ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 8 : ಕಾಮೆಂಟರಿಗೆ ರವಿಶಾಸ್ತ್ರಿ ವಾಪಸ್

By Mahesh

ಬೆಂಗಳೂರು, ಏ.7: ಐಸಿಸಿ ವಿಶ್ವಕಪ್ 2015 ಟೂರ್ನಿಯಲ್ಲಿ ಟೀಂ ಇಂಡಿಯಾದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ರವಿಶಾಸ್ತ್ರಿ ಅವರು ಈಗ ಮತ್ತೊಮ್ಮೆ ತಮ್ಮ ನೆಚ್ಚಿನ ಕಾಮೆಂಟರಿ ಫೀಲ್ಡಿಗೆ ಇಳಿಯುತ್ತಿದ್ದಾರೆ. ಸುನಿಲ್ ಗವಾಸ್ಕರ್ ಹಾಗೂ ರವಿಶಾಸ್ತ್ರಿ ಅವರು ಇಂಡಿಯನ್ ಪ್ರಿಮಿಯರ್ ಲೀಗ್ 8ರಲ್ಲಿ ವೀಕ್ಷಕ ವಿವರಣೆ ನೀಡುತ್ತಾರೆ ಎಂದು ಬಿಸಿಸಿಐ ಪ್ರಕಟಿಸಿದೆ.

ಟೀಂ ಇಂಡಿಯಾ ಭಾಗವಾಗಿದ್ದ ರವಿಶಾಸ್ತ್ರಿ ಅವರು ವಿಶ್ವಕಪ್ ವೇಳೆಯಲ್ಲಿ ಟಿವಿ ಕಾಮೆಂಟರಿ ಮಾಡಲು ಸಾಧ್ಯವಾಗಿರಲಿಲ್ಲ. ಆಗಸ್ಟ್ 2014ರಿಂದ ಟೀಂ ಇಂಡಿಯಾದ ನಿರ್ದೇಶಕರಾಗಿ ರವಿ ಅವರು ಐಪಿಎಲ್ ನಲ್ಲಿ ವೀಕ್ಷಕ ವಿವರಣೆ ಮಾಡಬಹುದಾಗಿದೆ. ಐಪಿಎಲ್ ದೇಶಿ ಕ್ರಿಕೆಟ್ ಟೂರ್ನಿಯಾಗಿರುವುದರಿಂದ ಶಾಸ್ತ್ರಿ ಅವರು ಮೈಕ್ರೋಫೋನ್ ಹಿಂದೆ ಕೂರಬಹುದಾಗಿದೆ. [ಅಭಿಮಾನಿಗಳಿಗೆ ಅಗತ್ಯವಾದ ಮಾರ್ಗದರ್ಶಿ]

ಈ ಬಾರಿ 26 ಕಾಮೆಂಟೆಟರ್ಸ್ ತಂಡದಲ್ಲಿ ಭಾರತದ ಮಾಜಿ ಆಟಗಾರ್ತಿ ಅಜುಂ ಛೋಪ್ರಾ, ಇಶಾ ಗುಪ್ತಾ(ಇಂಗ್ಲೆಂಡ್), ಲಿಸಾ ಸ್ಥೆಲೆಕರ್ (ಆಸ್ಟ್ರೇಲಿಯಾ) ಹಾಗೂ ಮೆಲನಿ ಜೋನ್ಸ್ (ಆಸ್ಟ್ರೇಲಿಯಾ) ಅವರು ಕೂಡಾ ಸೇರಿದ್ದಾರೆ. [ಐಪಿಎಲ್ 8 ಮ್ಯಾಚ್ ಪುಕ್ಶೇಟಿ ನೋಡ್ರಿ!]

Full list of commentators for IPL 2015

60ಪಂದ್ಯಗಳನ್ನು ಸೋನಿ ಮ್ಯಾಕ್ಸ್ ಹಾಗೂ ಸೋನಿ ಸಿಕ್ಸ್ ನೇರ ಪ್ರಸಾರ ಮಾಡಲಿದೆ. ಏ.8ರಿಂದ ಮೇ.24ರ ತನಕ ಪಂದ್ಯಾವಳಿಗಳು ನಡೆಯಲಿದೆ. ಕೋಲ್ಕತ್ತಾದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುಂಬೈ ಇಂಡಿಯನ್ಸ್ ಎದುರಿಸಲಿದೆ. [47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್]

ಐಪಿಎಲ್ 2015 ಕಾಮೆಂಟೆಟರ್ ಗಳ ಪಟ್ಟಿ ಇಲ್ಲಿದೆ:1. ಆಕಾಶ್ ಚೋಪ್ರಾ
2. ಅಲಾನ್ ವಿಲ್ಕಿನ್ಸ್
3. ಅಜುಂ ಚೋಪ್ರಾ
4. ಬ್ರೆಂಡನ್ ಜೂಲಿಯನ್
5. ಡೇಮಿಯನ್ ಫ್ಲೆಮಿಂಗ್
6. ಡೇನಿಯಲ್ ಮಾರಿಸನ್
7. ಡೇಮಿಯನ್ ಮಾರ್ಟಿನ್
8. ಡೇವಿಡ್ ಲಾಯ್ಡ್
9. ಎಚ್ ಡಿ ಅಕರ್ ಮಾನ್
10. ಹರ್ಷ ಬೋಗ್ಲೆ
11. ಇಯಾನ್ ಬಿಷಪ್
12. ಇಶಾ ಗುಹ
13. ಕೆಪ್ಲರ್ ವೆಸೆಲ್ಸ್
14. ಲಕ್ಷ್ಮಣ್ ಶಿವರಾಮಕೃಷ್ಣನ್
15. ಲೀಸಾ ಸ್ಥಲೇಕರ್
16. ಮೈಕಲ್ ಹೇಯ್ಸ್ ಮನ್
17. ಮುರಳಿ ಕಾರ್ತಿಕ್
18. ಮೆಲನಿ ಜೋನ್ಸ್
19. ಮುಮೆಲೆಲೊ ಮಾಂಬ್ಗ್ವಾ
20. ರಮೀಜ್ ರಾಜಾ
21. ರವಿಶಾಸ್ತ್ರಿ
22. ರಸೆಲ್ ಅರ್ನಾಲ್ಡ್
23. ಸಂಜಯ್ ಮಂಜೇಕ್ರರ್
24. ಸ್ಕಾಟ್ ಸ್ಟೈರಿಸ್
25. ಸೈಮನ್ ಡೌಲ್
26. ಸುನಿಲ್ ಗವಾಸ್ಕರ್

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X