ಅಮೆರಿಕ ನೆಲದಲ್ಲಿ ಇಂಡೋ- ವಿಂಡೀಸ್ ಟಿ20 ಕದನ!

Posted By:
Subscribe to Oneindia Kannada

ಮುಂಬೈ, ಆಗಸ್ಟ್ 03: ಮೊಟ್ಟ ಮೊದಲ ಬಾರಿಗೆ ಅಮೆರಿಕದಲ್ಲಿ ಅಧಿಕೃತವಾಗಿ ಟಿ20 ಟೂರ್ನಮೆಂಟ್ ಆಯೋಜನೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಾಗಿದೆ.

ವೆಸ್ಟ್ ಇಂಡೀಸ್ ಹಾಗೂ ಟೀಂ ಇಂಡಿಯಾ ನಡುವೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಿದಲಾಗಿದೆ.
ಅಮೆರಿಕಾದ ಪ್ಲೋರಿಡಾದಲ್ಲಿ ಆಗಸ್ಟ್ 27 ಹಾಗೂ 28ರಂದು ಪಂದ್ಯಗಳು ನಡೆಯಲಿದೆ. [ವಿಂಡೀಸ್ ವಿರುದ್ಧದ 'ಅಮೆರಿಕ ಟಿ20' ಪಂದ್ಯಕ್ಕೆ ಧೋನಿ ನಾಯಕ]

ಭಾರತೀಯ ಕಾಲಮಾನ ಪ್ರಕಾರ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಫ್ಲೋರಿಡಾದ ಫೋರ್ಟ್ ಲಾರ್ಡಾರ್ ಡೇಲ್(Fort lauderdale)ನಲ್ಲಿ ಪಂದ್ಯ ನಡೆಯಲಿದೆ.

ಧೋನಿ ನಾಯಕತ್ವದ ಟೀಂ ಇಂಡಿಯಾ ಅಮೆರಿಕನ್​ರಿಗೆ ಕ್ರಿಕೆಟ್ ರುಚಿ ತೋರಿಸಲು ತುದಿಗಾಲ ಮೇಲೆ ನಿಂತಿದ್ದಾರೆ.ಕೆರಿಬಿಯನ್ ಪ್ರೀಮಿಯರ್ ಲೀಗ್​ (ಸಿಪಿಎಲ್) ನ ಪಂದ್ಯಗಳಿಗೆ ಇದೇ ತಾಣ ವೇದಿಕೆ ಒದಗಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

First time in USA: Team India to play two T20Is against West Indies

ಈ ಕುರಿತು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಪ್ರತಿಕ್ರಿಯಿಸಿ, ಅಮೆರಿಕದಲ್ಲಿ ಪಂದ್ಯ ಆಯೋಜನೆ ಮಾಡಿರುವುದರಿಂದ ಕ್ರಿಕೆಟ್ ವೀಕ್ಷಕರ ಸಂಖ್ಯೆಯಲ್ಲಿ ಏರಿಕೆಕಾಣಲಿದೆ. ಅಮೆರಿಕದಲ್ಲಿ ಭಾರತೀಯ ಕ್ರಿಕೆಟ್ ತಂಡ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟಿ20 ಪಂದ್ಯ ಆಡುತ್ತಿದೆ ಎಂದು ಹೇಳಲು ಖುಷಿಯಾಗುತ್ತದೆ ಎಂದು ತಿಳಿಸಿದರು.

ಎರಡು ಟಿ20:
* ಆಗಸ್ಟ್ 27: 7.30 PM IST: ಸೆಂಟ್ರಲ್ ಬ್ರೊವಾರ್ಡ್ ರೀಜನಲ್ ಪಾರ್ಕ್, ಫ್ಲೋರಿಡಾ
* ಆಗಸ್ಟ್ 28 : 7.30 PM IST : ಸೆಂಟ್ರಲ್ ಬ್ರೊವಾರ್ಡ್ ರೀಜನಲ್ ಪಾರ್ಕ್, ಫ್ಲೋರಿಡಾ

ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಪ್ರತಿಕ್ರಿಯಿಸಿ, ಅಮೆರಿಕದಲ್ಲಿ ಪಂದ್ಯ ಆಯೋಜನೆ ಮಾಡಿರುವುದರಿಂದ ಕ್ರಿಕೆಟ್ ವೀಕ್ಷಕರ ಸಂಖ್ಯೆಯಲ್ಲಿ ಏರಿಕೆಕಾಣಲಿದೆ. ಅಮೆರಿಕದಲ್ಲಿ ಭಾರತೀಯ ಕ್ರಿಕೆಟ್ ತಂಡ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟಿ20 ಪಂದ್ಯ ಆಡುತ್ತಿದೆ ಎಂದು ಹೇಳಲು ಖುಷಿಯಾಗುತ್ತದೆ ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Indian cricket team for the first time will be playing international matches in the United Stated of America when it will take on reigning World T20 Champions West Indies in a two-match T20 International series in Florida.
Please Wait while comments are loading...