ಹರ್ಭಜನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಮಾಜಿ ಪೈಲಟ್

Posted By:
Subscribe to Oneindia Kannada

ಮುಂಬೈ, ಜೂನ್ 19: ಕ್ರಿಕೆಟರ್ ಹರ್ಭಜನ್ ಸಿಂಗ್ ಅವರು ಮಾಡಿದ ಆರೋಪದಿಂದ ಉದ್ಯೋಗ ಕಳೆದುಕೊಂಡಿರುವ ಜೆಟ್ ಏರ್ ವೇಸ್ ನ ಮಾಜಿ ಪೈಲಟ್ ರೊಬ್ಬರು ಈಗ ತಿರುಗಿ ಬಿದ್ದಿದ್ದಾರೆ.

ಹರ್ಭಜನ್ ಅವರು ನನ್ನ ಮೇಲೆ ಸುಳ್ಳು ಆರೋಪ ಹೊರೆಸಿದ್ದಾರೆ ಎಂದು ಹೇಳಿ, ಹರ್ಭಜನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ.

Expat pilot sends legal notice to Harbhajan Singh, Jet Airways

ಹರ್ಭಜನ್ ಸಿಂಗ್ ಅವರು ಬೆರ್ಡ್ ಹೋಸ್ಲಿನ್ ಎಂಬ ವಿದೇಶಿ ಪೈಲಟ್ ವಿರುದ್ಧ ಜನಾಂಗೀಯ ನಿಂದನೆ ಆರೋಪ ಹೊರೆಸಿದ್ದರು.ಈ ಕುರಿತಂತೆ ಪ್ರಧಾನಿ ಮೋದಿ ಅವರಿಗೂ ಪತ್ರ ಬರೆದಿದ್ದರು. ಸರಣಿ ಟ್ವೀಟ್ ಮೂಲಕ ಜೆಟ್ ಏರ್ ವೇಸ್ ನಲ್ಲಾದ ಘಟನೆಯನ್ನು ವಿವರಿಸಿದ್ದರು.

ಪೈಲಟ್ ಜನಾಂಗೀಯ ನಿಂದನೆ: ಪಿಎಂಗೆ ದೂರು ಸಲ್ಲಿಸಿದ ಭಜ್ಜಿ

ಆದರೆ, ಸುಳ್ಳು ಆರೋಪ ಹೊರೆಸಿರುವ ಹರ್ಭಜನ್ ಹಾಗೂ ಅವರ ಸಹ ಪ್ರಯಾಣಿಕರು ಮತ್ತು ಜೆಟ್ ಏರ್ ವೇಸ್ ವಿರುದ್ಧ ಮಾಜಿ ಪೈಲಟ್ ಪರ ವಕೀಲರು ನೋಟಿಸ್ ಜಾರಿ ಮಾಡಿದ್ದಾರೆ.


ಕಳೆದ ಏಪ್ರಿಲ್ 6ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ದಿವ್ಯಾಂಗರೊಬ್ಬರ ಜತೆ ಪೈಲಟ್ ಸರಿಯಾಗಿ ನಡೆದುಕೊಳ್ಳದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ವಿಮಾನದಿಂದ ಹೊರಕ್ಕೆ ಹೋಗುವಂತೆ ಕೂಗಾಡಿದ್ದರು ಎಂದು ಹರ್ಭಜನ್ ಆರೋಪಿಸಿದ್ದರು. ಇದಾದ ಬಳಿಕ ಆ ಪೈಲಟ್ ಜತೆಗಿನ ಒಪ್ಪಂದ ವನ್ನು ಜೆಟ್ ಏರ್ ವೇಸ್ ಕಡಿದುಕೊಂಡಿತ್ತು.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A former expat pilot with the Jet Airways, sacked for allegedly making racial comments, has sent a defamation notice to cricketer Harbhajan Singh, besides two passengers whose "false complaint" cost him his job.
Please Wait while comments are loading...