ಸಿಡ್ನಿ ಭಾರತದ ಮಾನ ಕಾಪಾಡಿದ ಆ ಧೋನಿ ಸಿಕ್ಸ್

Subscribe to Oneindia Kannada

ಸಿಡ್ನಿ, ಜನವರಿ, 23: ಕೊನೆ ಓವರ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಸಿಡಿಸಿದ ಸಿಕ್ಸ್ ಭಾರತದ ಮಾನ ಕಾಪಾಡಿದೆ. ಅಂತಿಮ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಜಯ ದಕ್ಕಿದ್ದು ಟೀಮ್ ಇಂಡಿಯಾ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ಕೊನೆ ಕ್ಷಣದವರೆಗೂ ಪಂದ್ರ ಕುತೂಹಲ ಹಿಡಿದುಕೊಂಡಿತ್ತು. ಕೊನೆ ಓವರ್ ನ ಆರು ಎಸೆತದಲ್ಲಿ ಭಾರತಕ್ಕೆ ಗೆಲ್ಲಲು ಬೇಕಿದ್ದದ್ದು 13 ರನ್ . ಈ ವೇಳೆ ಕ್ರೀಸ್ ನಲ್ಲಿ ಇದ್ದದ್ದು ನಾಯಕ ಮಹೇಂದ್ರ ಸಿಂಗ್ ಧೋನಿ.[ಮನೀಶ್ ಪಾಂಡೆ ಶತಕ, ಆಸೀಸ್ ನಲ್ಲಿ ಮೊದಲ ಗೆಲುವಿನ ಪುಳಕ]

cricket

ಮಾರ್ಶ್ ಅವರ ಕೊನೆಯ ಓವರ್ ನ ಮೊದಲ ಎಸೆತ ವೈಡ್, ಎರಡನೇ ಎಸೆತವನ್ನು ಮಹೇಂದ್ರ ಸಿಕ್ಸರ್ ಗೆರೆ ದಾಟಿಸಿದ್ದು ಪಂದ್ಯದ ಫಲಿತಾಂಶವನ್ನು ಭಾರತದ ಕಡೆ ವಾಲುವಂತೆ ಮಾಡಿತು. ಮುಂದಿನ ಎಸೆತದಲ್ಲೂ ದೊಡ್ಡ ಹೊಡೆತಕ್ಕೆ ಯತ್ನಿಸಿದ ಧೋನಿ ವಿಕೆಟ್ ಒಪ್ಪಿಸಬೇಕಾಯಿತು.[ಭಾರತವನ್ನು ಸೋಲಿಸಿದ ಆಸ್ಟ್ರೇಲಿಯಾದಿಂದ ವಿಶ್ವ ದಾಖಲೆ]

ನಂತರ ಕ್ರೀಸ್ ಗೆ ಬಂದ ಮನೀಶ್ ಮೂರನೇ ಎಸೆತವನ್ನು ಬೌಂಡರಿಗೆ ಅಟ್ಟುತ್ತಿದ್ದಂತೆ ಭಾರತಕ್ಕೆ ಗೆಲುವು ಪಕ್ಕಾ ಆಯಿತು. ಅಜೇಯ ಶತಕವನ್ನು ದಾಖಲಿಸಿದ ಮನೀಶ್ ಪಾಂಡೆ ಭಾರತದ ಪಾಳಿಗೆ ಹೀರೋ ಆದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The pressure was building. Fans were getting restless. Comments started to flow. And India's most successful captain Mahendra Singh Dhoni was in the firing line. But the end result turned out to be in his favour - an Indian win at the Sydney Cricket Ground (SCG) and with that avoiding the humiliation of a 0-5 whitewash against Australia. It all happened with one crucial six.
Please Wait while comments are loading...