ಮಾಜಿ ಟೆಸ್ಟ್ ಆರಂಭಿಕ ಬ್ಯಾಟ್ಸ್ ಮನ್ ಗೆ ಕ್ಯಾನ್ಸರ್

Posted By:
Subscribe to Oneindia Kannada

ಲಂಡನ್, ಜುಲೈ 15: ಇಂಗ್ಲೆಂಡಿನ ಮಾಜಿ ಟೆಸ್ಟ್ ಆರಂಭಿಕ ಆಟಗಾರ ಮೈಕಲ್ ಕಾರ್ ಬೆರಿ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಹ್ಯಾಂಪ್ ಶೈರ್ ಪರ ಆಡುವ ಕಾರ್ ಬೆರಿ ಅವರಿಗೆ ಕ್ಯಾನ್ಸರ್ ಗೆಡ್ಡೆ ಇರುವುದು ದೃಢಪಟ್ಟಿದೆ. ಕಾರ್ ಬೆರಿಗೆ ಇನ್ನೂ 35ರ ಹರೆಯ.[ಕ್ಯಾನ್ಸರಿಗೆ ಬಲಿಯಾದ ಯೂಟ್ಯೂಬ್ ಟೆಕ್ಕಿ ವೆಂಕಟ್]

ಇಂಗ್ಲೆಂಡ್ ಪರ 6 ಟೆಸ್ಟ್ ಹಾಗೂ 6 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಮಾತ್ರ ಆಡಿರುವ ಕಾರ್ ಬೆರಿ ಅವರು ಮತ್ತೊಮ್ಮೆ ಕಾಯಿಲೆ ಬಗ್ಗೆ ಇನ್ನೊಂದು ಬಾರಿ ದೃಢಪಡಿಸಿಕೊಳ್ಳಲು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹ್ಯಾಂಪ್ ಶೈರ್ ಕ್ರಿಕೆಟ್ ಕ್ಲಬ್ ಗುರುವಾರ(ಜುಲೈ 14) ದಂದು ಪ್ರಕಟಿಸಿದೆ.[ಡೇಂಜರಸ್ ಕ್ಯಾನ್ಸರಿಂದ ಕಾಮೆಂಟೇಟರ್ ಅರುಣ್ ಲಾಲ್ ಚೇತರಿಕೆ]

Former England Test batsman Michael Carberry diagnosed with cancer

ಹ್ಯಾಂಪ್ ಶೈರ್ ಕ್ರಿಕೆಟ್ ಫ್ಯಾಮಿಲಿ ಜೊತೆ ಸುಮಾರು 10 ವರ್ಷಗಳ ಕಾಲ ಸಂಬಂಧ ಇರಿಸಿಕೊಂಡಿರುವ ಕಾರ್ ಬೆರಿ ಅವರಿಗೆ ಈಗ ಕಷ್ಟ ಒದಗಿದೆ. ಅವರ ಚಿಕಿತ್ಸೆ ಹಾಗೂ ಕುಟುಂಬಕ್ಕೆ ಬೇಕಾದ ಅಗತ್ಯ ನೆರವು ನೀಡಲು ಮುಂದಾಗಿದ್ದೇವೆ ಎಂದು ಹ್ಯಾಂಪ್ ಶೈರ್ ಕ್ರಿಕೆಟ್ ಚೇರ್ಮನ್ ರಾಡ್ ಬ್ರಾನ್ಸ್ ಗ್ರೋವ್ ಹೇಳಿದ್ದಾರೆ.[ಕ್ರಿಕೆಟ್ ದಿಗ್ಗಜ ಮಾರ್ಟಿನ್ ಕ್ರೋವ್ ಇನ್ನಿಲ್ಲ]

2010ರಲ್ಲಿ ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯವಾಡಿದ್ದ ಕಾರ್ ಬೆರ್ರಿ ಅವರು 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಪಂದ್ಯವಾಡಿದ್ದರು.[ಕ್ಯಾನ್ಸರಿಗೆ ಅರಿಶಿನ ಮತ್ತು ಅಪ್ರಿಕೋಟ್ ಮದ್ದು](ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former England Test opening batsman Michael Carberry has been diagnosed with a tumour that is cancerous, his county side Hampshire has said.
Please Wait while comments are loading...