ಸಚಿನ್ ತೆಂಡೂಲ್ಕರ್ ಫ್ಯಾನ್ಸ್ ಗಳಿಗೆ ಸಂತಸದ ಸುದ್ದಿ

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 11: ಕ್ರಿಕೆಟ್ ಜಗತ್ತಿನ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ಅವರ ಅಸಂಖ್ಯಾತ ಅಭಿಮಾನಿಗಳಿಗೆ ಸಂತಸದ ಸುದ್ದಿ ಇಲ್ಲಿದೆ. ಟೀಂ ಇಂಡಿಯಾ ನಾಅಯಕ ಎಂಎಸ್ ಧೋನಿ, ಮಾಜಿ ನಾಯಕ ಅಜರುದ್ದೀನ್ ನಂತರ 'ಕ್ರಿಕೆಟ್ ದೇವರು' ಸಚಿನ್ ಕುರಿತ ಆತ್ಮಕಥಾನಕ ಚಿತ್ರವೊಂದು ತಯಾರಾಗುತ್ತಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

'Sachin A Billion Dreams' ಎಂಬ ಅರ್ಥಪೂರ್ಣ ಶೀರ್ಷಿಕೆ ಹೊಂದಿರುವ ಈ ಚಿತ್ರವನ್ನು ಜೇಮ್ಸ್ ಎರ್ಸ್ ಕೈನ್ ನಿರ್ದೇಶಿಸಿದ್ದಾರೆ. ಕಾರ್ನಿವಲ್ ಮೋಷನ್ ಪಿಕ್ಚರ್ಸ್ ಹಾಗೂ ರವಿ ಭಗ್ಚಾಂಡ್ಕ ನಿರ್ಮಾಣ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್ ಕುರಿತ ಚಿತ್ರದ ಪೋಸ್ಟರ್ ಸೋಮವಾರ (ಏಪ್ರಿಲ್ 11) ರಂದು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಹೊರ ಬಿಡಲಾಗಿದೆ.

'55 ದಿನಗಳ ತರಬೇತಿ, ಒಂದೇ ಜೊತೆ ಬಟ್ಟೆಗಳು, ದಿ ಸಚಿನ್ ಸ್ಟೋರಿ' ಎಂದು ಬರೆಯಲಾಗಿದೆ. ಚಿತ್ರದ ಟೀಸರ್ ಏಪ್ರಿಲ್ 14ರಂದು 1 PMಗೆ ಬಿಡುಗಡೆ ಮಾಡಲಾಗುತ್ತದೆ.

ಸಚಿನ್ ಫಿಲಂ ಬಗ್ಗೆ ವಿಷಯ ಹೊರ ಬರುತ್ತಿದ್ದಂತೆ, ಕ್ರಿಕೆಟರ್ಸ್, ಅಭಿಮಾನಿಗಳು, ಸೆಲೆಬ್ರಿಟಿಗಳು ಹರ್ಷ ವ್ಯಕ್ತಪಡಿಸಿ ತಮ್ಮ ಸಂತಸವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

 'ಕ್ರಿಕೆಟ್ ದೇವರು' ಸಚಿನ್ ಕುರಿತ ಆತ್ಮಕಥಾನಕ ಚಿತ್ರ

'ಕ್ರಿಕೆಟ್ ದೇವರು' ಸಚಿನ್ ಕುರಿತ ಆತ್ಮಕಥಾನಕ ಚಿತ್ರ

ಕ್ರಿಕೆಟ್ ಜಗತ್ತಿನ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ಅವರ ಅಸಂಖ್ಯಾತ ಅಭಿಮಾನಿಗಳಿಗೆ ಸಂತಸದ ಸುದ್ದಿ ಇಲ್ಲಿದೆ.'Sachin A Billion Dreams' ಎಂಬ ಅರ್ಥಪೂರ್ಣ ಶೀರ್ಷಿಕೆ ಹೊಂದಿರುವ ಈ ಚಿತ್ರವನ್ನು ಜೇಮ್ಸ್ ಎರ್ಸ್ ಕೈನ್ ನಿರ್ದೇಶಿಸಿದ್ದಾರೆ. ಕಾರ್ನಿವಲ್ ಮೋಷನ್ ಪಿಕ್ಚರ್ಸ್ ಹಾಗೂ ರವಿ ಭಗ್ಚಾಂಡ್ಕ ನಿರ್ಮಾಣ ಮಾಡಿದ್ದಾರೆ

ರೋಹಿತ್ ಶರ್ಮರಿಂದ ಟ್ವೀಟ್

ಕ್ರಿಕೆಟರ್ ರೋಹಿತ್ ಶರ್ಮ ಅವರು ಟ್ವೀಟ್ ಮಾಡಿ, ಕೋಟ್ಯಂತರ ಹೃದಯಗಳ ಮಿಡಿತ ಸಚಿನ್ ಎಂದಿದ್ದಾರೆ.

ಸುರೇಶ್ ರೈನಾರಿಂದ ಟ್ವೀಟ್

ಕ್ರಿಕೆಟರ್ ಸುರೇಶ್ ರೈನಾರಿಂದ ಟ್ವೀಟ್

ಸೆಹ್ವಾಗ್ ಬಗ್ಗೆ ಸಚಿನ್ ಟ್ವೀಟ್

ಸೆಹ್ವಾಗ್ ಬಗ್ಗೆ ಸಚಿನ್ ಟ್ವೀಟ್ ಮಾಡಿ ನವಾಬ್ ಬಗ್ಗೆ ಜವಾನ್ ನಹಿ ಎಂದಿದ್ದಾರೆ.

ಕಿಂಗ್ ಖಾನ್ ಶಾರುಖ್ ಅವರಿಂದ ಟ್ವೀಟ್

ಕಿಂಗ್ ಖಾನ್ ಶಾರುಖ್ ಅವರು ಟ್ವೀಟ್ ಮಾಡಿ ಚಿತ್ರ ನೋಡಲು ಕಾತುರದಿಂದ ಕಾದಿದ್ದೇನೆ ಎಂದಿದ್ದಾರೆ.

ಟೀಸರ್ ದಿನಾಂಕ ಘೋಷಣೆ

ಸಚಿನ್ ತೆಂಡೂಲ್ಕರ್ ಟೀಸರ್ ದಿನಾಂಕ ಘೋಷಣೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
There is good news for billions of Sachin Tendulkar fans. After flick on Team India's limited-overs skipper MS Dhoni and former captain Mohd Azharuddin, now a biopic is being made on India's 'God of Cricket' Sachin Tendulkar.
Please Wait while comments are loading...