ಐಪಿಎಲ್ 10: ಹರಾಜಾಗುವ 351 ಆಟಗಾರರ ಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 14: ಇಂಡಿಯನ್ ಪ್ರೀಮಿಯರ್ ಲೀಗ್ ನ 10ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಫೆಬ್ರವರಿ 20ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಇಂಗ್ಲೆಂಡಿನ ಇಯಾನ್ ಮಾರ್ಗನ್, ಬೆನ್ ಸ್ಟೋಕ್ಸ್ ಹಾಗೂ ಭಾರತದ ವೇಗಿ ಇಶಾಂತ್ ಶರ್ಮ ಅವರಿಗೆ ಭರ್ಜರಿ ರೇಟ್ ನಿಗದಿಯಾಗಿದ್ದು ಗೊತ್ತೇ ಇದೆ. ಈಗ ಹರಾಜಾಗಿದೆ ಸಿದ್ಧರಾಗಿರುವ ಎಲ್ಲಾ 351 ಆಟಗಾರರ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ.

ಒಟ್ಟು 7 ಆಟಗಾರರಿಗೆ 2 ಕೋಟಿ ರು ಮೂಲ ಬೆಲೆ ನಿಗದಿ ಮಾಡಲಾಗಿದೆ.ಕ್ರಿಸ್ ವೋಕ್ಸ್ , ಮಿಚೆಲ್ ಜಾನ್ಸನ್ ಹಾಗೂ ಶ್ರೀಲಂಕಾ ನಾಯಕ ಏಂಜೆಲೋ ಮ್ಯಾಥ್ಯೂಸ್, ವೇಗಿ ಪ್ಯಾಟ್ ಕಮಿನ್ಸ್ ಅವರು ಕೂಡಾ 2 ಕೋಟಿ ರು ಪಟ್ಟಿಯಲ್ಲಿದ್ದಾರೆ. ಫೆಬ್ರವರಿ 20ರಂದು ಹರಾಜು ಪ್ರಕ್ರಿಯೆ ನಡೆಯಲಿದೆ.[ಯಾವ ತಂಡದಲ್ಲಿ ಯಾವ ಆಟಗಾರರು ಉಳಿದುಕೊಂಡಿದ್ದಾರೆ?]

Full list of cricketers (351) for IPL Players Auction 2017


ಬಹು ನಿರೀಕ್ಷಿತ ಟ್ವೆಂಟಿ20 ಟೂರ್ನಮೆಂಟ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 10 ನೇ ಆವೃತ್ತಿ ಏಪ್ರಿಲ್ 5 ರಿಂದ ಆರಂಭವಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇತ್ತೀಚೆಗೆ ಪ್ರಕಟಿಸಿದೆ.[ಐಪಿಎಲ್ 2017: ತಂಡದಿಂದ ಹೊರಕ್ಕೆ ಹೋದ ಆಟಗಾರರು]

2017ರ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಸರಿ ಸುಮಾರು 143.3 ಕೋಟಿ ರು ಹರಾಜಿನಲ್ಲಿ ಬಿಕರಿಯಾಗುವ ನಿರೀಕ್ಷೆಯಿದೆ. ಪ್ರತಿ ತಂಡದಲ್ಲಿ ವಿದೇಶಿ ಆಟಗಾರರು ಸೇರಿದಂತೆ 27 ಆಟಗಾರರು ಇರಲಿದ್ದಾರೆ. ಒಟ್ಟಾರೆ, 28 ಮಂದಿ ವಿದೇಶಿ ಆಟಗಾರರು ಸೇರಿ 76 ಆಟಗಾರರು ಹರಾಜಿಗೆ ಒಳಪಡುತ್ತಿದ್ದಾರೆ.[ಮಾರ್ಗನ್, ಸ್ಟೋಕ್ಸ್, ಇಶಾಂತ್ ಗೆ ಭರ್ಜರಿ ರೇಟ್]

ಹರಾಜಾಗುತ್ತಿರುವ ಆಟಗಾರರ ಪೂರ್ಣ ಪಟ್ಟಿ ಇಲ್ಲಿದೆ ಕ್ಲಿಕ್ ಮಾಡಿ

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Indian Premier League (IPL) 2017 Players Auction will feature 351 cricketers, it was announced today (February 14).
Please Wait while comments are loading...