420 ಕೇಸ್: ಸಾಕ್ಷಿ ಧೋನಿ ವಿರುದ್ಧ ಎಫ್ಐಆರ್ ದಾಖಲು!

Posted By:
Subscribe to Oneindia Kannada

ರಾಂಚಿ, ಅಕ್ಟೋಬರ್ 12: ಟೀಂ ಇಂಡಿಯಾದ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಧೋನಿ ವಿರುದ್ಧ ವಂಚನೆ ಕೇಸ್ ದಾಖಲಾಗಿದೆ. ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಾಕ್ಷಿ ಧೋನಿ ಹಾಗೂ ಅವರ ಸಂಗಡಿಗರ ವಿರುದ್ಧ ಎಫ್ ಐಆರ್ ಹಾಕಲಾಗಿದೆ.

ನಾಯಕ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ವಿರುದ್ಧ ಸೆಕ್ಷನ್ 420ರ ಅನ್ವಯ ಗುರುಗ್ರಾಮ(ಗುರ್ಗಾಂವ್) ಪೋಲಿಸರು ಎಫ್​ಐಆರ್ ದಾಖಲಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

FIR filed against Sakshi Dhoni, 3 others in multi-crore fraud case

ಸಾಕ್ಷಿ ಹಾಗೂ ಇತರ ಮೂವರ ವಿರುದ್ಧ ಉದ್ಯಮಿ ಡೇನಿಸ್ ಅರೋರ ಎಂಬುವರು ದೂರು ದಾಖಲಿಸಿದ್ದರು. ಸಾಕ್ಷಿ ಜತೆಗೆ ಅರುಣ್ ಪಾಂಡೆ, ಶುಭವತಿ ಪಾಂಡೆ, ಮತ್ತು ಪ್ರತಿಮಾ ಪಾಂಡೆ ಹಾಗೂ ರಿತಿ ಎಂಎಸ್​ಡಿ ಅಲ್ಮೋಡೆ ಪ್ರೆವೆಟ್ ಲಿಮಿಟೆಡ್ ಕಂಪನಿಯ ಎಲ್ಲಾ ನಿರ್ದೇಶಕರ ಮೇಲೆ ಎಫ್ ಐಆರ್ ಹಾಕಲಾಗಿದೆ.[ಪಾಕ್ ವಿರುದ್ಧ ಭಾರತ ಗೆದ್ದಾಗ ಧೋನಿ ಪತ್ನಿ ಸಾಕ್ಷಿ ಬೆಚ್ಚಿದ್ದೇಕೆ?]

ಡೇನಿಸ್ ಅರೋರ ಅವರ ತಂದೆ ವಿಕಾಸ್ ಅರೋರಾ ಅವರು ಸ್ಫೋರ್ಟ್ ಫಿಟ್ ವರ್ಲ್ಡ್ ಪ್ರೈ ಲಿಮಿಟೆಡ್ ಕಂಪನಿಯನ್ನು ಕಳೆದ ವರ್ಷ ಖರೀದಿಸಿದ್ದರು. ಶೇ.39ರಷ್ಟು ಷೇರು ಹೊಂದಿರುವ ಫಿಟ್ನೆಸ್ ಸೆಂಟರ್​ಗಳನ್ನು ಒಳಗೊಂಡ ಸಂಸ್ಥೆಯಲ್ಲಿ ಮೇಲ್ಕಂಡ ನಾಲ್ವರು ಸಹ ನಿರ್ದೇಶಕರಾಗಿದ್ದಾರೆ.
ಈ ವರ್ಷ ಮಾರ್ಚ್ 31ರೊಳಗೆ ಅರೋರಾಗೆ 11ಕೋಟಿ ರೂ. ಪಾವತಿಸಬೇಕಾಗಿತ್ತು. ಆದರೆ,ಇದುವರೆಗೆ 2.25 ಕೋಟಿ ರೂ. ಮಾತ್ರ ನೀಡಲಾಗಿದೆ ಎಂದು ಅರೋರಾ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುಅ ಗುರುಗ್ರಾಮದ ಸುಶಾಂತ್ ಲೋಕ್ ಪೊಲೀಸರು, ನಾಲ್ವರ ವಿರುದ್ಧ ಎಫ್ ಐಆರ್ ಹಾಕಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sakshi Dhoni, the wife of India's limited overs cricket captain Mahendra Singh Dhoni, finds herself in a multi-crore fraud case and an FIR (First Information Report) has been filed against her, according to media reports on Wednesday (October 12).
Please Wait while comments are loading...