ನ್ಯೂಜಿಲೆಂಡ್ ನ ಕ್ರಿಕೆಟ್ ದಿಗ್ಗಜ ಮಾರ್ಟಿನ್ ಕ್ರೋವ್ ಇನ್ನಿಲ್ಲ

Posted By:
Subscribe to Oneindia Kannada

ವೆಲ್ಲಿಂಗ್ಟನ್. ಮಾರ್ಚ್.03. ನ್ಯೂಜಿಲೆಂಡ್ ಕ್ರಿಕೆಟ್ ತಂಡದ ದಿಗ್ಗಜ ಮಾಜಿ ನಾಯಕ ಮಾರ್ಟಿನ್ ಕ್ರೋವ್ ಅವರು ಗುರುವಾರ (ಮಾರ್ಚ್ 03) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

53 ವರ್ಷದ ಮಾರ್ಟಿನ್ ಡೇವಿಡ್ ಕ್ರೋವ್ ಅವರು ಸೆ.22 1962 ರಲ್ಲಿ ಜನಿಸಿದ್ದ ಕ್ರೋವ್ 2012 ರಿಂದ ಕ್ಯಾನ್ಸರ್ (follicular lymphoma) ನಿಂದ ಬಳಲುತ್ತಿದ್ದ ಅವರು ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. [ಕ್ಯಾನ್ಸರ್ ನನ್ನ ಸ್ನೇಹಿತ ಎಂದಿದ್ದ ಮಾರ್ಟಿನ್ ಕ್ರೋವ್]

Former New Zealand captain Martin Crowe dies aged 53

1982 ರಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಪರವಾಗಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ಬಲಗೈ ಬ್ಯಾಟ್ಸ್ ಮನ್ ಕ್ರೋವ್ ಇದುವರೆಗೆ 143 ಏಕದಿನ ಮತ್ತು 77 ಟೆಸ್ಟ್ ಪಂದ್ಯಗಳನ್ನು ಆಡಿದ ಇವರು 45.36 ಬ್ಯಾಟಿಂಗ್ ಸರಾಸರಿಯಲ್ಲಿ 17 ಶತಕ ಮತ್ತು 18 ಅರ್ಧಶತಕಗಳನ್ನು ಬಾರಿಸಿ ಒಟ್ಟು ಟೆಸ್ಟ್ ಕ್ರಿಕೆಟ್ ನಲ್ಲಿ 5444 ರನ್ ಕಲೆಹಾಕಿದ್ದರು.

1995 ನವೆಂಬರ್ 2 ಭಾರತದ ವಿರುದ್ಧ ಇವರ ಕೊನೆಯ ಟೆಸ್ಟ್ ಪಂದ್ಯವಾಗಿದೆ. ಹಾಗೂ ಮಾರ್ಟಿನ್ ಕ್ರೋವ್ ನಾಯಕತ್ವದಲ್ಲಿ ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಮೊದಲ ಬಾರಿಗೆ ಫೈನಲ್ ವರೆಗೆ ಕೊಂಡೋಯ್ದಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Martin Crowe dies aged 53
English summary
Former New Zealand cricket captain Martin Crowe has died of lymphoma aged 53, his family said today (March 3)
Please Wait while comments are loading...