ಧೋನಿ, ಕೊಹ್ಲಿ ಪಾಕಿಸ್ತಾನಕ್ಕೆ ಹೋದರೆ ಏನಾಗುತ್ತೆ?

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ನವದೆಹಲಿ, ಮಾರ್ಚ್ 15: ಪಾಕಿಸ್ತಾನದಲ್ಲಿ ಸಿಗದ ಪ್ರೀತಿ, ವಿಶ್ವಾಸ ಭಾರತದಲ್ಲಿ ಸಿಗುತ್ತದೆ ಎಂದು ಭಾರತವನ್ನು ಹೊಗಳಿ ಪಾಕ್ ಕ್ರಿಕೆಟ್ ತಂಡದ ನಾಯಕ ಶಾಹಿದ್ ಆಫ್ರಿದಿ ಅನುಭವಿಸಿದ್ದು ತಿಳಿದಿರಬಹುದು. ಈಗ ಕ್ರಿಕೆಟ್ ದಿಗ್ಗಜ ವಾಸಿಂ ಅಕ್ರಂ ಅವರು ಟೀಂ ಇಂಡಿಯಾದ ನಾಯಕ ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಅವರನ್ನು ಹಾಡಿ ಹೊಗಳಿದ್ದಾರೆ. ಇಬ್ಬರು ಪಾಕಿಸ್ತಾನ ಹೋದರೆ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ವಿವರಿಸಿದ್ದಾರೆ.[ಅಫ್ರಿದಿ ಮೇಲೆ ಮಿಯಾಂದಾದ್ ಗರಂ]

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರು ಪಾಕಿಸ್ತಾನಕ್ಕೆ ಬಂದರೆ ಅವರನ್ನು ನೋಡಲು ಅಭಿಮಾನಿಗಳು ಕಿಕ್ಕಿರಿದು ಸೇರುತ್ತಾರೆ. ಜೊತೆಗೆ ಪಾಕಿಸ್ತಾನದಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗುವುದಂತೂ ಗ್ಯಾರಂಟಿ ಎಂದು ಪಾಕ್ ಮಾಜಿ ಆಟಗಾರ ವಾಸೀಂ ಅಕ್ರಮ್ ಇಂಡಿಯಾ ಟುಡೇ ಟಿವಿ ಸಂದರ್ಶನದಲ್ಲಿ ಹೇಳಿ ಆಶ್ಚರ್ಯವನ್ನುಂಟು ಮಾಡಿದ್ದಾರೆ. [ವಿಶ್ವ ಟಿ20 ಪಾಕಿಸ್ತಾನ ತಂಡಕ್ಕೆ ಅಫ್ರಿದಿ ನಾಯಕ]

Expect huge queues, traffic jams if Virat Kohli and MS Dhoni visit Pakistan: Wasim Akram

ನಮ್ಮ ಮೇಲೆ ಭಾರತೀಯರ ಪ್ರೀತಿ ಎಷ್ಟಿದೆ ಎಂಬುವುದಕ್ಕೆ 1999 ರಲ್ಲಿ ಚೆನೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಪಾಕಿಸ್ತಾನ ಸೋಲಿಸಿದಾಗ ಭಾರತೀಯ ಅಭಿಮಾನಿಗಳು ಎದ್ದು ನಿಂತು ಅಭಿನಂದನೆಗಳನ್ನು ಸಲ್ಲಿಸಿರುವುದೇ ಅವರು ನೀಡಿದ್ದ ಪ್ರೀತಿಗೆ ಸಾಕ್ಷಿಯಾಗಿತ್ತು ಎಂದು ಅಕ್ರಮ್ ಭಾರತದ ಅಭಿಮಾನಿಗಳನ್ನು ಕೊಂಡಾಡಿದ್ದಾರೆ.[ಭಾರತ ಪರ ಅಭಿಮಾನ ಹೇಳಿಕೆ, ಅಫ್ರಿದಿಗೆ ನೋಟಿಸ್]

ಮೊನ್ನೇ ಅಷ್ಟೇ ಭಾರತವನ್ನು ಹೊಗಳಿದ್ದ ಶೋಯಬ್ ಮಲ್ಲಿಕ್ ಮತ್ತು ಅಫ್ರಿದಿ ಅವರು ಪಾಕ್ ಹಿರಿಯ ಕ್ರಿಕೆಟಿಗ ಮಿಯಾಂದಾದ್ ಅವರಿಂದ ಛೀಮಾರಿಗೆ ಒಳಗಾಗಿದ್ದರು.ಈಗ ವಾಸೀಂ ಅಕ್ರಮ್ ಸಹ ಭಾರತವನ್ನು ಹೊಗಳುವ ಮೂಲಕ ಮಿಯಾಂದಾದ್ ಅವರಿಗೆ ತಿರುಗೇಟು ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cricket legend Wasim Akram said that if Virat Kohli and MS Dhoni travel to Pakistan, there will be huge queues and traffic blocks in the country to catch a glimpse of them.
Please Wait while comments are loading...