ಪಾಕ್ ವಿರುದ್ಧ ಪಂದ್ಯ ಸೋತರೂ ಮನಗೆದ್ದ ಆಂಗ್ಲ ಕ್ರಿಕೆಟರ್

Posted By:
Subscribe to Oneindia Kannada

ದುಬೈ,ನವೆಂಬರ್ 01: ಪಾಕಿಸ್ತಾನ ವಿರುದ್ಧದ ಟಿ20 ಪಂದ್ಯವನ್ನು ಇಂಗ್ಲೆಂಡ್ ಸೋತರೂ, ಆಂಗ್ಲರ ತಂಡದ ಫೀಲ್ಡರ್ ಎಲ್ಲರ ಗಮನಸೆಳೆದರು. ಲಕ್ಷಾಂತರ ಮಂದಿಯ ಹೃದಯಗೆದ್ದ ಈ ಫೀಲ್ಡರ್ ಲಿಯಾಮ್ ಥಾಮಸ್ ಈಗ ಎಲ್ಲರಿಂದ ಪ್ರಶಂಸೆ ಪಡೆಯುತ್ತಿದ್ದಾರೆ.

ಐಸಿಸಿ ಅಕಾಡೆಮಿ ದುಬೈ ಆಹ್ವಾನಿತ ಟಿ20 ಪಂದ್ಯಾವಳಿಯಲ್ಲಿ ಇಂಗ್ಲೆಂಡಿನ ಅಂಗವಿಕಲ ತಂಡದ ಪರ ಆಡಿದ ಲಿಯಾಮ್ ಅವರು ದುಬೈನ ಮೈದಾನದಲ್ಲಿ ಪಂದ್ಯದ ವೇಳೆ ಫೀಲ್ಡ್ ಮಾಡುವಾಗ ಅವರ ಕೃತಕ ಕಾಲನ್ನು ಕಳಚಿಕೊಂಡಿದ್ದಾರೆ.

England's Liam Thomas loses prosthetic leg while saving a boundary, continues fielding

ಆದರೆ, ಕಾಲು ಕಳಚಿಕೊಂಡರೂ ಕುಂಟುತ್ತಾ ಬೌಂಡರಿ ಗೆರೆ ದಾಟದಂತೆ ಚೆಂಡನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಕುಂಟುತ್ತಲೇ ತಮ್ಮ ಕೃತಕ ಕಾಲಿನ ಕಡೆಗೆ ಬಂದಿದ್ದಾರೆ.

ಈ ಘಟನೆ ಕುರಿತ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಥಾಮಸ್, ನಾನು ಆಗ ಗೊಂದಲದಲ್ಲಿದ್ದೆ. ಮೊದಲಿಗೆ ಚೆಂಡು ತಡೆಯುವುದೋ ಅಥವಾ ನನ್ನ ಕಾಲು ಸರಿ ಪಡಿಸಿಕೊಳ್ಳುವುದೋ ಎಂಬ ಗೊಂದಲದ ನಡುವೆ ಎದ್ದು ನಿಂತೆ. ಚೆಂಡು ತೆಗೆದು ಕೀಪರ್ ಕಡೆಗೆ ಎಸೆಯಲು ನಿರ್ಧರಿಸಿದೆ ಎಂದು ಥಾಮಸ್ ಹೇಳಿದ್ದಾರೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A young England cricketer, Liam Thomas, is winning over millions of hearts with his incredible on-field effort during the finals of the ICC Academy Dubai invitational T20.
Please Wait while comments are loading...