂಡಿಮಾಲ್, ತಿಲಕರತ್ನೆ ದಿಲ್ಶನ್, ನಿರೋಶನ್ ಡಿಕ್ ವಾಲ, ಶೇಹಾನ್ ಜಯಸೂರ್ಯ, ಮಿಲಿಂಡಾ ಸಿರಿವರ್ದೆನ, ದಸುನ್ ಶನಕ, ಚಮರ, ಚಮರ ಕಪುಗೆಡರ, ನುವಾನ್ ಕುಲಶೇಖರ, ದುಶ್ಮಂತಾ ಚಮೀರ, ತಿಸಾರಾ ಪೆರೆರಾ, ಸಚಿತ್ರಾ ಸೇನಾನಾಯಕೆ, ರಂಗನಾ ಹೇರಾತ್, ಜೆಫ್ರಿ ವಂಡೆರ್ಸೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
With ICC World Twenty20 2016 set to start next month in India, Asian teams will have a chance to finalise their preparations as they play in the Asia Cup T20 tournament in Bangladesh.
Please Wait while comments are loading...