100ನೇ ಪಂದ್ಯದಲ್ಲಿ 100 ಬಾರಿಸಿದ ಹಶೀಂ ಆಮ್ಲಾ

Posted By:
Subscribe to Oneindia Kannada

ಜೋಹಾನ್ಸ್ ಬರ್ಗ್, ಜನವರಿ 12 : ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಹಶೀಂ ಆಮ್ಲಾ ಅವರಿ ಇಂದು(ಜನವರಿ 12) ವಿಶಿಷ್ಟ ಸಾಧನೆ ಮಾಡಿದ್ದಾರೆ. ತಮ್ಮ ವೃತ್ತಿ ಬದುಕಿನ ನೂರನೇ ಪಂದ್ಯದಲ್ಲಿ ಶತಕ ಬಾರಿಸಿ, ದಿಗ್ಗಜರ ಸಾಲಿಗೆ ಸೇರಿದ್ದಾರೆ. ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಈ ದಾಖಲೆ ಬರೆದಿದ್ದಾರೆ.

ಬಲಗೈ ಬ್ಯಾಟ್ಸ್ ಮನ್ ಆಮ್ಲಾ ಅವರು ನೂರನೇ ಪಂದ್ಯದಲ್ಲಿ ಶತಕ ಬಾರಿಸಿದ ಆಟಗಾರರ ಪೈಕಿ 7ನೇ ಆಟಗಾರರಾಗಿದ್ದಾರೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರಹಾಂ ಸ್ಮಿತ್ ಅವರು ಈ ಸಾಧನೆ ಮಾಡಿದ್ದರು.

Full list of batsmen scoring 100 in 100th Test after Hashim Amla joins elite club

33 ವರ್ಷ ವಯಸ್ಸಿನ ಆಮ್ಲಾ ಅವರು ಇಂದು ತಮ್ಮ 26ನೇ ಶತಕ ದಾಖಲಿಸಿದರು. ಇದಕ್ಕೂ ಮುನ್ನ ಕಳೆದ ನಾಲ್ಕು ಇನ್ನಿಂಗ್ಸ್ ಗಳಲ್ಲಿ ಕ್ರಮವಾಗಿ 20,28,29 ಹಾಗೂ 0 ಗಳಿಸಿ ಕಳಪೆ ಪ್ರದರ್ಶನ ನೀಡಿದ್ದರು.

100ನೇ ಪಂದ್ಯದಲ್ಲಿ ನೂರು ರನ್ ಗಳಿಸಿದ ಸಾಧಕರು:

* 104 - ಕಾಲಿನ್ ಕೌಡ್ರೆ(ಇಂಗ್ಲೆಂಡ್) Vs ಆಸ್ಟ್ರೇಲಿಯಾ, ಬರ್ಮಿಂಗ್ ಹ್ಯಾಮ್ , 1968

* 145 - ಜಾವೇದ್ ಮಿಯಾಂದಾದ್(ಪಾಕಿಸ್ತಾನ) Vs ಭಾರತ, ಲಾಹೋರ್, 1989

* 149 - ಗೊರ್ಡನ್ ಗ್ರೀನಿಡ್ಜ್ (ವೆಸ್ಟ್ ಇಂಡೀಸ್) Vs ಇಂಗ್ಲೆಂಡ್, ಸೈಂಟ್ ಜಾನ್ಸ್ (ಅಂಟಿಗುವಾ), 1990
* 105 - ಅಲೆಕ್ ಸ್ಟೀವರ್ಟ್ (ಇಂಗ್ಲೆಂಡ್) Vs ವೆಸ್ಟ್ ಇಂಡೀಸ್,ಮ್ಯಾಂಚೆಸ್ಟರ್ , 2000
* 184 -ಇನ್ಜಾಮಾನ್ ಉಲ್ ಹಕ್ (ಪಾಕಿಸ್ತಾನ) Vs ಭಾರತ, ಬೆಂಗಳೂರು, 2005
* 120 - ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) Vs ದಕ್ಷಿಣ ಆಫ್ರಿಕಾ, ಸಿಡ್ನಿ, 2006
* 143 not out - (ಆಸ್ಟ್ರೇಲಿಯಾ) Vs ದಕ್ಷಿಣ ಆಫ್ರಿಕಾ, ಸಿಡ್ನಿ, 2006

* 131 - ಗ್ರಹಾಂ ಸ್ಮಿತ್ (ದಕ್ಷಿಣ ಆಫ್ರಿಕಾ) Vs ಇಂಗ್ಲೆಂಡ್, ಓವಲ್(ಲಂಡನ್), 2012
* 115 not out -ಹಶೀಂ ಆಮ್ಲಾ (ದಕ್ಷಿಣ ಆಫ್ರಿಕಾ) (ಈ ಲೇಖನ ಬರೆಯುವ ವೇಳೆಗೆ) Vs ಶ್ರೀಲಂಕಾ, ಜೊಹಾನ್ಸ್ ಬರ್ಗ್,2017

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
South Africa's Hashim Amla today (January 12) achieved a rare feat during his 100th Test match, against Sri Lanka, here at the New Wanderers Stadium.
Please Wait while comments are loading...