ಚೆಂಡು ವಿರೂಪ: ಡು ಪ್ಲೆಸಿಸ್ ಮೇಲಿನ ಆರೋಪ ಸಾಬೀತು

Posted By:
Subscribe to Oneindia Kannada

ಅಡಿಲೇಡ್, ನವೆಂಬರ್ 22: ದಕ್ಷಿಣ ಆಫ್ರಿಕಾದ ಟೆಸ್ಟ್ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಅವರಿಗೆ 'ಚೆಂಡು ವಿರೂಪ' (ball tampering) ಆರೋಪ ಸಾಬೀತಾಗಿದೆ. ಹೋಬಾರ್ಟ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ವೇಳೆ ಐಸಿಸಿ ನಿಯಮ ಮೀರಿ ಚೆಂಡನ್ನು ತೀಡುತ್ತಿದ್ದ ದೃಶ್ಯಗಳ ಸಾಕ್ಷಿ ಆಧಾರಿಸಿ ಡುಪ್ಲೆಸಿಸ್ ಗೆ ದಂಡ ವಿಧಿಸಲಾಗಿದೆ.

ಐಸಿಸಿ ನಿಯಮ 2.2.9 ಹಾಗೂ 42.3 ಮೀರಿರುವುದು ಕಂಡು ಬಂದಿದೆ. ಹೀಗಾಗಿ ಕ್ರಮ ಜರುಗಿಸಬೇಕಿದೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ರಿಚರ್ಡ್ ಸನ್ ಹೇಳಿದ್ದರು. ಅದರಂತೆ ಆಂಡಿ ಪೈಕ್ರಾಫ್ಟ್ ನೇತೃತ್ವದ ಎಲೈಟ್ ಅಂಪೈರ್ ಗಳ ಸಮಿತಿ ನಡೆಸಿದ ಪರಿಶೀಲನೆಯಲ್ಲಿ ಡು ಪ್ಲೆಸಿಸ್ ತಪ್ಪೆಸಗಿರುವುದು ಕಂಡು ಬಂದಿದೆ.

Faf du Plessis found guilty of ball tampering, fined 100% of match fee

ಟಿವಿ ಫುಟೇಜ್ ಗಳ ಪ್ರಕಾರ ಡುಪ್ಲೇಸಿಸ್ ಅವರು ಎಂಜಲು ಹಾಕಿ ನಂತರ ಮಿಂಟ್ ಅಥವಾ ಸಿಹಿ ಪದಾರ್ಥವೊಂದನ್ನು ಚೆಂಡಿಗೆ ಹಾಕಿ ತಿಕ್ಕಿದ್ದಾರೆ. ಇದು ಐಸಿಸಿ ನಿಯಮಕ್ಕೆ ವಿರೋಧವಾಗಿದೆ.

ಡುಪ್ಲೆಸಿಸ್ ವಿರುದ್ಧ ಆರೋಪ ಸಾಬೀತಾಗಿರುವುದರಿಂದ ಪಂದ್ಯದ ಶೇ 100ರಷ್ಟು ಸಂಭಾವನೆ ಕಡಿತಗೊಂಡಿದೆ ಹಾಗೂ ಎರಡರಿಂದ ಮೂರು ಅಂಕಗಳ ಕಡಿತವಾಗಲಿದೆ (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
South Africa captain Faf du Plessis has been found guilty of breaching Article 2.2.9 of the ICC Code of Conduct following a hearing before Andy Pycroft of the Elite Panel of ICC Match Referees in Adelaide. He is fined 100 per cent of his match fee after being charged with ball tampering.
Please Wait while comments are loading...