ಕೊಹ್ಲಿಗೆ ಈಗ ಅಜರುದ್ದೀನ್ ದಾಖಲೆ ಮುರಿಯುವ ತವಕ!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 03: ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರು ಮತ್ತೊಂದು ದಾಖಲೆಯ ಬೆನ್ನು ಹತ್ತಿದ್ದಾರೆ. ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿರುವ ಮೊಹಮ್ಮದ್ ಅಜರುದ್ದೀನ್ ಅವರ ದಾಖಲೆಯನ್ನು ಮುಂಬರುವ ಇಂಗ್ಲೆಂಡ್ ಸರಣಿಯನ್ನು ಮುರಿಯುವ ತವಕದಲ್ಲಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ (3-0) ಸಾಧಿಸಿದ ಬಳಿಕ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಗೆ ಟೀಂ ಇಂಡಿಯಾ ಸಜ್ಜಾಗಿದೆ. ರಾಜ್ ಕೋಟ್ ನಲ್ಲಿ ನವೆಂಬರ್ 9ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಕಿವೀಸ್ ವಿರುದ್ಧದ ಸರಣಿ ವಿಜಯದ ಬಳಿಕ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾ ಅಗ್ರಸ್ಥಾನಕ್ಕೇರಿದೆ.

England series: Chance for Virat Kohli to break Azharuddin's record

27 ವರ್ಷ ವಯಸ್ಸಿನ ಬಲಗೈ ಬ್ಯಾಟ್ಸ್ ಮನ್ ಕೊಹ್ಲಿ ಅವರು ನಾಯಕರಾಗಿ 17 ಟೆಸ್ಟ್ ಪಂದ್ಯಗಳಲ್ಲಿ 10 ಪಂದ್ಯ ಗೆದ್ದು, 2 ಸೋತು, 5 ಡ್ರಾ ಸಾಧಿಸಿದ್ದಾರೆ. ಈಗ ಅಲೆಸ್ಟರ್ ಕುಕ್ ಅವರ ಇಂಗ್ಲೆಂಡ್ ವಿರುದ್ಧ 0-5 ಕ್ಲೀನ್ ಸ್ವೀಪ್ ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ.

ನಾಯಕರಾಗಿ ಹೆಚ್ಚು ಗೆಲುವು ಸಾಧಿಸಿದ ಪಟ್ಟಿಯಲ್ಲಿ ಅಜರುದ್ದೀನ್ ಮೂರನೇ ಸ್ಥಾನದಲ್ಲಿದ್ದು 47 ಪಂದ್ಯಗಳಿಂದ 14 ಜಯ ದಾಖಲಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ 4 ಪಂದ್ಯ ಗೆದ್ದರೆ ಅಜರುದ್ದೀನ್ ಸಮಕ್ಕೆ ನಿಲ್ಲಲಿದ್ದಾರೆ.

ಎಂಎಸ್ ಧೋನಿ ಅವರು 60 ಪಂದ್ಯಗಳಿಂದ 27 ಗೆಲುವು ಸಾಧಿಸಿ ಅಗ್ರಸ್ಥಾನದಲ್ಲಿದ್ದರೆ, ಸೌರವ್ ಗಂಗೂಲಿ ಅವರು 49 ಪಂದ್ಯಗಳಿಂದ 21 ಜಯ ದಾಖಲಿಸಿದ್ದಾರೆ. ಕೊಹ್ಲಿ ಅವರು 2014 ರ ಡಿಸೆಂಬರ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಸರಣಿ ಆಡಿದರು. ಭಾರತದ 32ನೇ ನಾಯಕ ಕೊಹ್ಲಿ ಅವರು ಒಂದು ವೇಳೆ ಇಂಗ್ಲೆಂಡ್ ವಿರುದ್ಧ ಉತ್ತಮ ಸಾಧನೆ ತೋರಿಸಲು ಸಾಧ್ಯವಾಗದಿದ್ದರೂ ಚಿಂತೆ ಇಲ್ಲ.

ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಹಾಗೂ ಬಾಂಗ್ಲಾದೇಶ ವಿರುದ್ಧ ಒಂದು ಟೆಸ್ಟ್ ಪಂದ್ಯಗಳು ನಿಗದಿಯಾಗಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's Test captain Virat Kohli has a chance to break former skipper Mohammad Azharuddin's record in the upcoming home series against England.
Please Wait while comments are loading...