ಮ್ಯಾಚ್ ಫಿಕ್ಸಿಂಗ್: ದಕ್ಷಿಣ ಆಫ್ರಿಕಾದ ಕ್ರಿಕೆಟಿಗನಿಗೆ ಎಂಟು ವರ್ಷ ನಿಷೇಧ

Posted By:
Subscribe to Oneindia Kannada

ಜೊಹಾನ್ಸ್ ಬರ್ಗ್, ಜುಲೈ 12: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಲೊನ್ವಾಬೊ ಸೋತ್ಸೋಬ್ ಅವರನ್ನು ಮುಂದಿನ ಎಂಟು ವರ್ಷಗಳವರೆಗೆ ಕ್ರಿಕೆಟ್ ಚಟುವಟಿಕೆಗಳಿಂದ ನಿಷೇಧಿಸಲಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಐಪಿಎಲ್ ಮಾದರಿಯ ಟಿ20 ದೇಶೀಯ ಟೂರ್ನಿಯಾದ ರ್ಯಾಮ್ ಸ್ಲಾಮ್ ಟಿ20 ಚಾಲೆಂಜ್ ಟೂರ್ನಿಯೊಂದರ ಪಂದ್ಯದಲ್ಲಿ ಮೋಸದಾಟ ಆಡಲು ಸೋತ್ಸೋಬ್ ಬುಕಿಗಳ ಜತೆ ಕೈ ಜೋಡಿಸಿದ್ದರೆಂಬ ಆರೋಪ ಅವರ ಮೇಲೆ ಕೇಳಿಬಂದಿತ್ತು.

Former South Africa Bowler Lonwabo Tsotsobe Handed Eight-Year Ban For Match-Fixing

ತಮ್ಮ ಮೇಲಿನ ಆರೋಪಗಳನ್ನು ಆರಂಭಿಕ ವಿಚಾರಣೆ ವೇಳೆ ಅಲ್ಲಗಳೆದಿದ್ದ ಸೋತ್ಸೋಬ್ ಅವರು, ಇದೀಗ ತಮ್ಮ ಆರೋಪಗಳನ್ನು ಒಪ್ಪಿಕೊಂಡಿದ್ದಾರೆಂದು ಸಿಎಸ್ ಎ ಹೇಳಿದೆ.

ತಮ್ಮ ತಪ್ಪನ್ನು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಸೋತ್ಸೋಬ್ ಅವರಿಗೆ 8 ವರ್ಷ ನಿಷೇಧವನ್ನು ಇದೇ ವರ್ಷ ಏಪ್ರಿಲ್ 24ರಿಂದ ಅನ್ವಯವಾಗುವಂತೆ ಜಾರಿಗೊಳಿಸಲಾಗಿದೆ ಎಂದು ಸಿಎಸ್ ಎ ತಿಳಿಸಿದೆ.

2015ರ ರ್ಯಾಮ್ ಸ್ಲಾಮ್ ಪಂದ್ಯಾವಳಿಯ ಮತ್ತೊಂದು ಪಂದ್ಯದಲ್ಲಿ ಕಳ್ಳಾಟವಾಗಿರುವ ದಕ್ಷಿಣ ಆಫ್ರಿಕಾದ ಮತ್ತೊಬ್ಬ ಆಟಗಾರ, ಲಯನ್ಸ್ ಹಾಗೂ ಟೈಟನ್ಸ್ ತಂಡಗಳಲ್ಲಿ ಆಡಿದ್ದ ಕ್ರಿಕೆಟಿಗ ಗುಲಾಮ್ ಬೋಡಿ ಅವರ ತಪ್ಪೂ ಸಾಬೀತಾಗಿದ್ದು ಅವರಿಗೆ 20 ವರ್ಷಗಳ ನಿಷೇಧ ಹೇರಲಾಗಿದೆ ಎಂದು ಸಿಎಸ್ಎ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cricket South Africa (CSA) banned former Proteas fast bowler Lonwabo Tsotsobe for eight years on Tuesday over match fixing in a 2015 T20 Challenge Series.
Please Wait while comments are loading...