ದ್ವಿಶತಕ ಸಾಧನೆ ಮಾಡಿದ ಟೀಂ ಇಂಡಿಯಾ ಕ್ಯಾಪ್ಟನ್ಸ್

Posted By:
Subscribe to Oneindia Kannada

ಬೆಂಗಳೂರು, ಜುಲೈ 24: ಒಡಿಐ, ಟಿ20ಐ ಅಥವಾ ಟೆಸ್ಟ್ ಕ್ರಿಕೆಟ್ ಇರಲಿ ದಾಖಲೆ ಮುರಿಯುವುದನ್ನು ಅಭ್ಯಾಸ ಮಾಡಿಕೊಂಡಿರುವ ವಿರಾಟ್ ಕೊಹ್ಲಿ ಅವರ ವಿಂಡೀಸ್ ವಿರುದ್ಧದ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ದ್ವಿಶತಕ ಬಾರಿಸಿದ ಟೀಂ ಇಂಡಿಯಾ ಟೆಸ್ಟ್ ನಾಯಕರ ಪಟ್ಟಿ ಇಲ್ಲಿದೆ.

ನಾಯಕನಾಗಿ ಹಾಗೂ ಆಟಗಾರನಾಗಿ ವಿದೇಶಿ ನೆಲದಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ್ದಾರೆ. ಆದರೆ, ಕೊಹ್ಲಿಗೂ ಮುನ್ನ ನಾಲ್ವರು ನಾಯಕರು ದ್ವಿಶತಕ ಸಿಡಿಸಿದ್ದರೂ ಕೊಹ್ಲಿ ಅವರದ್ದು ಅನನ್ಯ ಸಾಧನೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 200 ರನ್(283 ಎಸೆತ, 24 ಬೌಂಡರಿ) ಗಳಿಸಿ ಔಟಾಗಿದ್ದಾರೆ. [ಕ್ಯಾಪ್ಟನ್ ಕೊಹ್ಲಿ ದ್ವಿಶತಕ, 84 ವರ್ಷಗಳ ಕಾಯುವಿಕೆ ಅಂತ್ಯ!]

27 ವರ್ಷದ ಕೊಹ್ಲಿ ಅವರು ಪ್ರಥಮ ದರ್ಜೆಯಲ್ಲೂ ದ್ವಿಶತಕ ಗಳಿಸಿರಲಿಲ್ಲ. ಈ ಹಿಂದೆ 2008ರಲ್ಲಿ ದೆಹಲಿ ಪರ ಮೊಹಮ್ಮದ್ ನಿಸ್ಸಾರ್ ಟ್ರೋಫಿಯಲ್ಲಿ ಪಾಕಿಸ್ತಾನ ಸೂಯಿ ನಾರ್ಥನ್ ಗ್ಯಾಸ್ ಪೈಪ್ ಲೈನ್ ಲಿಮಿಟೆಡ್ ವಿರುದ್ಧ 197 ರನ್ ಗಳಿಸಿದ್ದೇ ಗರಿಷ್ಠ ಸಾಧನೆಯಾಗಿತ್ತು

ನಾಯಕನಾಗಿ ವಿಂಡೀಸ್ ನೆಲದಲ್ಲಿ ಶತಕ ಬಾರಿಸಿದ ಭಾರತದ 3ನೇ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ. 1982-83ರಲ್ಲಿ ಕಪಿಲ್ ದೇವ್ ಅಜೇಯ 100 ಮತ್ತು 2006ರಲ್ಲಿ ರಾಹುಲ್ ದ್ರಾವಿಡ್(146) ಶತಕ ಬಾರಿಸಿದ್ದರು. ವಿಂಡೀಸ್​ನಲ್ಲಿ ಶತಕ ಬಾರಿಸಿದ ವಿಶ್ವದ 8ನೇ ನಾಯಕ ಕೊಹ್ಲಿ.

1932 ರಿಂದ ಇಲ್ಲಿ ತನಕ ಟೀಂ ಇಂಡಿಯಾ 247ಕ್ಕೂ ಅಧಿಕ ಟೆಸ್ಟ್ ಕ್ರಿಕೆಟ್ ಆಡಿದ್ದರೂ ಯಾವೊಬ್ಬ ನಾಯಕನು ವಿದೇಶದಲ್ಲಿ 200 ರನ್ ಗಡಿ ದಾಟಿರಲಿಲ್ಲ. ಕೊಹ್ಲಿಗೂ ಮುನ್ನ ದ್ವಿಶತಕ ಬಾರಿಸಿದ ಪಟೌಡಿ, ಗವಾಸ್ಕರ್, ಸಚಿನ್, ಧೋನಿ ಎಷ್ಟು ಗಳಿಸಿದ್ದರು ಮುಂದೆ ಓದಿ...

ಮನ್ಸೂರ್ ಆಲಿ ಖಾನ್ ಪಟೌಡಿ

ಮನ್ಸೂರ್ ಆಲಿ ಖಾನ್ ಪಟೌಡಿ

ಮನ್ಸೂರ್ ಆಲಿ ಖಾನ್ ಪಟೌಡಿ : 203 ಅಜೇಯ vs ಇಂಗ್ಲೆಂಡ್, ದೆಹಲಿ, 1964. Image from Youtube.

ಸುನಿಲ್ ಗವಾಸ್ಕರ್

ಸುನಿಲ್ ಗವಾಸ್ಕರ್

ಸುನಿಲ್ ಗವಾಸ್ಕರ್ : 205 vs ವೆಸ್ಟ್ ಇಂಡೀಸ್, ಮುಂಬೈ, 1978. ವಿಂಡೀಸ್ ವಿರುದ್ಧ ಒಟ್ಟಾರೆ 13 ಶತಕಗಳಿಸಿದ ಸಾಧನೆ ಮಾಡಿದ್ದಾರೆ.

 ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್ : 217 vs ನ್ಯೂಜಿಲೆಂಡ್, ಅಹಮದಾಬಾದ್,1999

ಮಹೇಂದ್ರ ಸಿಂಗ್ ಧೋನಿ

ಮಹೇಂದ್ರ ಸಿಂಗ್ ಧೋನಿ

ಮಹೇಂದ್ರ ಸಿಂಗ್ ಧೋನಿ : 224 vs ಆಸ್ಟ್ರೇಲಿಯಾ, ಚೆನ್ನೈ, 2013.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 200 ರನ್, ಜುಲೈ 22, 2016, ಆಂಟಿಗ್ವಾ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Virat Kohli has made it a habit to set records. It was no surprise that he had one more achievement to his name when he hit a double century against West Indies in the 1st Test on Friday (July 22).
Please Wait while comments are loading...