ವಿರಾಟ್ ಕೊಹ್ಲಿ ಆಟಕ್ಕೆ ಫಿದಾ ಆದ್ರು ಸೆಹ್ವಾಗ್ ಅವರ ಮಕ್ಕಳು

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ನವದೆಹಲಿ, ಮಾರ್ಚ್ 22: 'ವಿರಾಟ್ ಕೊಹ್ಲಿ ಕ್ರೀಸಿಗೆ ಬಂದರೆ ಸಾಕು, ಬೇರೆ ಚಾನೆಲ್ ಬದಲಾಯಿಸುವ ಮಾತೇ ಇಲ್ಲ. ನನ್ನ ಮಕ್ಕಳ ಕೈಲಿ ರಿಮೋಟ್ ಭದ್ರವಾಗಿ ಬಿಡುತ್ತೆ. ಕೊಹ್ಲಿ ಆಟವನ್ನು ಎವೆಯಿಕ್ಕದೆ ನೋಡುತ್ತಾರೆ, ಅವರ ಜೊತೆಗೆ ನಾನು ಕೂಡಿಕೊಳ್ಳುತ್ತೇನೆ' ಎಂದು ಕ್ರಿಕೆಟ್ ದಿಗ್ಗಜ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಭಾರತ ಕ್ರಿಕೆಟ್ ತಂಡದ ದೆಹಲಿಯ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರ ಸ್ಟೈಲೀಶ್ ಆಟಕ್ಕೆ ಯಾರೆಲ್ಲಾ ಫಿಧಾ ಆಗೋಲ್ಲ ಹೇಳಿ, ಭಾರತದ ತಂಡದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಫಿಧಾ ಅಗಿದ್ದಲ್ಲದೆ ಅವರ ಮಕ್ಕಳೂ ಸಹ ಕೊಹ್ಲಿ ಆಟಕ್ಕೆ ಮಾರು ಹೋಗಿದ್ದಾರಂತೆ ಹೀಗೆಂದು ಸ್ವತಃ ಸೆಹ್ವಾಗ್ ಅವರೇ ತಿಳಿಸಿದ್ದಾರೆ.

ವಿರಾಟ್ ಬ್ಯಾಟ್ ಮಾಡಲು ಕ್ರೀಸ್ ಗೆ ಬಂದ್ರೆ ಸಾಕು ನನ್ನ ಮಕ್ಕಳು ಟಿ.ವಿ ಬಿಟ್ಟು ಕದಲುವುದೇ ಇಲ್ಲ ಅಷ್ಟರ ಮಟ್ಟಿಗೆ ಕೊಹ್ಲಿ ತಮ್ಮ ಆಟದಿಂದ ಮೋಡಿ ಮಾಡಿ ಬಿಟ್ಟಿದ್ದಾರೆಂದು ಭಾರತದ ಮಾಜಿ ಕ್ರಿಕೆಟಿಗ ಸೆಹ್ವಾಗ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ಅವರ ಆಟ ನೋಡುವುದೇ ಒಂದು ಅದ್ಭುತ ಟಿ.ವಿ ಆಫ್ ಮಾಡಲು ಮನಸ್ಸಾಗುವುದಿಲ್ಲ ಎಂದು ಸೆಹ್ವಾಗ್ ಅವರು ಹೇಳಿದ್ದಾರೆ.

ಮಾರ್ಚ್ 19 ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಭಾರತಕ್ಕೆ ಗೆಲವು ತಂದುಕೊಟ್ಟ ವಿರಾಟ್ ಅವರ ಆಟಕ್ಕೆ ಸೆಹ್ವಾಗ್ ಫಿಧಾ ಆಗ್ಬಿಟ್ಟಿದ್ದಾರೆ.

ಮಾರ್ಚ್ 23 ರಂದು ಬೆಂಗಳೂರಿನಲ್ಲಿ ಭಾರತ-ಬಾಂಗ್ಲಾ ತಂಡದ ವಿರುದ್ಧ ಗೆದ್ದೆ ಗೆಲ್ಲುತ್ತದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಸಚಿನ್ ಅವರು 40 ವಯಸ್ಸಿನವರೆಗೆ ಕ್ರಿಕೆಟ್ ಆಡಿದ್ದಾರೆ ಧೋನಿಗೆ ಇನ್ನೂ 34 ವರ್ಷ ಹಾಗಾಗಿ ಅವರು ಇನ್ನೂ 4 ವರ್ಷ 2019 ರ ವಿಶ್ವ ಕಪ್ ವರೆಗೆ ಭಾರತ ತಂಡದಲ್ಲಿ ಮುಂದುವರೆಲಿ ಎಂದು ಸೆಹ್ವಾಗ್ ಧೋನಿ ಅವರಿಗೆ ಉಪದೇಶ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Showering praise on India's prolific middle-order batsman, Virat Kohli, former India opener Virender Sehwag has said even his kids can't move away from the TV set when the batting star is at the crease.
Please Wait while comments are loading...