ಸ್ಮಿತ್ ಔಟಾದಾಗ ಕೊಹ್ಲಿ ಪಿಟಿಪಿಟಿ ಎಂದು ಹೇಳಿದ್ದೇನು?

Posted By:
Subscribe to Oneindia Kannada

ಅಡಿಲೇಡ್, ಜ. 27: ವಿರಾಟ್ ಕೊಹ್ಲಿ ಅವರನ್ನು ಮೈದಾನದಲ್ಲಿ ಕ್ಷಣಕಾಲ ಕೂಡಾ ಸುಮ್ಮನೆ ಇರಿಸಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಮೊದಲ ಟಿ20 ಪಂದ್ಯದಲ್ಲಿ ಕೊಹ್ಲಿ ಅವರು ಎದುರಾಳಿ ಬ್ಯಾಟ್ಸ್ ಮನ್ ಸ್ಮಿತ್ ಔಟಾದಾಗ ಕೈ ಸನ್ನೆ ಮಾಡಿ ಏನೋ ಹೇಳುತ್ತಿದ್ದರು. ಈ ಬಗ್ಗೆ ಈಗ ಭಾರಿ ಚರ್ಚೆಯಾಗುತ್ತಿದೆ.

ಅಡಿಲೇಡ್ ಓವಲ್ ನಲ್ಲಿ ಮಂಗಳವಾರ ನಡೆದ ಪಂದ್ಯದ ಮರಣೋತ್ತರ ಪರೀಕ್ಷೆ ಮಾಡಿರುವ ಕ್ರಿಕೆಟ್ ಪಂಡಿತರು, ಸ್ಮಿತ್ ಔಟಾಗಲು ಅವರು ಲೈವ್ ಮೈಕ್ ಮೂಲಕ ಚಾನೆಲ್ 9 ಜೊತೆ ಮಾತನಾಡುತ್ತಿದ್ದದ್ದೇ ಕಾರಣ ಎಂದು ನಿರ್ಣಯಕ್ಕೆ ಬಂದಿದ್ದಾರೆ. [ಅಡಿಲೇಡ್ ಪಿಚ್ ಜೊತೆ ವಿರಾಟ್ ಕೊಹ್ಲಿ ಲವ್ ಅಫೇರ್]

ಕೊಹ್ಲಿ ಅವರಿಗೆ ಸ್ಮಿತ್ ಮಾತನಾಡುತ್ತಿದ್ದದ್ದು ಕಂಡಿದೆ. ಹೀಗಾಗಿ ಸ್ಮಿತ್ ಔಟಾದಾಗ ಕೊಹ್ಲಿ ಅವರು ಮೊದಲು ಬ್ಯಾಟಿಂಗ್ ಮಾಡಿ, ವಟವಟ ಎಂದು ಮಾತನಾಡುವುದನ್ನು ಬಿಡು ಎಂದು ತೋರಿಸಿದರು. [ಟಿ20ಯಲ್ಲಿ ರನ್ ಸರಾಸರಿ ಅಗ್ರಸ್ಥಾನಕ್ಕೇರಿದ ಕೊಹ್ಲಿ]

ಆಗಿದ್ದೇನು?: ಅರೋನ್ ಫಿಂಚ್ ಹಾಗೂ ಸ್ಟೀವ್ ಸ್ಮಿತ್ ಉತ್ತಮ ಜೊತೆಯಾಟ ಕಲೆ ಹಾಕುವ ಸಂದರ್ಭದಲ್ಲಿ ಚಾನಲ್ 9 ಜೊತೆ ಸ್ಮಿತ್ ಆನ್ ಫೀಲ್ಡ್ ಮೈಕ್ರೋಫೋನ್ ಬಳಸಿ ಮಾತನಾಡತೊಡಗಿದರು. ಈ ಮುಂಚೆ ಪ್ರದರ್ಶನ ಪಂದ್ಯಗಳಲ್ಲಿ ಅಥವಾ ಯಾವುದೋ ಕೌಂಟಿ ಪಂದ್ಯಗಳಲ್ಲಿ ಮಾತ್ರ ಈ ರೀತಿ ಆಡುವಾಗ ಆಟಗಾರರು ಕಾಮೆಂಟೆಟರ್ಸ್ ಜೊತೆ ಸಂಭಾಷಿಸುತ್ತಿದ್ದರು.

ಸ್ಮಿತ್ ಮಾತನಾಡಿದ್ದು ಈಗ ಕಹಳೆಗೆ ಮುತ್ತಿಟ್ಟಂತೆ ಆಗಿದೆ

ಸ್ಮಿತ್ ಮಾತನಾಡಿದ್ದು ಈಗ ಕಹಳೆಗೆ ಮುತ್ತಿಟ್ಟಂತೆ ಆಗಿದೆ

ಈ ರೀತಿ ಮಾತನಾಡುತ್ತಿದ್ದ ಸ್ವಲ್ಪ ಸಮಯದಲ್ಲೇ ರವೀಂದ್ರ ಜಡೇಜ ಬೌಲಿಂಗ್ ನಲ್ಲಿ ಸ್ಮಿತ್ ಅವರು ವಿರಾಟ್ ಕೊಹ್ಲಿಗೆ ಕ್ಯಾಚಿತ್ತು ಔಟಾದರು. 21 ರನ್ ಗಳಿಸಿದ್ದ ಸ್ಮಿತ್ ಔಟಾದ ರೀತಿ ಈಗ ವಿವಾದ ಹಾಗೂ ಚರ್ಚೆಗೆ ಕಾರಣವಾಗಿದೆ.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಧೋನಿ

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಧೋನಿ

ಈ ಘಟನೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಾಯಕ ಧೋನಿ, ಕೊಹ್ಲಿ ಅವರು ಸರಿಯಾಗಿ ಪ್ರತಿಕ್ರಿಯಿಸಿದ್ದಾರೆ ಇದರಲ್ಲಿ ಯಾರಿಗೂ ಹಾನಿಯಾಗುವಂಥದ್ದೇನು ನಡೆದಿಲ್ಲ. ಈ ಹಿಂದೆ ಸ್ಕೈ ಕ್ಯಾಮೆರಾ ಬಗ್ಗೆ ಹೇಳಿದ್ದೆ. ಈಗ ಮೈಕ್ ಬಳಸಿ ಆಡುವಾಗ ಮಾತನಾಡುವುದು ನನಗೂ ಸರಿ ಕಾಣುವುದಿಲ್ಲ ಎಂದಿದ್ದರು.

ಸ್ಟೀವ್ ಸ್ಮಿತ್ ಕಾಮೆಂಟರಿ ಮಾಡುವುದೇಕೆ?

ಆಡುವಾಗ ಸ್ಟೀವ್ ಸ್ಮಿತ್ ಕಾಮೆಂಟರಿ ಮಾಡುವುದೇಕೆ? ಎಂದು ಕೊಹ್ಲಿ ಪ್ರಶ್ನಿಸಿದ್ದು ಹೇಗೆ ವಿಡಿಯೋ ನೋಡಿ:

ಕೊಹ್ಲಿ ಏಕೆ ಓವರ್ ರಿಯಾಕ್ಟ್ ಮಾಡಿದ್ರು

ಕೊಹ್ಲಿ ಏಕೆ ಓವರ್ ರಿಯಾಕ್ಟ್ ಮಾಡಿದ್ರು ಎಂದು ಕೆಲವರು ಪ್ರಶ್ನಿಸಿದ್ದಾರೆ.

ಕೊಹ್ಲಿ ಪಿತ್ತನೆತ್ತಿಗೇರಿದ್ದು ಇದೇ ಮೊದಲಲ್ಲ

ಕೊಹ್ಲಿ ಪಿತ್ತನೆತ್ತಿಗೇರಿದ್ದು ಇದೇ ಮೊದಲಲ್ಲ

ಈ ಮುಂಚೆ ವೇಗಿ ಜೇಮ್ಸ್ ಫಾಲ್ಕ್ನರ್ ಗೆ ನಿನ್ನ ಜೀವಮಾನಕ್ಕೆ ಸಾಕಾಗುವಷ್ಟು ಹೊಡೆತ ನೀಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
You cannot keep Virat Kohli quiet on the field. He is a busy player whether batting or fielding. Not only is he good at playing the game with the bat but also using his mouth when necessary.
Please Wait while comments are loading...