ಕ್ಯಾನ್ಸರಿಗೆ ಭಾರತದ ಹಿರಿಯ ಕ್ರಿಕೆಟರ್ ಬಲಿ

Posted By:
Subscribe to Oneindia Kannada

ಮುಂಬೈ, ಮೇ 16: ಭಾರತದ ಮಾಜಿ ಟೆಸ್ಟ್ ಕ್ರಿಕೆಟರ್ ದೀಪಕ್ ಶೋಧನ್ (ರೋಶನ್ ಹರ್ಷದ್ಲಾಲ್ ಶೋಧನ್) ಅವರು ಸೋಮವಾರ (ಮೇ 16) ವಿಧಿವಶರಾಗಿದ್ದಾರೆ. ದೀಪಕ್ ಅವರಿಗೆ 87ವರ್ಷ ವಯಸ್ಸಾಗಿತ್ತು. ಕೆಲ ಕಾಲದಿಂದ ಶ್ವಾಸಕೋಶದ ಕ್ಯಾನ್ಸರಿನಿಂದ ಬಳಲುತ್ತಿದ್ದರು.

ಅಹಮದಾಬಾದಿನ ಸ್ವಗೃಹದಲ್ಲಿ ವಿಧಿವಶರಾದ ದೀಪಕ್ ಅವರು ಭಾರತ ಪರ ಟೆಸ್ಟ್ ಕ್ರಿಕೆಟ್ ಗೆ ಎಂಟ್ರಿ ಕೊಟ್ಟ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ ದಾಖಲೆ ಹೊಂದಿದ್ದರು. 87ನೇ ವಯಸ್ಸಿನಲ್ಲಿ ಮಾಜಿ ಟೆಸ್ಟ್ ಕ್ರಿಕೆಟರ್ ಗಳ ಪೈಕಿ ಅತ್ಯಂತ ಹಿರಿಯ ಜೀವಿಯಾಗಿದ್ದರು.

Former Test cricketer Deepak Shodhan passes away

ಭಾರತ ತಂಡದ ಪರ ಕೇವಲ ಮೂರು ಟೆಸ್ಟ್ ಪಂದ್ಯಗಳನ್ನಾಡಿದರೂ ತಮ್ಮ ಛಾಪು ಮೂಡಿಸುವುದರಲ್ಲಿ ದೀಪಕ್ ಸಫಲರಾಗಿದ್ದರು. ಎಡಗೈ ಬ್ಯಾಟ್ಸ್ ಮನ್ ಹಾಗೂ ಮಧ್ಯಮ ವೇಗಿಯಾಗಿ ಕಣಕ್ಕಿಳಿದು ಭಾರತವನ್ನು ಸೋಲಿನಿಂದ ಕಾಪಾಡಿದ್ದರು.

ಪಾಕಿಸ್ತಾನ ವಿರುದ್ಧ ತಮ್ಮ ಚೊಚ್ಚಲ ಪಂದ್ಯದಲ್ಲೇ ಅಜೇಯ 110ರನ್ ಬಾರಿಸಿ ಎಲ್ಲರ ಗಮನ ಸೆಳೆದಿದ್ದರು. ಭಾರತ ಹಾಗೂ ಪಾಕಿಸ್ತಾನ ವಿಭಜನೆ ನಂತರ 1952-53ರಲ್ಲಿ ಮೊದಲ ಬಾರಿಗೆ ನಡೆದ ಟೆಸ್ಟ್ ಸರಣಿಯಲ್ಲಿ ದೀಪಕ್ ಆಡಿದ್ದರು. ಕೋಲ್ಕತ್ತಾದಲ್ಲಿ ಐದನೇ ಹಾಗೂ ಅಂತಿಮ ಪಂದ್ಯ ಡ್ರಾ ಆಗಿತ್ತು.

ಪಾಕಿಸ್ತಾನದ 257ರನ್ ಮೊತ್ತಕ್ಕೆ ಪ್ರತಿಯಾಗಿ 179/6 ಸ್ಕೋರ್ ಮಾಡಿ ಭಾರತ ಸಂಕಷ್ಟದಲ್ಲಿದ್ದಾಗ ಎಂಟನೇ ಕ್ರಮಾಂಕದಲ್ಲಿ ಬಂದ ದೀಪಕ್ ಅವರು ದತ್ತು ಫಡ್ಕರ್, ಜಿಎಸ್ ರಾಮಚಂದ್, ವಿಕೆಟ್ ಕೀಪರ್ ಪ್ರಭಿರ್ ಸೇನ್ ಹಾಗೂ ಕೊನೆ ಬ್ಯಾಟ್ಸ್ ಮನ್ ಗುಲಾಂ ಅಹ್ಮದ್ ಜೊತೆಗೂಡಿ ಭಾರತಕ್ಕೆ 140ರನ್ ಮುನ್ನಡೆ ಒದಗಿಸಿದರು.

ನಂತರ ವೆಸ್ಟ್ ಇಂಡೀಸ್ ಪ್ರವಾಸ ಮಾಡಿದರೂ ಟೀಂ ಇಂಡಿಯಾ ಪರ ಹೆಚ್ಚು ಕಾಲ ಆಡಲಾಗಲಿಲ್ಲ. 1962ರ ತನಕ ಪ್ರಥಮದರ್ಜೆ ಕ್ರಿಕೆಟ್ ಆಡಿದ್ದ ದೀಪಕ್ ಅವರು ಒಟ್ಟಾರೆ 43 ಪ್ರಥಮದರ್ಜೆ ಪಂದ್ಯಗಳಿಂದ 31ಇನ್ನಿಂಗ್ಸ್ ನಲ್ಲಿ 34.05ರನ್ ಸರಾಸರಿಯಂತೆ 1,802 ರನ್ 4 ಶತಕ, 7 ಅರ್ಧಶತಕ ಬಾರಿಸಿದ್ದರು. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Test cricketer Deepak Shodhan (Roshan Harshadlal Shodhan), the first Indian to score a memorable ton in his debut innings, died today (May 16) at his residence in his birth place, Ahmedabad aged 87.
Please Wait while comments are loading...