ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್ಸ್ ಸಂಭ್ರಮ ಆರಂಭ

Posted By:
Subscribe to Oneindia Kannada

ಚೆನ್ನೈ, ಜುಲೈ 15: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಮರು ಪ್ರವೇಶ ಪಡೆದಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ಹಾಗೂ ರಾಜಸ್ಥಾನ್ ರಾಯಲ್ಸ್ (ಆರ್ ಆರ್) ತಂಡಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸ್ವಾಗತ ಕೋರಿದೆ. ಇದರ ಬೆನ್ನಲ್ಲೇ ಚೆನ್ನೈ ತಂಡದ ಅಭಿಮಾನಿಗಳು ಸಂಭ್ರಮಾಚರಣೆ ಶುರು ಮಾಡಿದ್ದಾರೆ.

ನ್ಯಾ. ಲೋಧಾ ಸಮಿತಿಯ ವರದಿಯಂತೆ ಭ್ರಷ್ಟಾಚಾರದ ಆರೋಪದ ಮೇಲೆ ಎರಡು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದ ಚೆನ್ನೈ ಹಾಗೂ ರಾಜಸ್ಥಾನ ತಂಡಗಳ ಮೇಲೆ ವಿಧಿಸಲಾಗಿದ್ದ ಶಿಕ್ಷೆ ಅವಧಿ ಪೂರ್ಣಗೊಂಡಿದೆ.

ಬಿಸಿಸಿಐ ಅಧ್ಯಕ್ಷ ಸಿಕೆ ಖನ್ನಾ, ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ, ಬಿಸಿಸಿಐ ಕಾರ್ಯದರ್ಶಿ ಅಮಿತಾಬ್ ಚೌಧರಿ ಅವರು ಎರಡು ತಂಡಗಳಿಗೆ ಸ್ವಾಗತಕೋರಿದ್ದಾರೆ.

ಐಪಿಎಲ್ ನಲ್ಲಿ ಅತ್ಯಂತ ಯಶಸ್ವಿ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ 2010 ಹಾಗೂ 2011ರಲ್ಲಿ ಕಪ್ ಎತ್ತಿತ್ತು. 6 ಬಾರಿ ಫೈನಲ್ ಪ್ರವೇಶಿಸಿತು (2008, 2010,2011,2012,2013,2015). ಎಂಎಸ್ ಧೋನಿ ಅವರ ನಾಯಕತ್ವದಲ್ಲಿ ಹಲವು ಪ್ರತಿಭೆಗಳಿಗೆ ಅವಕಾಶ ಸಿಕ್ಕಿತು. ತಮಿಳರ ಪಾಲಿಗೆ ಧೋನಿ ಅವರು 'ತಲೈವಾ' ಆಗಿ ಕಾಣಿಸಿಕೊಂಡಿದ್ದಾರೆ.

ಅಭಿಮಾನಿಗಳು ಫುಲ್ ಖುಷ್

ಅಭಿಮಾನಿಗಳು ಫುಲ್ ಖುಷ್

ಚೆನ್ನೈ ತಂಡ ಮತ್ತೊಮ್ಮೆ ಐಪಿಎಲ್ ನಲ್ಲಿ ಆಡಲಿರುವ ಸುದ್ದಿ ಖಚಿತವಾಗುತ್ತಿದ್ದಂತೆ ಅಭಿಮಾನಿಗಳು ತಮ್ಮ ತಂಡದ ನಾಯಕ ಧೋನಿ ಅವರನ್ನು ಹೊಗಳಿ, ಸ್ವಾಗತಿಸಿದ್ದಾರೆ.

ರೋಚಕ ಪಂದ್ಯದ ನೆನಪು

ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ರೋಚಕ ಪಂದ್ಯದ ನೆನಪು ಮಾಡಿಕೊಂಡ ಚೆನ್ನೈ ಅಭಿಮಾನಿಗಳು.

ಎಂಎಸ್ ಧೋನಿ

ಎಂಎಸ್ ಧೋನಿ ಚಿತ್ರವನ್ನು ಪ್ರದರ್ಶಿಸಿ ಅಭಿಮಾನಿಗಳಿಂದ ಸ್ವಾಗತ.

ಸೂಪರ್ ಸೆಲ್ಫಿ

ಸೂಪರ್ ಸೆಲ್ಫಿ ಸ್ಪರ್ಧೆಯನ್ನು ಆರಂಭಿಸಿದ ಸೂಪರ್ ಕಿಂಗ್ಸ್

ವಿಷಲ್ ಹೊಡಿ ಎಂದ ಫ್ಯಾನ್ಸ್

ಚೆನ್ನೈ ಸೂಪರ್ ಕಿಂಗ್ಸ್ ಪರವಿಷಲ್ ಹೊಡಿರಿ ಎಂದ ಫ್ಯಾನ್ಸ್

ಧೋನಿ ಬ್ಯಾಟಿಂಗ್

ಧೋನಿ ಬ್ಯಾಟಿಂಗ್ ನೋಡಲು ಕಾತುರರಾಗಿದ್ದೇವೆ. ಮ್ಯಾಚ್ ಫಿನಿಶಿಂಗ್ ನೆನಪು ಕಾಡುತ್ತಿದೆ ಎಂದ ಅಭಿಮಾನಿಗಳು.

ಸೂಪರ್ ಸೆಲ್ಫಿ

ಚೆನ್ನೈ ತಂಡಕ್ಕೆ ಸ್ವಾಗತ ಕೋರಿ ಸೂಪರ್ ಸೆಲ್ಫಿ ತೆಗೆದುಕೊಂಡು ಕಳಿಸಿ ಎಂದ ಚೆನ್ನೈ ಸೂಪರ್ ಕಿಂಗ್ಸ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cricket fans in Chennai are ecstatic with the news of their favourite Chennai Super Kings (CSK) returning to the IPL after 2 years of suspension.
Please Wait while comments are loading...