ರಾಂಚಿಯಲ್ಲಿ ಥಿಸ್ಸರ ಪೆರೇರಾಗೆ ಭಾರತ ಕೊಟ್ಟ ಉಡುಗೊರೆ ಏನು?

Subscribe to Oneindia Kannada

ರಾಂಚಿ, ಫೆಬ್ರವರಿ, 13: ಎರಡನೇ ಟಿ-20 ಯಲ್ಲಿ ಭಾರತ ಗೆದ್ದು ಬೀಗಿದೆ. ಆದರೆ ಶ್ರೀಲಂಕಾದ ಥಿಸ್ಸರ ಪೆರೇರಾ ಹ್ಯಾಟ್ರಿಕ್ ಸಾಧನೆ ಮಾಡಿ ದಾಖಲೆಯನ್ನು ನಿರ್ಮಿಸಿದ್ದಾರೆ.

ಮಧ್ಯಮ ವೇಗದ ಬಲಗೈ ಬೌಲರ್ ಎಸೆದ 19ನೇ ಓವರ್ ನ ಕೊನೇ 3 ಎಸೆತಗಳಲ್ಲಿ ವಿಕೆಟ್ ಕಬಳಿಸಿದರು. ಹಾದಿ೯ಕ್ ಪಾ೦ಡ್ಯ, ಸುರೇಶ್ ರೈನಾ ಹಾಗೂ ಯುವರಾಜ್ ಸಿ೦ಗ್ ವಿಕೆಟ್ ಉರುಳಿಸಿ ಟಿ20ಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ನಾಲ್ಕನೇ ಬೌಲರ್ ಎನಿಸಿದರು.[ರಾಂಚಿ ಟಿ20: ಶ್ರೀಲಂಕಾ ವಿರುದ್ಧ ಭಾರತಕ್ಕೆ 69 ರನ್ ಗಳಿಂದ ಜಯ]

cricket

ಏಕದಿನ ಮತ್ತು ಟಿ-20 ಎರಡರಲ್ಲೂ ಹ್ಯಾಟ್ರಿಕ್ ಸಾಧನೆ ಮಾಡಿದ ಶ್ರೇಯ ಪಡೆದುಕೊಂಡರು. ಆಸ್ಟ್ರೇಲಿಯಾದ ಬ್ರೇಟ್ ಲೀ ನಂತರ ಪರೇರಾ ಈ ದಾಖಲೆ ಪಟ್ಟಿಗೆ ಸೇರಿದರು. ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಹಾರ್ದಿಕ್ ಪಾಂಡ್ಯಾ ಮತ್ತು ಸುರೇಶ್ ರೈನಾರನ್ನು ಮೊದಲು ಬಲಿ ಪಡೆದ ಪೆರೇರಾ ಕೊನೆ ಎಸೆತದಲ್ಲಿ ಯುವರಾಜ್ ಸಿಂಗ್ ಅವರನ್ನು ಶೂನ್ಯಕ್ಕೆ ಕೆಡವಿದೆರು.[ಸೋಲಿನಲ್ಲೂ ದಾಖಲೆ ಬರೆದ ಟೀಂ ಇಂಡಿಯಾ]

ಟಿ-20 ಹ್ಯಾಟ್ರಿಕ್ ಸಾಧಕರ ಪಟ್ಟಿ
* ಬ್ರೇಟ್ ಲೀ(ಆಸ್ಟ್ರೇಲಿಯಾ) ಬಾಂಗ್ಲಾ ವಿರುದ್ಧ-ಕೇಪ್ ಟೌನ್-2007(ಶಕಿಬ್ ಉಲ್ ಹಸನ್, ಮಶ್ರಫೃಏ ಮೋರ್ತಜಾ, ಅಲೋಕ್ ಕಪಾಲಿ)
*ಜೆಕಬ್ ಓರಾಮ್(ನ್ಯೂಜಿಲೆಂಡ್) ಶ್ರೀಲಂಕಾ ವಿರುದ್ಧ ಕೋಲಂಬೋ-2009(ಅಂಜಿಲೋ ಮ್ಯಾಥೂಸ್, ಮಾಲಿಂಗ ಭಂಡಾರ, ಕುಲಶೇಖರ)
* ಟಿಮ್‌ ಸೌಧಿ(ನ್ಯೂಜಿಲೆಂಡ್) ಪಾಕ್ ವಿರುದ್ಧ ಅಕ್ಲಾಂಡ್-2010( ಯುನಿಸ್ ಖಾನ್, ಮೊಮಹದ್ ಹಫೀಜ್, ಉಮರ್ ಅಕ್ಮಲ್)
* ಥಿಸ್ಸರ ಪೆರೇರಾ(ಶ್ರೀಲಂಕಾ) ಭಾರತದ ವಿರುದ್ಧ, ರಾಂಚಿ-2016(ಹಾರ್ದಿಕ್ ಪಾಂಡ್ಯಾ ಸುರೇಶ್ ರೈನಾ, ಯುವರಾಜ್ ಸಿಂಗ್ )(ಒನ್ ಇಂಡಿಯಾ ನ್ಯೂಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sri Lanka's Thisara Perera became only the 4th bowler in Twenty20 International's short history to take a hat-trick. He achieved the feat here tonight (February 12) against India.
Please Wait while comments are loading...