ಇಂಗ್ಲೆಂಡ್ ಸರಣಿಗೆ ತಂಡ ಪ್ರಕಟ, ಕೊಹ್ಲಿ ನಾಯಕ, ಯುವರಾಜ್ ಇನ್

Posted By:
Subscribe to Oneindia Kannada

ಬೆಂಗಳೂರು, ಜನವರಿ 06: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೂರು ಏಕದಿನ ಕ್ರಿಕೆಟ್ ಪಂದ್ಯಗಳಿಗೆ ಭಾರತ ತಂಡವನ್ನು ಶುಕ್ರವಾರ ಮಧ್ಯಾಹ್ನ ಪ್ರಕಟಿಸಲಾಗಿದೆ. ಎಂಎಸ್ ಕೆ ಪ್ರಸಾದ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿರುವ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕರಾಗಿದ್ದರೆ, ಧೋನಿ ಅವರು ಆಟಗಾರನಾಗಿ ತಂಡದಲ್ಲಿ ಉಳಿದಿದ್ದಾರೆ. ಯುವರಾಜ್ ಸಿಂಗ್ ಹಾಗೂ ಆಶೀಶ್ ನೆಹ್ರಾ ತಂಡಕ್ಕೆ ಮರಳಿದ್ದಾರೆ.

ಏಕದಿನ ಅಂತಾರಾಷ್ಟ್ರೀಯ ತಂಡ ಹಾಗೂ ಟ್ವೆಂಟಿ20 ತಂಡಕ್ಕೆ ನಾಯಕರಾಗಿದ್ದ ಧೋನಿ ಅವರು ಬುಧವಾರ(ಜನವರಿ 04) ದಂದು ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದರು.[ಏಕದಿನ, ಟಿ20 ಸರಣಿಗೆ ಫುಲ್ ಗೈಡ್]

ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಟಿ20 ಪಂದ್ಯಕ್ಕೆ 15 ಮಂದಿ ತಂಡವನ್ನು ಪ್ರಕಟಿಸಲಾಗಿದೆ. ಜನವರಿ 15 ರಂದು ಪುಣೆಯಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು 4-0 ಅಂತರದಲ್ಲಿ ಗೆದ್ದಿರುವ ಕೊಹ್ಲಿ ಪಡೆ, ಈಗ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನಾಡಲಿದೆ. ಏಕದಿನ ಹಾಗೂ ಟಿ20 ಎರಡು ತಂಡಕ್ಕೂ ಕರ್ನಾಟಕದ ಕೆಎಲ್ ರಾಹುಲ್, ಮನೀಶ್ ಪಾಂಡೆ ಆಯ್ಕೆಯಾಗಿದ್ದಾರೆ.

ಟೆಸ್ಟ್ ನಲ್ಲಿ ದಾಖಲೆ ತ್ರಿಶತಕ ಸಿಡಿಸಿದ್ದ ಕರ್ನಾಟಕದ್ ಕರುಣ್ ನಾಯರ್ ಗೆ ಭಾರತ ಎ ತಂಡದಲ್ಲೂ ಸ್ಥಾನ ಸಿಕ್ಕಿಲ್ಲ. ರಣಜಿ ನಾಯಕ ವಿನಯ್ ಕುಮಾರ್ ಅವರು ಇಂಗ್ಲೆಂಡ್ ವಿರುದ್ಧದ ಒಂದು ಅಭ್ಯಾಸ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ. (ಒನ್ಇಂಡಿಯಾ ಸುದ್ದಿ)

ಹೊಸ ಅಧ್ಯಾಯ ಅರಂಭಗೊಂಡಿದೆ

ಹೊಸ ಅಧ್ಯಾಯ ಅರಂಭಗೊಂಡಿದೆ

ಏಕದಿನ ಹಾಗೂ ಟಿ20 ಎರಡು ತಂಡಕ್ಕೆ ಕೊಹ್ಲಿ ನಾಯಕರಾಗಿದ್ದು, ಹೊಸ ಅಧ್ಯಾಯ ಅರಂಭಗೊಂಡಿದೆ. ಏಕದಿನ ಹಾಗೂ ಟಿ20 ಎರಡು ತಂಡಕ್ಕೂ ಕರ್ನಾಟಕದ ಕೆಎಲ್ ರಾಹುಲ್, ಮನೀಶ್ ಪಾಂಡೆ ಆಯ್ಕೆಯಾಗಿದ್ದಾರೆ. ಸುರೇಶ್ ರೈನಾ ಅವರನ್ನು ಕಡೆಗಣಿಸಲಾಗಿದೆ.

ಏಕದಿನ ಪಂದ್ಯಕ್ಕೆ ತಂಡ ಇಂತಿದೆ

ಏಕದಿನ ಪಂದ್ಯಕ್ಕೆ ತಂಡ ಇಂತಿದೆ

ವಿರಾಟ್ ಕೊಹ್ಲಿ (ನಾಯಕ), ಎಂಎಸ್ ಧೋನಿ( ವಿಕೆಟ್ ಕೀಪರ್), ಕೆಎಲ್ ರಾಹುಲ್, ಶಿಖರ್ ಧವನ್, ಮನೀಶ್ ಪಾಂಡೆ, ಕೇದಾರ್ ಜಾಧವ್, ಯುವರಾಜ್ ಸಿಂಗ್, ಅಜಿಂಕ್ಯ ರಹಾನೆ, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ರವೀಂದ್ರ ಜಡೇಜ, ಅಮಿತ್ ಮಿಶ್ರಾ, ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್.

ಟಿ20 ಪಂದ್ಯಕ್ಕೆ ತಂಡ

ಟಿ20 ಪಂದ್ಯಕ್ಕೆ ತಂಡ

ವಿರಾಟ್ ಕೊಹ್ಲಿ (ನಾಯಕ), ಎಂಎಸ್ ಧೋನಿ( ವಿಕೆಟ್ ಕೀಪರ್), ಕೆಎಲ್ ರಾಹುಲ್, ಮನ್ದೀಪ್ ಸಿಂಗ್, ಯುವರಾಜ್ ಸಿಂಗ್, ಸುರೇಶ್ ರೈನಾ, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್, ಮನೀಶ್ ಪಾಂಡೆ, ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಆಶೀಶ್ ನೆಹ್ರಾ.

ಭಾರತ ಎ ತಂಡ, ಮೊದಲ ಅಭ್ಯಾಸ ಪಂದ್ಯ

ಭಾರತ ಎ ತಂಡ, ಮೊದಲ ಅಭ್ಯಾಸ ಪಂದ್ಯ

ಭಾರತ ಎ ತಂಡ
ಮೊದಲ ಅಭ್ಯಾಸ ಪಂದ್ಯಕ್ಕೆ: ಎಂಎಸ್ ಧೋನಿ (ನಾಯಕ) ಶಿಖರ್ ಧವನ್, ಮನ್ದೀಪ್ ಸಿಂಗ್, ಅಂಬಟಿ ರಾಯುಡು, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ಸಂಜು ಸಾಮ್ಸನ್, ಕುಲದೀಪ್, ಯಜುವೇಂದ್ರ ಚಾಹಲ್, ಆಶೀಶ್ ನೆಹ್ರಾ, ಮೋಹಿತ್ ಶರ್ಮ, ಎಸ್ ಕೌಲ್.

ಎರಡನೇ ಅಭ್ಯಾಸ ಪಂದ್ಯಕ್ಕೆ

ಎರಡನೇ ಅಭ್ಯಾಸ ಪಂದ್ಯಕ್ಕೆ

ಅಜಿಂಕ್ಯ ರಹಾನೆ(ನಾಯಕ) ರಿಷಬ್ ಪಂತ್, ಸುರೇಶ್ ರೈನಾ, ದೀಪಕ್ ಹೂಡಾ, ಇಶಾನ್ ಕಿಶಾನ್, ಎಸ್ ಜಾಕ್ಸನ್, ವಿ ಶಂಕರ್, ನದೀಮ್, ಪರ್ವೇಜ್ ರಸೂಲ್, ವಿನಯ್ ಕುಮಾರ್, ಪ್ರದೀಪ್ ಸಂಗ್ವಾನ್, ಅಶೋ ದಿಂಡಾ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A new era in Indian limited overs cricket began today (January 6) with the appointment of Virat Kohli as the captain. He took over from Mahendra Singh Dhoni, who relinquished the position on Tuesday (January 4). Yuvraj Singh and Ashish Nehra have made comebacks.
Please Wait while comments are loading...