ವಿಶ್ವ ಟಿ20: 6 ಕ್ರಿಕೆಟ್ ಸ್ಟೇಡಿಯಂಗೆ ಬಂತು ಫ್ರೀ ರಿಲಯನ್ಸ್ ವೈಫೈ

By: ರಮೇಶ್ ಬಿ
Subscribe to Oneindia Kannada

ನವದೆಹಲಿ. ಮಾರ್ಚ್ 08: ಆರನೇ ಆವೃತ್ತಿಯ ವಿಶ್ವ ಟ್ವೆಂಟಿ20 ಸಮರ ಇಂದಿನಿಂದ (ಮಾರ್ಚ್ 08) ಆರಂಭಗೊಂಡಿದೆ. ಅಭಿಮಾನಿಗಳಿಗೆ ಸಂತಸವನ್ನು ಇನ್ನಷ್ಟು ಹೆಚ್ಚಿಸಲು ರಿಲಯನ್ಸ್ ಕಂಪನಿ ಮುಂದೆ ಬಂದಿದ್ದು, ಪ್ರಮುಖ ಕ್ರೀಡಾಂಗಣಗಳಲ್ಲಿ ವೈಫೈ ಸೌಲಭ್ಯ ಒದಗಿಸುತ್ತಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ಭಾರತದಲ್ಲಿರುವ ಪ್ರಮುಖ ಆರು ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ವಿಶ್ವ ಟಿ20 ನಿಮಿತ್ತ ಪ್ರೇಕ್ಷರಿಗಾಗಿ ಉಚಿತ ವೈಫೈ ಸೌಲಭ್ಯವನ್ನು ಒದಗಿಸಲು ರಿಲಯನ್ಸ್ ಜಿಯೋ ಇನ್ಫೋಕಾಂ ಕಂಪನಿ ಮುಂದೆ ಬಂದಿರುವುದು ಕ್ರೀಡಾಭಿಮಾನಿಗಳಿಲ್ಲಿ ಸಂತೋಷವನ್ನುಂಟು ಮಾಡಿದೆ.

Good news! Free WiFi at 6 stadiums during World T20

ಇದುವರೆಗೆ ನಾವು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಸೇರಿದಂತೆ ಹಲವು ಕಡೆಗಳಲ್ಲಿ ಉಚಿತ ವೈಫೈ ಇರುವುದನ್ನು ನೋಡಿದ್ದೇವೆ ಆದರೆ, ಕ್ರಿಕೆಟ್ ಮೈದಾನದಲ್ಲಿ ಕ್ರಿಕೆಟ್ ನೋಡುವುದರ ಜೊತೆಗೆ ಉಚಿತವಾಗಿ ಇಂಟರ್ನೆಟ್ ನಲ್ಲಿ ಕೈ ಆಡಿಸಲಿ ಎಂದು ಇದೇ ಮೊದಲ ಬಾರಿಗೆ ಪ್ರೇಕ್ಷಕರಿಗೆ ಉಚಿತ ವೈಫೈ ಸೌಲಭ್ಯವನ್ನು ರಿಲಯನ್ಸ್ ಜಿಯೋ ಇನ್ಫೋಕಾಂ ಒದಗಿಸುತ್ತಿರುವುದು ಒಂದು ಒಳ್ಳೆಯ ಸಂಗತಿಯಾಗಿದೆ.[ವಿಶ್ವ ಟಿ20: ಭಾರತ-ಪಾಕ್ ಪಂದ್ಯಕ್ಕೆ ತೀವ್ರ ವಿರೋಧ]

ಭಾರತದ ಪ್ರಮುಖ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗಳಾದ ಈಡನ್ ಗಾರ್ಡನ್(ಕಲ್ಕತ್ತಾ), ಎಂ ಚಿನ್ನಸ್ವಾಮಿ ಕ್ರೀಡಾಂಗಣ (ಬೆಂಗಳೂರು), ಫಿರೋಜ್ ಶಾ ಕೋಟ್ಲಾ (ದೆಹಲಿ), ವಾಂಖೆಡೆ (ಮುಂಬೈ), ಐಎಸ್ ಬಿಂದ್ರಾ (ಮೊಹಲಿ), ಹೆಚ್ ಪಿಸಿಎ ಮೈದಾನ (ಧರ್ಮಶಾಲಾ) ಈ ಎಲ್ಲಾ ಸ್ಟೇಡಿಯಂಗಳಲ್ಲಿ ಉಚಿತವಾಗಿ ರಿಲಯನ್ಸ್ ವೈಫೈ ನೀಡಲು ನಿರ್ಧರಿಸಲಾಗಿದೆ ಎಂದು ಆರ್ ಜೆಎಲ್ ಕಂಪನಿ ಪ್ರಕಟಿಸಿದೆ. [ಐಸಿಸಿ ವಿಶ್ವ ಟ್ವೆಂಟಿ20 ಟೂರ್ನಿಗೆ ಫುಲ್ ಗೈಡ್]

Good news! Free WiFi at 6 stadiums during World T20

ಈ ಹಿಂದೆ ಏಪ್ರಿಲ್ 2015 ರಲ್ಲಿ ವಾಂಖೆಡೆ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಭಾರತ ಏಕದಿನ ಸರಣಿಗೆ ಇದೇ ಕಂಪನಿ ಉಚಿತ ವೈಫೈಯನ್ನು ಪ್ರೇಕ್ಷಕರಿಗೆ ಒದಗಿಸಿ ದಾಖಲೆ ನಿರ್ಮಿಸಿತು. ಸೆಕೆಂಡ್ ಗೆ ಸುಮಾರು 15-35 ಮೆಗಾ ಬೈಟ್ ರಷ್ಟು ವೇಗದಲ್ಲಿ ಈ ರಿಲಯನ್ಸ್ ವೈಫೈ ಕಾರ್ಯ ನಿರ್ವಹಿಸುತ್ತದೆ. [ಸೆಹ್ವಾಗ್ ಆಯ್ಕೆಯ ಫೇವರಿಟ್ 4 ತಂಡ?]

ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ 650 ಎಕ್ಸಸ್ ಪಾಯಿಂಟ್ ಗಳನ್ನು ನಿರ್ಮಿಸಿ ಸುಮಾರು 40,000 ಪ್ರೇಕ್ಷಕರಿಗೆ ದೊರೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 35,000, ಮೊಹಾಲಿ 26,000, ಧರ್ಮಶಾಲಾ 23,000, ವಾಂಖೆಡೆ 33,000, ಮತ್ತು ಆರನೇ ಆವೃತ್ತಿ ಟಿ-20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಣಿ ಆಗಲಿರುವ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ಕೊಲ್ಕತ್ತಾ ಕ್ರೀಡಾಂಗಣದಲ್ಲಿ 68,000 ಜನಕ್ಕೆ ಈ ವೈಫೈ ತಲುಪಲಿದೆ ಎಂದು ರಿಲಯನ್ಸ್ ಜಿಯೋ ಇನ್ಫೋಕಾಂ ತಿಳಿಸಿದೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
There is good news for cricket fans who have booked tickets for the upcoming T20 World Cup matches.Reliance Jio Infocomm will offer complementary WiFi service, Jionet, at the six main stadiums across the country for T20 World Cup matches.
Please Wait while comments are loading...