ಇಂಗ್ಲೆಂಡ್ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ, ಕರುಣ್ ಇನ್!

Posted By:
Subscribe to Oneindia Kannada

ಮುಂಬೈ, ನವೆಂಬರ್ 02: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಆಯ್ಕೆ ಮಾಡಿದೆ. ಗಾಯಾಳುವಾಗಿದ್ದ ವೇಗಿ ಇಶಾಂತ್ ಶರ್ಮ ತಂಡಕ್ಕೆ ಮರಳಿದ್ದರೆ, ಕರ್ನಾಟಕದ ಕರುಣ್ ನಾಯರ್ ಆಯ್ಕೆಯಾಗಿದ್ದಾರೆ.

ಎಂಎಸ್ ಕೆ ಪ್ರಸಾದ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಆಯ್ಕೆ ಮಾಡಿದೆ.

ಆಯ್ಕೆ ಮಾಡಿರುವ ತಂಡದಲ್ಲಿ ಗಾಯಗೊಂಡಿದ್ದ ಕೆಎಲ್ ರಾಹುಲ್, ಶಿಖರ್ ಧವನ್, ಭುವನೇಶ್ವಕುಮಾರ್ ಅಯ್ಕೆಯಾಗಿಲ್ಲ. ಬದಲಿಗೆ ಗೌತಮ್ ಗಂಭೀರ್ ,ಆಫ್ ಸ್ಪಿನ್ನರ್ ಜಯಂತ್ ಯಾದವ್, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಆಯ್ಕೆ ಅಚ್ಚರಿ ಮೂಡಿಸಿದೆ. [ಬಾಂಗ್ಲಾಕ್ಕೆ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಗೆಲುವಿನ ಸಂಭ್ರಮ]

England series: BCCI announces India squad for first two Tests; Hardik Pandya surprise pick

ತಂಡ ಇಂತಿದೆ: [ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ, ಆಂಡರ್ಸನ್ ಇಲ್ಲ!]
1. ವಿರಾಟ್ ಕೊಹ್ಲಿ (ನಾಯಕ),
2. ಮುರಳಿ ವಿಜಯ್,
3. ಗೌತಮ್ ಗಂಭೀರ್
4. ಕರುಣ್ ನಾಯರ್
5. ಅಜಿಂಕ್ಯ ರಹಾನೆ
6. ಜಯಂತ್ ಯಾದವ್
7. ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್)
8. ಆರ್ ಅಶ್ವಿನ್,
9. ರವೀಂದ್ರ ಜಡೇಜ,
10. ಅಮಿತ್ ಮಿಶ್ರಾ,
11. ಇಶಾಂತ್ ಶರ್ಮ
12. ಹಾರ್ದಿಕ್ ಪಾಂಡ್ಯ
13. ಮೊಹಮ್ಮದ್ ಶಮಿ
14. ಉಮೇಶ್ ಯಾದವ್
15. ಚೇತೇಶ್ವರ್ ಪೂಜಾರಾ,

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ನವೆಂಬರ್ 9ರಿಂದ ರಾಜ್ ಕೋಟ್ ನಲ್ಲಿ ಆರಂಭವಾಗಲಿದೆ. [ಭಾರತಕ್ಕೆ ಇಂಗ್ಲೆಂಡ್ ಪ್ರವಾಸ, ಬೆಂಗ್ಳೂರಲ್ಲಿ 1 ಟಿ20 ಪಂದ್ಯ]


ಬಾಂಗ್ಲಾದೇಶದ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್ ತಂಡ 1-1ರಲ್ಲಿ ಸಮ ಬಲ ಮಾಡಿಕೊಂಡು, ಬುಧವಾರ ಭಾರತಕ್ಕೆ ಆಗಮಿಸಲಿದೆ. ನವೆಂಬರ್ 05ರಂದು ಸಿಪಿಐ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸಲಿದೆ.(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Board of Control for Cricket in India (BCCI) has on Wednesday (Nov 2) announced the 15-member India Test squad for first two Tests in the 5-match home series against England.
Please Wait while comments are loading...