ಇಂಗ್ಲೆಂಡ್ ಕ್ರಿಕೆಟರ್ ಗೆ ಬಲವಂತದ ನಿವೃತ್ತಿ ಶಿಕ್ಷೆ ಏಕೆ?

Posted By:
Subscribe to Oneindia Kannada

ಲಂಡನ್, ಏಪ್ರಿಲ್ 12: ಇಂಗ್ಲೆಂಡಿನ ಯುವ ಪ್ರತಿಭಾವಂತ ಟೆಸ್ಟ್ ಕ್ರಿಕೆಟರ್ ರೊಬ್ಬರು ಬಲವಂತವಾಗಿ ನಿವೃತ್ತಿ ಹೊಂದಬೇಕಾದ ಶಿಕ್ಷೆಗೆ ಗುರಿಯಾಗಿದ್ದಾರೆ. ಬಲಗೈ ಬ್ಯಾಟ್ಸ್ ಮನ್ ಜೇಮ್ಸ್ ಟೇಲರ್ ಅವರು ತೀವ್ರವಾದ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದು, ಅನಿವಾರ್ಯವಾಗಿ ಅಕಾಲಿಕ ನಿವೃತ್ತಿ ಪಡೆದುಕೊಳ್ಳಬೇಕಿದೆ.

ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಮಂಗಳವಾರ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, 26 ವರ್ಷ ವಯಸ್ಸಿನ ನ್ಯಾಟಿಂಗ್ ಹ್ಯಾಮ್ ಶೈರ್ ನ ಬಲಗೈ ಬ್ಯಾಟ್ಸ್ ಮನ್ ಜೇಮ್ಸ್ ಟೇಲರ್ ಅವರ ವೃತ್ತಿ ಬದುಕಿಗೆ ಅನಿವಾರ್ಯವಾಗಿ ವಿದಾಯ ಹೇಳಬೇಕಿದೆ ಎಂದು ತಿಳಿಸಲಾಗಿದೆ.[ಕ್ರಿಕೆಟ್ ದುರಂತ: ಇಂಗ್ಲೆಂಡ್ ವಿಕೆಟ್ ಕೀಪರ್ ವೃತ್ತಿ ಅಂತ್ಯ]


ಕಳೆದ ವಾರದ ಕೇಂಬ್ರಿಡ್ಜ್ ಎಂಸಿಸಿಯು ವಿರುದ್ಧದ ಪಂದ್ಯಕ್ಕೂ ಮುನ್ನ ಅಸ್ವಸ್ಥಗೊಂಡಿದ್ದ ಟೇಲರ್ ಅವರು ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದಾಗ ಆಘಾತಕಾರಿ ವಿಷಯ ತಿಳಿದು ಬಂದಿದೆ.[ಮಾರ್ಕ್ ಬೌಚರ್ ಕ್ರಿಕೆಟ್ ಜೀವನ ದುರಂತ ಅಂತ್ಯ]

ಜೇಮ್ಸ್ ಟೇಲರ್ ಅವರು ಇಂಗ್ಲೆಂಡ್ ಪರ 7 ಟೆಸ್ಟ್ ಪಂದ್ಯ ಹಾಗೂ 27 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. 2011ರಲ್ಲಿ ಒಡಿಐ ಹಾಗೂ 2012ರಲ್ಲಿ ಟೆಸ್ಟ್ ತಂಡವನ್ನು ಸೇರಿದ್ದರು.ಬಲವಂತದ ನಿವೃತ್ತಿ ಬಗ್ಗೆ ಜೇಮ್ಸ್ ಟೇಲರ್ ಕೂಡಾ ಟ್ವೀಟ್ ಮಾಡಿ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.

ARVC ಸಮಸ್ಯೆಯಿಂದ ಬಳಲುತ್ತಿರುವ ಜೇಮ್ಸ್

ARVC ಸಮಸ್ಯೆಯಿಂದ ಬಳಲುತ್ತಿರುವ ಜೇಮ್ಸ್

ARVC (Arrhythmogenic Right Ventricular Arrhythmia) ಎಂದು ಕರೆಯುವ ಹೃದಯಸಂಬಂಧಿ ಕಾಯಿಲೆಗೆ ತುತ್ತಾಗಿದ್ದಾರೆ ಎಂದು ಮಂಗಳವಾರ (ಏಪ್ರಿಲ್ 12) ರಂದು ಇಸಿಬಿ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

ಜೇಮ್ಸ್ ಟೇಲರ್ ದುಃಖ ತೋಡಿಕೊಂಡಿದ್ದಾರೆ

ಜೇಮ್ಸ್ ಟೇಲರ್ ದುಃಖ ತೋಡಿಕೊಂಡು ಟ್ವೀಟ್ ಮಾಡಿದ್ದು ಹೀಗೆ...

ಅಲೆಕ್ ಸ್ಟೀವರ್ಟ್ ಟ್ವೀಟ್

ಇಂಗ್ಲೆಂಡಿನ ಮಾಜಿ ವಿಕೆಟ್ ಕೀಪರ್ ಅಲೆಕ್ ಸ್ಟೀವರ್ಟ್ ಟ್ವೀಟ್.

ಮಾಜಿ ಆಟಗಾರ ಆಂಡ್ರ್ಯೂ ಫ್ಲಿಂಟಾಫ್

ಮಾಜಿ ಆಟಗಾರ ಆಂಡ್ರ್ಯೂ ಫ್ಲಿಂಟಾಫ್ ಅವರು ಟ್ವೀಟ್ ಮಾಡಿ, ಇದು ನಿಜಕ್ಕೂ ಆಘಾತಕಾರಿ ವಿಷಯ ಎಂದಿದ್ದಾರೆ.

ಮಾಜಿ ನಾಯಕ ಮೈಕಲ್ ವಾಗನ್

ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾಗನ್ ಅವರು ಟ್ವೀಟ್ ಮಾಡಿದ್ದು ಹೀಗೆ...

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
England's young Test batsman James Taylor has been forced to retire from cricket due to a "serious heart condition".
Please Wait while comments are loading...