ಬಿಸಿಸಿಐಗೆ ಮಾಜಿ ಸಿಎಜಿ ವಿನೋದ್ ರಾಯ್ ಮುಖ್ಯಸ್ಥ

Posted By:
Subscribe to Oneindia Kannada

ಮುಂಬೈ, ಜನವರಿ 30: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ತಾತ್ಕಾಲಿಕವಾಗಿ ನೂತನ ಸಮಿತಿಯನ್ನು ರಚಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಬಿಸಿಸಿಐನಲ್ಲಿ ಆಡಳಿತ ನಡೆಸಲು ನಾಲ್ವರ ಸದಸ್ಯ ಸಮಿತಿ ರಚನೆಗೆ ಸಮ್ಮತಿಸಲಾಗಿದ್ದು, ಮಾಜಿ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್(ಸಿಎಜಿ) ವಿನೋದ್ ರಾಯ್ ಅವರು ಸಮಿತಿ ಮುಖ್ಯಸ್ಥರಾಗಲಿದ್ದಾರೆ.

ಈ ಸಮಿತಿಯು ಬಿಸಿಸಿಐಗೆ ಹೊಸದಾಗಿ ಚುನಾವಣೆ ನಡೆಯುವವರೆಗೂ ತಾತ್ಕಾಲಿಕವಾಗಿ ಆಡಳಿತ ನಡೆಸಲಿದೆ. ಹೊಸ ಆಡಳಿತ ಮಂಡಳಿಗೆ ಸಿಎಜೆ ಮಾಜಿ ಮುಖ್ಯಸ್ಥ ವಿನೋದ್ ರಾಯ್ ಅಲ್ಲದೆ, ಭಾರತ ಮಹಿಳಾ ತಂಡದ ನಾಯಕಿ ಡಯಾನ ಎಡುಲ್ಜಿ, ಐಡಿಎಫ್‍ಸಿ ಬ್ಯಾಂಕ್‍ನ ವ್ಯವಸ್ಥಾಪಕ ವಿಕ್ರಮ್ ಲಿಮಾಯ್, ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವರನ್ನೊಳಗೊಂಡ ಸಮಿತಿಯನ್ನು ನೇಮಕ ಮಾಡಿದೆ.

Former CAG Vinod Rai to head BCCI, rules Supreme Court

ಬಿಸಿಸಿಐಗೆ ಚುನಾವಣೆ ಯಾವಾಗ ನಡೆಯಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ, ನ್ಯಾ. ಲೋಧಾ ಸಮಿತಿ ವರದಿ ಶಿಫಾರಸು ಅಳವಡಿಕೆ ಮಾಡಲು ಬಿಸಿಸಿಐ ಹಾಗೂ ಅಂಗ ಸಂಸ್ಥೆಗಳು ಮುಂದಾಗಿವೆ. ಅಲ್ಲಿಯವರೆಗೆ ಈ ನಾಲ್ಕು ಸದಸ್ಯರ ಸಮಿತಿ ಬಿಸಿಸಿಐನ ಆಡಳಿತ ನೋಡಿಕೊಳ್ಳಲಿದೆ. ನ್ಯಾ. ಲೋಧ ಶಿಫಾರಸ್ಸನ್ನು ಬಿಸಿಸಿಐ ಜಾರಿಗೆ ತರುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್, ಕಾರ್ಯದರ್ಶಿ ಶಿರ್ಕೆ ಸೇರಿದಂತೆ ಅನೇಕರನ್ನು ಸುಪ್ರೀಂಕೋರ್ಟ್ ದ್ದನ್ನು ಇಲ್ಲಿ ಸ್ಮರಿಸಬಹುದು(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Supreme Court on Monday (January 30) appointed former Comptroller and Auditor General (CAG) of India Vinod Rai to head the Borad of Control for Cricket in India (BCCI).
Please Wait while comments are loading...