ನ್ಯೂಜಿಲೆಂಡಲ್ಲಿ ಅಫ್ರಿದಿ ಊಟದ ಬಿಲ್ ಕಟ್ಟಿದ್ದು ಯಾರು?

Posted By:
Subscribe to Oneindia Kannada

ಕರಾಚಿ, ಜ. 12: ಪಾಕಿಸ್ತಾನದ ಟಿ20 ನಾಯಕ ಶಹೀದ್ ಅಫ್ರಿದಿ ಅವರು ನ್ಯೂಜಿಲೆಂಡ್ ಪ್ರವಾಸದಲ್ಲಿದ್ದಾಗ ಅವರ ಊಟದ ಬಿಲ್ ವೊಂದನ್ನು ಅಭಿಮಾನಿಯೊಬ್ಬರು ಕಟ್ಟಿದ್ದು ಈಗ ಚರ್ಚೆಯ ವಿಷಯವಾಗಿದೆ. ಸ್ಥಳೀಯ ಕರೆನ್ಸಿ ಇಲ್ಲದೆ ಕಂಗಲಾಗಿದ್ದ ಅಫ್ರಿದಿಗೆ ಅಭಿಮಾನಿಯೊಬ್ಬರು ನೆರವಾದ ಘಟನೆಗೆ ರೆಕ್ಕೆ ಪುಕ್ಕ ಕಟ್ಟಿ ವರದಿ ಮಾಡಿದ ಮಾಧ್ಯಮಗಳ ವಿರುದ್ಧ ಅಫ್ರಿದಿ ಕಿಡಿಕಾರಿದ್ದಾರೆ.

ಆಕ್ಲೆಂಡ್ ನ ಫಾಸ್ಟ್ ಫುಡ್ ಕೇಂದ್ರಕ್ಕೆ ಹೋಗಿದ್ದ ಅಫ್ರಿದಿ ಅವರು ಸ್ಥಳೀಯ ಕರೆನ್ಸಿ ಬದಲಿಗೆ ಯುಎಸ್ ಡಾಲರ್ ಹಿಡಿದುಕೊಂಡು ಅತ್ತಿತ್ತ ನೋಡತೊಡಗಿದ್ದಾರೆ. ಆಕ್ಲೆಂಡ್ ನ ವಿಮಾನ ನಿಲ್ದಾಣದಲ್ಲಿರುವ ಮೆಕ್ ಡೋನಾಲ್ಡ್ ರೆಸ್ಟೋರೆಂಟ್ ನಲ್ಲಿ ಜನವರಿ 11ರಂದು ಈ ಘಟನೆ ನಡೆದಿದೆ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಅಫ್ರಿದಿ ಅವರ ಬಿಲ್ ಪಾವತಿಸಿದ್ದಾರೆ.[ಅಫ್ರಿದಿ ಜತೆ ಸೆಕ್ಸ್; ಫತ್ವಾಗೆ F**K ಆಫ್ ಎಂದ ನಟಿ]

Fan pays Shahid Afridi's meal bill at New Zealand airport

ಅಫ್ರಿದಿ ಹಾಗೂ ಸಹ ಆಟಗಾರ ಅಹ್ಮದ್ ಶೆಹಜಾದ್ ಅವರು ಅಭಿಮಾನಿ ವಕಾಸ್ ನವೀದ್ ಎಂಬುವವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಈ ಮುಜುಗರದ ಪರಿಸ್ಥಿತಿಯನ್ನು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿರುವ ಬಗ್ಗೆ ಅಫ್ರಿದಿ ಬೇಸರ ವ್ಯಕ್ತಪಡಿಸಿ, ಇಡೀ ಘಟನೆಯನ್ನು ಯಾರೋ ಒಬ್ಬರು ರೆಕಾರ್ಡ್ ಮಾಡಿ ಮಾಧ್ಯಮಗಳಿಗೆ ನೀಡಿದ್ದು ಸರಿಯಲ್ಲ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಭಿಮಾನಿ, ನಾನು ಪಾಕಿಸ್ತಾನ ಹಾಗೂ ಅಫ್ರಿದಿ ಅವರ ಅಭಿಮಾನಿ ಇದು ನನ್ನ ರೀತಿಯಲ್ಲಿ ನಾನು ಅವರಿಗೆ ಸ್ವಾಗತ ಕೋರಿದ್ದೇನೆ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pakistan Twenty20 captain Shahid Afridi was saved of much embarrassment when a fan stepped in to pay for his meal at a fast food joint in Auckland after the flamboyant cricketer realised that he was not carrying local currency.
Please Wait while comments are loading...